ಕುಮಟ: ತಾಲೂಕಿನ ಮಿರ್ಜಾನ ಗ್ರಾಮದ ಕೋಟೆ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಮಹಿಳೆಯೊಬ್ಬಳ್ಳು ಹಪ್ಪಳದ ಮಷೀನ್‌ ನಲ್ಲಿ ಸಿಲುಕಿ ಸಾವನಪ್ಪಿರುವ ಘಟನೆ ಸಂಭವಿಸಿದೆ.

ಘಟನೆಯಲ್ಲಿ ಮಾಲೀನಿ ನಾಯ್ಕ ಮೃತ ಮಹಿಳೆಯಾಗಿದ್ದಾಳೆ. ಈಕೆ ಕಳೆದ ಕೆಲ ವರ್ಷದ ಹಿಂದೆ ಸರಕಾರದಿಂದ ಸಹಾಯ ಧನ ಪಡೆದು ಹಪ್ಪಳದ ಮಷೀನ್ ಖರೀದಿಸಿ ಮನೆಯಲ್ಲಿಯೆ ಹಪ್ಪಳ ಮಾಡಿ ವ್ಯಾಪಾರ ನಡೆಸಿಕೊಂಡು ಬಂದಿದ್ದಾಳೆ. ಮೃತಳು ತನ್ನ ಪತಿ ಮೃತನಾದ ಬಳಿಕ ಹಪ್ಪಳ ಮಾಡಿಕೊಂಡೆ ಜೀವನ ನಡೆಸಿಕೊಂಡು ಬಂದಿದ್ದಳು ಎನ್ನಲಾಗಿದೆ.

RELATED ARTICLES  ಸರಣಿ ಅಪಘಾತ : ಇಬ್ಬರ ಸಾವು : ಮೂವರಿಗೆ ಪೆಟ್ಟು

ಇಂದು ಬೆಳಂಬೆಳ್ಳಿಗೆ ಎಂದಿನಂತೆ ಹಪ್ಪಳ‌ ಮಾಡುತ್ತಿರುವ ಸಮಯದಲ್ಲಿ ಆಕೆ ಏಕಾಏಕಿ ಆ ಮಷೀನ್ ನಲ್ಲಿ ಸಿಕುಕು ಸಾವನಪ್ಪಿದ್ದಾಳೆ ಎನ್ನಲಾಗಿದೆ. ಸ್ಥಳಕ್ಕೆ ಕುಮಟ ಪೊಲೀಸರು ಭೇಟಿ ನೀಡಿದ್ದಾರೆ.

RELATED ARTICLES  ಕುಮಟಾದಲ್ಲಿ ಬಿಜೆಪಿ ತೆಕ್ಕೆಗೆ ಪುರ‌ಸಭೆ: ಜಿದ್ದಾ ಜಿದ್ದಿನ ಹೋರಾಟದ ಫಲಿತಾಂಶ ಪ್ರಕಟ