ಕುಮಟಾ: ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ನಗರಾಭಿವೃದ್ಧಿ ಇಲಾಖೆ ಮತ್ತು ಜಿಲ್ಲಾಡಳಿತದೊಂದಿಗೆ ಕಾರವಾರದ ರಂಗಮಂದಿರದಲ್ಲಿ ಜರುಗಿದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿಗಳಾದ ಕುಮಾರ ವಿಶ್ವಾಸ ವೆಂಕಟೇಶ ಪೈ ಮತ್ತು ಕುಮಾರ ಪ್ರಣೀತ ರವಿರಾಜ್ ಕಡ್ಲೆ ಇವರು ದ್ವಿತೀಯ ಸ್ಥಾನ ಪಡೆದಿದ್ದಾರೆ.

RELATED ARTICLES  ರಾಜ್ಯೋತ್ಸವ ಪ್ರಶಸ್ತಿ: ಶಾಂತಾರಾಮ ನಾಯಕರಿಗೆ ಆಹ್ವಾನ ನೀಡಿದ ಜಿಲ್ಲಾ ಕಸಾಪ ಅಧ್ಯಕ್ಷರು.

ಆರೋಗ್ಯಕರ ನಗರಗಳಾಗಿ ರೂಪಾಂತರಿಸುವ ನಿಟ್ಟಿನಲ್ಲಿ ರೂಪಿಸಲಾಗಿರುವ ಸ್ವಚ್ಛ ಭಾರತ ಮಿಷನ್ ವತಿಯಿಂದ ನಗರಾಭಿವೃದ್ಧಿ ಇಲಾಖೆ ಜಿಲ್ಲಾಡಳಿತದೊಂದಿಗೆ ರಾಜ್ಯಾದ್ಯಂತ 8 ರಿಂದ 12 ನೆಯ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಉತ್ತರ ಕನ್ನಡದ 500 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
IMG 20180805 WA0046
ಪ್ರಶಸ್ತಿ ಪತ್ರ ಆರು ಸಾವಿರ ನಗದು ಬಹುಮಾನವನ್ನು ಡಾ.ದಿಲೀಶ್ ಐಎಎಸ್ ಪ್ರೊಬೇಶನರಿ ಅವರಿಂದ ಸ್ವೀಕರಿಸಿದರು. ಇವರ ಸಾಧನೆಗೆ ಮುಖ್ಯಾಧ್ಯಾಪಕ ಎನ್.ಆರ್.ಗಜು ಮತ್ತು ಶಿಕ್ಷಕವೃಂದದವರು ಅಭಿನಂದಿಸಿದ್ದಾರೆ.

RELATED ARTICLES  ಕೆಲವೇ ದಿನದಲ್ಲಿ ಕಾರವಾರದಲ್ಲಿ ಸಿದ್ಧಗೊಳ್ಳಲಿದೆ ‘ವಿನೋದ ವಿಜ್ಞಾನ’ ಎಂಬ ವಿಶೇಷ ವಿಭಾಗ