ಹೊನ್ನಾವರ :ತಾಲೂಕಿನ ಎಸ್.ಡಿ.ಎಂ. ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ‘ಸುಧನ್ವ ಮೋಕ್ಷ’ ತಾಳಮದ್ದಳೆ ಕಾರ್ಯಕ್ರಮವು ಪ್ರೇಕ್ಷಕರ ಮನ ಗೆದ್ದಿತು. ಮಹಾವಿದ್ಯಾಲಯದ ಉಪನ್ಯಾಸಕರೇ ಈ ಪ್ರಸಂಗದ ಅರ್ಥದಾರಿಗಳಾದದ್ದು ವಿಶೇಷವಾಗಿತ್ತು.

ಡಾ. ಎಂ. ಆರ್. ನಾಯಕ-ಸುಧನ್ವ, ಪ್ರೊ. ಜಿ.ಎಸ್. ಹೆಗಡೆ-ಅರ್ಜುನ, ಪ್ರೊ. ಎಂ. ಜಿ. ಹೆಗಡೆ-ಕೃಷ್ಣ, ಪ್ರೊ. ನಾಗರಾಜ ಹೆಗಡೆ ಅಪಗಾಲ್-ಹಂಸಧ್ವಜ, ಉಪನ್ಯಾಸಕರಾದ ಶ್ರೀ ವಿನಾಯಕ ಭಟ್ಟ-ಪ್ರಭಾವತಿಯಾಗಿ ಕೇಳುಗರ ಮನಸೂರೆಗೊಂಡರು.

RELATED ARTICLES  ಶಾಲೆಯಲ್ಲಿ ಕೊರತೆಯಿದ್ದರೆ ಊರು ಅಭಿವೃದ್ಧಿಯಾಗಿಲ್ಲ ಎಂದೇ ಅರ್ಥ : ಶಾಸಕ ವೈದ್ಯ.

ಹಿಮ್ಮೇಳದಲ್ಲಿ ಶ್ರೀ. ಕೃಷ್ಣ ಭಂಡಾರಿ ಗುಣವಂತೆ ಹಾಗೂ ಶ್ರೀ. ರಾಮ ಹೆಗಡೆ ಕೆರೆಮನೆ ಇವರು ಭಾಗವತರಾಗಿ ಸಹಕರಿಸಿದರು. ಪ್ರಾಚಾರ್ಯರಾದ ಶ್ರೀ. ಎಂ. ಎಚ್. ಭಟ್ಟ ಇವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

RELATED ARTICLES  ಹೊನ್ನಾವರದ ಅಪ್ಸರಕೊಂಡದ ಸಮುದ್ರದ ಅಲೆಗೆ ಪ್ರವಾಸಕ್ಕೆ ಬಂದ ಯುವಕ ಬಲಿ.