ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ – ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಂತೆ – ವಿಲಂಬಿ ಸಂವತ್ಸರದ ‘ಯಾಮಪೂಜೆ’ ಕಾರ್ಯಕ್ರಮವು ದಿ 09-08-2018 ಗುರುವಾರ ಮುಂಜಾನೆ ಪ್ರಾರಂಭಗೊಂಡು 10-08-2018 ಶುಕ್ರವಾರ ಮುಂಜಾನೆವರೆಗೆ ರೂಢಿಗತ ಪರಂಪರೆಯಂತೆ ಉಪಾಧಿವಂತ ಮಂಡಳಿಯ ನೇತೃತ್ವ-ಸಹಯೋಗದೊಂದಿಗೆ ಜರುಗಲಿದೆ .

RELATED ARTICLES  ಇಂದಿನ(ದಿ-14/03/2019) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ

ಎಂಟು ಯಾಮಗಳ ಕಾಲ ನಿರಂತರ ರುದ್ರ ಪಠಣ, ನಿರಂತರ ಅಭಿಷೇಕ , ಪ್ರತೀ ಯಾಮದ ಕೊನೆಯಲ್ಲಿ ಒಂದು ವಿಶೇಷ ಪೂಜೆ, ಕೊನೆಯಲ್ಲಿ ದಿನಾಂಕ 10-08-2018 ಶುಕ್ರವಾರ ಮುಂಜಾನೆ ರುದ್ರಹೋಮ ಮತ್ತು ಸಾಯಂಕಾಲ ‘ಹೂವಿನಂಗಿ’ ವಿಶೇಷ ಸೇವೆ ಇರುವುದು . ಲೋಕಕಲ್ಯಾಣಾರ್ಥ ಜರುಗುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ಆಡಳಿಮಂಡಳಿಯವರು ಸರ್ವರಿಗೂ ಆತ್ಮೀಯ ಆಮಂತ್ರಣ ನೀಡಿದ್ದಾರೆ .

RELATED ARTICLES  ಉತ್ತರ ಕನ್ನಡ ಜಿಲ್ಲೆಯ ೮ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಂಪೂರ್ಣ ವಿವರ ಹಾಗೂ ಗೆಲುವಿನ ಅಭ್ಯರ್ಥಿಗಳ ವಿವರ ಇಲ್ಲಿದೆ!