ಕುಮಟಾ: ಕೆನ್-ಇ-ಮಬುನಿ-ಶಿಟೋ-ರಿಯು-ಕರಾಟೆ ಸ್ಕೂಲ್ ಆಪ್ ಇಂಡಿಯಾ ಉಡುಪಿ ಜಿಲ್ಲೆ ಪ್ರಾಯೋಜಕತ್ವದಲ್ಲಿ, ಉಡುಪಿಯಲ್ಲಿ ನಡೆದ 2 ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮೆರೆದಿದ್ದಾರೆ.
ಬಾಲಕರ ಕಟಾ ಸ್ಪರ್ಧೆಯಲ್ಲಿ ಹರ್ಷ ಡಿ. ಪಟಗಾರ ಮತ್ತು ದರ್ಶನ ಎಸ್. ನಾಯ್ಕ ಹಾಗೂ ಬಾಲಕಿಯರ ಕಟಾ ಸ್ಪರ್ಧೆಯಲ್ಲಿ ಭೂಮಿಕಾ ವಿ. ನಾಯ್ಕ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಬಾಲಕರ ಕುಮಿಟೆ ಸ್ಪರ್ಧೆಯಲ್ಲೂ ಹರ್ಷ ಡಿ.ಪಟಗಾರ ಮತ್ತೊಂದು ಚಿನ್ನದ ಪದಕ ಗಳಿಸಿದ್ದಾರೆ.
ಚಂದನ ಡಿ.ನಾಯ್ಕ, ಸಾಗರ ಎಸ್.ಹರಿಕಂತ್ರ, ಶಶಾಂಕ ಎನ್.ಹರಿಕಂತ್ರ, ನಿರಂಜನ ಎಸ್.ನಾಯ್ಕ, ದರ್ಶನ ಜಿ. ಹರಿಕಂತ್ರ, ನಿಶ್ಚಿತ ಎನ್. ಹಿಣಿ, ಶುಭಾ ಜಿ. ನಾಯ್ಕ, ತನುಜಾ ಎಸ್. ನಾಯ್ಕ, ತನುಜಾ ಡಿ. ಗೌಡ ಇವರುಗಳು ಕಟಾದಲ್ಲಿ ಬೆಳ್ಳಿಯ ಪದಕಗಳಿಸಿದ್ದು ಜಿಲ್ಲೆಗೇ ಕೀರ್ತಿ ತಂದಿದ್ದಾರೆ. ಇವರ ಈ ಸಾಧನೆಗೆ ಶಾಲೆಯಲ್ಲಿ ಕರಾಟೆ ತರಬೇತಿ ನೀಡುತ್ತಿರುವ ದಯಾನಂದ ನಾಯ್ಕ ಹಾಗೂ ದೈಹಿಕ ಶಿಕ್ಷಕ ಎಲ್.ಎನ್.ಅಂಬಿಗ ಅವರಿಗೆ ಮುಖ್ಯಾಧ್ಯಾಪಕ ಎನ್.ಆರ್.ಗಜು ಮತ್ತು ಶಿಕ್ಷಕವರ್ಗದವರು ಅಭಿನಂದಿಸಿದ್ದಾರೆ.