ಸಿದ್ದಾಪುರ: ಸ್ವಚ್ಛ ಭಾರತ್ ಮಿಷನ್  ಯೋಜನೆಯಡಿ ಗ್ರಾಮ ನೈರ್ಮಲ್ಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ‘ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018’ ರ ಕಾರ್ಯಕ್ರಮ ರೂಪಿಸಿದೆ. ಸಿದ್ಧಾಪುರದಲ್ಲಿ ಇಂದು ತಾಲೂಕಾ ಮಟ್ಟದ ” ಸ್ವಚ್ಛ ಸರ್ವೇಕ್ಷಣ 2018 ” ಕಾರ್ಯಾಗಾರಕ್ಕೆ ತಾಲೂಕಾ ಪಂಚಾಯತ್ ಸಭಾಭವನದಲ್ಲಿ ಮಾನ್ಯ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಚಾಲನೆ ನೀಡಿದರು.

RELATED ARTICLES  ಕೈಗಾ ೫ ಹಾಗೂ ೬ನೇ ಘಟಕ ವಿರೋಧಿ ಕಾರ್ಯಾಗಾರ ಸಮಾರಂಭ ಸಭೆಗೆ ಬಂದರೂ ವೇದಿಕೆಯೇರದ ಆನಂದ | ಜಿಲ್ಲೆಯ ಎಲ್ಲಾ ಶಾಸಕರೂ ಬರಲಿ ಎಂದು ಪಟ್ಟು

ನಂತರ ಮಾತನಾಡಿದ ಅವರು ಸರ್ಕಾರದಿಂದ ನಿಯೋಜಿತ ಸರ್ವೆ ಏಜೆನ್ಸಿಯ ತಂಡವು ಗ್ರಾಮಗಳಿಗೆ ಭೇಟಿ ನೀಡಿ ನಿಗದಿಗೊಳಿಸಿದ ಮಾನದಂಡಗಳ ಅನ್ವಯ ಪರಿಶೀಲಿಸಲಿದೆ.  ನೈರ್ಮಲ್ಯದ ಬಗ್ಗೆ ಮೌಲ್ಯಮಾಪನ ಮಾಡಿ ಜಿಲ್ಲೆಗಳಿಗೆ ಶ್ರೇಣಿಯನ್ನು ನೀಡಲಿದ್ದಾರೆ.  ಈ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಬೇಕು. ರಾಷ್ಟ್ರದಲ್ಲೇ  ನಮ್ಮ  ಜಿಲ್ಲೆಗೆ ಅಗ್ರ ಶ್ರೇಣಿ ದೊರೆಯುವಂತೆ ಮಾಡಬೇಕು’ ಎಂದರು.

ಸಾರ್ವಜನಿಕ ಸ್ಥಳಗಳು, ಶಾಲೆಗಳು, ಅಂಗನವಾಡಿ ಕೇಂದ್ರಗಳು, ಸಂತೆ ನಡೆಯುವ ಸ್ಥಳ, ಕುಡಿಯುವ ನೀರು ಸಂಗ್ರಹ ಸ್ಥಳಗಳು, ಪಂಚಾಯಿತಿ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಗ್ರಾಮದ ಮುಖ್ಯ ಬೀದಿಗಳಲ್ಲಿ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಶೌಚಾಲಯಗಳನ್ನು ಸುಸ್ಥಿತಿಯಲ್ಲಿ ಇಡಬೇಕು. ಆಗ ಸ್ವಚ್ಛತೆ ಶುಚಿತ್ವವನ್ನು ಕಾಪಾಡುವುದು ಸಾಧ್ಯವಾಗಲಿದೆ. ಆ ಮೂಲಕ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018  ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದರು. 

RELATED ARTICLES  ವಿಶ್ವದ ಅಗ್ರ 2% ವಿಜ್ಞಾನಿಗಳಲ್ಲಿ ಸ್ಥಾನ ಪಡೆದ ಡಾ.ಅಮರನಾಥ ಹೆಗಡೆ

ಈ ಸಂದರ್ಭದಲ್ಲಿ ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.