ಕುಮಟಾ:ಗತಕಾಲದ ಇತಿಹಾಸವಿರುವ ಶತಮಾನದ ಇತಿಹಾಸವನ್ನು ಹೊಂದಿರುವ ಕುಮಟಾ ತಾಲೂಕಿನ ಹಿರೇಗುತ್ತಿ ಗ್ರಾಮದಲ್ಲಿ ಸಮಸ್ತ ನಾಗರಿಕರೆಲ್ಲಾ ಸೇರಿ , ಊರಿನ ವಾಸ್ತವಿಕತೆಯನ್ನು ಕುರಿತು ಬ್ರಹತ್ ಸಭೆಯನ್ನು ನಡೆಸಿದರು ಆ ಸಭೆಯಲ್ಲಿ ಪ್ರಸ್ತುತವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮಾಡುವ ಉದ್ದೇಶದಿಂದ ಬ್ರಹ್ಮಜಟಕ ದೇವಸ್ಥಾನದ ಅಕ್ಕ-ಪಕ್ಕದಲ್ಲಿ ಅಂಡರ್ ಪಾಸ್ ಮಾಡಿ ದೇವಸ್ಥಾನದಲ್ಲಿ ಭಕ್ತಾದಿಗಳು ನಡೆಸುವ ಪೂಜಾ ಕಾರ್ಯಕ್ರಮಕ್ಕೆ, ಅಲ್ಲದೇ, ಸಾರ್ವಜನಿಕ ಆಸ್ಪತ್ರೆ ಹಾಗೂ ದನಗಳ ಆಸ್ಪತ್ರೆ, ಹರಿಜನ ಕೇರಿ, ಸಾರ್ವಜನಿಕ ಸ್ಮಶಾನ, ಅರಣ್ಯ ಇಲಾಖೆ ಈ ಎಲ್ಲಾ ಸ್ಥಳಗಳಿಗೆ ಸರಾಗವಾಗಿ ಸಾಗುವುದಕ್ಕೆ ತೊಂದರೆಯನ್ನು ಮಾಡುತ್ತಿದ್ದಾರೆ. ಹಾಗಾಗಿ ಸಮಸ್ಥ ನಾಗರೀಕರೆಲ್ಲರೂ ಸೇರಿ ಒಂದು ಸಮೀತಿಯನ್ನು ಮಾಡಿಕೊಂಡು ಹೊನ್ನಪ. ಎನ್. ನಾಯಕರ (ಮಾಜಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು) ಅಧ್ಯಕ್ಷತೆಯಲ್ಲಿ ಪ್ರಶಾಂತ ನಾಯಕ ಮತ್ತು ಶ್ರೀಕಾಂತ ನಾರಾಯಣ ನಾಯಕ ಇವರ ಮಾರ್ಗದರ್ಶನದಲ್ಲಿ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಒಂದು ಮನವಿಯನ್ನು ನೀಡಲಾಯಿತು.

ಹಾಗೂ ಜಿಲ್ಲಾಧಿಕಾರಿಗಳಲ್ಲಿ ನಮ್ಮ ತೊಂದರೆಯನ್ನು ಅರಿತು ಸಮಸ್ಯೆಗಳನ್ನು ನೀಗಿಸುವುದಕ್ಕೆ ಕೋರಿಕೊಳ್ಳಲಾಗುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಹಾಗೊಂದುವೇಳೆ ಅದನ್ನು ಅಲ್ಲಗಳೆದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದವರು ಈ ಸಮಸ್ಯೆಯನ್ನು ಧಿಕ್ಕರಿಸಿ ಕಾಮಗಾರಿಯನ್ನು ತಮ್ಮಿಷ್ಟದಂತೆ ನಡೆಸಿದರೆ ಮುಂದೆ ಸಮಸ್ಥನಾಗರೀಕರೆಲ್ಲ ಸೇರಿ ಉಗ್ರ ಪ್ರತಿಭಟಿಸುತ್ತೇವೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಕುಮಟಾ ತಾಲೂಕಿನ ಹಲವಾರು ಹಳ್ಳಿಗಳಿವೆ. ಅಂತಹ ಹಲವಾರು ಹಳ್ಳಿಗಳಿಗಿಂತ ಹಿರೇಗುತ್ತಿ ತನ್ನದೇಆದ ವಿಶಿಷ್ಟತೆಯನ್ನು ಹೊಂದಿದೆ.

ಶೈಕ್ಷಣಿಕವಾಗಿ ಬೌದ್ದಿಕವಾಗಿ , ಕೃಷಿ, ಹಾಗೂ ಕೃಷಿಯೇತರ ಚಟುವಟಿಕೆ ಅಲ್ಲದೆ ಕ್ರೀಡೆಯಲ್ಲಿ ತನ್ನದೇ ಆದ ಚಾಪನ್ನು ಹೊಂದಿರುವಂತದ್ದು. ನಮ್ಮ ಪೂರ್ವಿಕರು ಶ್ರಮಪಟ್ಟು ತಾಲ್ಲೂಕೂ ಸ್ಥಳದಿಂದ ಹೊರವಲಯದಲ್ಲಿದ್ದರೂ ಹಿರೇಗುತ್ತಿಗೆ ಸರ್ಕಾರಿ ಇಲಾಖೆಯಿಂದ ನಡೆಸಲ್ಪಡುವ ಸರ್ಕಾರಿ, ಪ್ರಾಥಮಿಕ, ಪ್ರೌಡ, ಪದವಿ ಪೂರ್ವ ಕಾಲೇಜು, ಸಾರ್ವಜನಿಕ ಆಸ್ಪತ್ರೆ, ದನಗಳ ಆಸ್ಪತ್ರೆ, ಅರಣ್ಯ ಇಲಾಖೆ ಕಛೇರಿ, ಗ್ರಾಮ ಚೌಡಿ ಸಂಚಾರಿ ಪೋಲಿಸ್ ಠಾಣೆ, ಅಂಚೆ ಮತ್ತು ತಂತಿ ಕಛೇರಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ, ಕತ್ತದ ಪ್ಯಾಕ್ಟರಿ, ಬ್ಯಾಂಕ್ ಇನ್ನಿತರ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳು ನಮ್ಮ ಊರಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಹಾಗೂ ಧಾರ್ಮಿಕ ಕಾರ್ಯ ಕಲಾಪಗಳನ್ನು ನಡೆಸುವುದಕ್ಕೆ ಶತಮಾನ ದೇವರಾದ ಬೊಮ್ಮಯ್ಯ, ಲಿಂಗಪ್ಪ, ಗ್ರಾಮದೇವತೆಗಳಿಂದ ಹಿರೇ ಹೊಸಬಾ-ಸಣ್ಣ ಹೊಸಬಾ, ಮಹಾಲಿಂಗೇಶ್ವರ, ಬ್ರಹ್ಮ ಜಟಕ, ವೀರಾಂಜನೆಯ ದೇವಸ್ಥಾನಗಳು ಹೆದ್ದಾರಿಯ ಅಂಚಿನಲ್ಲಿ ಇದ್ದು ಗ್ರಾಮದ ಭಕ್ತಾದಿಗಳಿಂದ ತಮಗೆ ಸೇವೆಯನ್ನು ಪಡೆದುಕೊಳ್ಳುತ್ತಿವೆ. ಹೆದ್ದಾರಿಯಂಚಿನಲ್ಲಿ ಊರಿನ ವೈಶಿಷ್ಟವನ್ನು ಹೆಚ್ಚಿಸುವುದಕ್ಕೋಸ್ಕರ ಅನೇಕ ಕಟ್ಟಡಗಳು ಹಳೆಯ ಕಾಲದ ಪುರಾಣದ ಇತಿಹಾಸವನ್ನು ಮರುಕಳಿಸುವ ಇಮಾರತುಗಳು ಹೆದ್ದಾರಿಯ ಪಕ್ಕದಲ್ಲಿ ಕಂಗೊಳಿಸುತ್ತಿವೆ. ಇವೆಲ್ಲವುಗಳ ಅಂದವನ್ನು ಹಾಗೂ ಸಾರ್ವಜನಿಕ ಸಮರ್ಪಕವನ್ನು ಕೆಡಿಸುವುದಕ್ಕೋಸ್ಕರವೇ ಈ ಅಂಡರ್ ಪಾಸ್ ಉದ್ಬವಿಸಿದಂತಿದೆ. ಅಲ್ಲದೇ 50 ವರ್ಷಗಳಿಂದ ಧಾರ್ಮಿಕವಾಗಿ ಹಮ್ಮಿಕೊಳ್ಳುವ ಸಾರ್ವಜನಿಕ ಗಣೇಶೋತ್ಸವ ಸಮೀತಿಯ ಕಟ್ಟಡವೂ ಸಹ ಇರುವುದು. ವಾತ್ಸವ, ಗ್ರಾಮಸ್ಥರ ನಂಬಿಕೆಯಂತೆ ದೇವತೆಗಳಿಗೆ ಸಲ್ಲಿಸಬೇಕಾದ ಹವಿರಬಾಗವನ್ನು ಸಕಾಲದಲ್ಲಿ ಸಲ್ಲಿಸಿದಲ್ಲಿ ದೇವರು ತಮ್ಮ ಇಷ್ಟಾರ್ತವನ್ನು ಈಡೇರಿಸುತ್ತಾನೆ ಎನ್ನುವ ನಂಬಿಕೆಯಿಂದ ಕಾಲ ಕಾಲಕ್ಕೆ ಪೂಜೆ ಪುನಸ್ಕಾರ, ಗ್ರಾಮದೇವರ ಹಬ್ಬವನ್ನು ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವುದು ಸುತ್ತಲಿನ ಹಳ್ಳಗಳಿಗೆಲ್ಲಾ ತಿಳಿದು ಬಂದ ಸತ್ಯ. ಇಂತಹ ಅಭೂತಪೂರ್ವವಾದ ಕಾರ್ಯಕ್ರಮಗಳು ನಾಗರೀಕರ ಉದಾರ ಸೇವಾ ಮನೋಭಾವನೆಯಿಂದ ನಡೆಸುತ್ತಿದ್ದು ಇದು ಹಿರೇಗುತ್ತಿಯ ಊರವರು ಸಹಬಾಳ್ವಯಿಂದ ನಡೆಸುತ್ತಿದ್ದಾರೆ ಎನ್ನುವುದಕ್ಕೆ ಹಿಡಿದ ಕನ್ನಡಿಯ ಹಾಗೆಯೇ ಊರ ಮಧ್ಯಬಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಅನಾಧಿಕಾಲದಿಂದ ಹಾದು ಹೋಗಿದ್ದು ಕಬ್ಬಿನ ಕೋಲಿಗೆ ಹರಳಿದ್ದಂತೆ. ಇಷ್ಟೆಲ್ಲಾ ಇದ್ದಾಗ್ಯೂ ವರ್ತಮಾನದಲ್ಲಿ ಹೆದ್ದಾರಿಯ ಅಗಲೀಕರಣ ಎನ್ನುವ ಭೂತ ಹಿರೇಗುತ್ತಿಯನ್ನು ವಿರೂಪಗೊಳಿಸಿ ಅಖಂಡ ಹಿರೆಗುತ್ತಿಯನ್ನು ಇಬ್ಬಾಗ ಮಾಡುತ್ತಿದೆ ಎಂಬ ಆತಂಕ ಎಲ್ಲರ ಮನದಲ್ಲಿ ಮನೆಮಾಡಿದೆ.

RELATED ARTICLES  ಉತ್ತರಕನ್ನಡದ ಪ್ರಮುಖ ಸುದ್ದಿಗಳು.

ನಾಡಿನ ಅಭ್ಯುದಯಕ್ಕೆ ರಸ್ತೆಯ ಅಗಲೀಕರಣ ಮಾಡಲೇಬೇಕು. ಜನಸಾಂದ್ರತೆ ಹೆಚ್ಚಾದಂತೆ ಸಂಚಾರ, ಸರಕು, ಇವೆಲ್ಲ ತ್ವರಿತಗತಿಯಲ್ಲಿ ಸಾಗಬೇಕಾದರೆ ವಾಹನಗಳ ಸಂಚಾರ ಸುಗಮವಾಗಬೇಕಾದರೆ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹೆದ್ದಾರಿ ಅಗಲೀಕರಣ ಮಾಡಲೇಬೇಕಾದದ್ದು ಸರ್ಕಾರಿ ನಿಯಮ. ಅಂತಹ ನಿಯಮವನ್ನು ಅನುಸರಿಸಿಕೊಂಡು ಇಷ್ಟರಲ್ಲಿ ಮೂಲಭೂತ ಸೌಕರ್ಯವಿರುವ ವಿಸ್ತಾರವಾಗಿ ಹರಡಿಕೊಂಡಿರುವ ಹಿರೇಗುತ್ತಿಯ ಊರನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಬ್ಬಾಗ ಮಾಡುವುದು ಯಾವ ನ್ಯಾಯ ಎಂಬುದು ನಾಗರೀಕತೆಗೆ ಜಟಿಲವಾದ ಪ್ರಶ್ನೆಯಾಗಿದೆ. ಹಾಗಾಗಿ ಇವೆಲ್ಲವನ್ನು ಅರಿತ ಹಿರೇಗುತ್ತಿಯ ಸಮಸ್ಥನಾರೀಕರು ಒಟ್ಟಾಗಿ ಸೇರಿ ದಿ: 04-08-2018 ರಂದು ಗ್ರಾಮ ಪಂಚಾಯತ ಆವರಣದಲ್ಲಿ ಬೃಹತ್ ಸಭೆ ಸೇರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಕಳೆದ ವರ್ಷ ನಮಗೆ ನೀಡಿದ ಎಸ್ಟಿಮೇಟ್ ಯಾಧಿಯನ್ನು ಅವಲೋಕನ ಮಾಡಿದಾಗ ಅನಾದಿಕಾಲದಿಂದ ಬ್ರಹ್ಮ ಜಟಕ ದೇವಸ್ಥಾನ, ಈಶ್ವರ ದೇವಸ್ಥಾನ, ಹಾಗೂ ವೀರಾಂಜನೇಯ ದೇವಸ್ಥಾನಗಳನ್ನು ಉಳಿಸಿ ಹೆದ್ದಾರಿಯ ಅಗಲಿಕರಣ ಮಾಡುವುದಕ್ಕೆ ಅನುಮತಿಯನ್ನು ನೀಡಿದ್ದು ಸತ್ಯವಿರುತ್ತದೆ. ಹಾಗೆಯೇ ರಾಷ್ಟ್ರೀಯ ಹೆದ್ದಾರಿ ಅಗಲಿಕರಣದವರು ಅದನ್ನು ತಿರುಚಿ ಅಂಡರ್ ಪಾಸ್ ವ್ಯವಸ್ಥೆಯನ್ನು ಹಮ್ಮಿಕೊಂಡಿದ್ದು ಕುಮಟಾ ತಾಲೂಕಿನ ಕಲಶಪ್ರಾದಂತಿದ್ದ ಹಿರೇಗುತ್ತಿ ಊರನ್ನು ಬೃಹಾದಾಕಾರವಾದ ಗೋಡೆ ನಿರ್ಮಿಸಿ ಕಳಶವನ್ನೆ ಉರ್ಜಿತಗೊಳಿಸಿದಂತಾಗುತ್ತಿದೆ. ಅಲ್ಲದೇ ಊರಿನ ಮದ್ಯಬಾಗದಲ್ಲಿರುವ ಬಸ್ ನಿಲುಗಡೆ ಸ್ಥಳವನ್ನು ಬದಲಾವಣೆ ಮಾಡಿ ದೂರದ ಪ್ರದೇಶಕ್ಕೆ ಸಾಗಿಸುವುದರಿಂದ ಸಾರ್ವಜನಿಕರಿಗೆ , ವ್ಯಾಸಂಗಮಾಡುವ ವಿದ್ಯಾರ್ಥಿಗಳಿಗೆ ಬಸ್ಸಿಗಾಗಿ ತುಂಬಾ ದೂರ ನಡೆಯಬೇಕಾದ ಪ್ರಮಾಧ ಎದ್ದು ಕಾಣುತ್ತದೆ. ದೇವಸ್ಥಾನದ ಮುಂಬಾಗದಲ್ಲಿ ಗೋಡೆ ನಿರ್ಮಾಣವಾಗಿ ದೇವರ ಮುಖ ಕಟ್ಟಿದಂತಾಗುವುದು. ಅಲ್ಲದೇ ಅಂಡರ್ ಪಾಸ್ ನಿರ್ಮಾಣದ ಗೋಡೆ ಈಶ್ವರ ದೇವಸ್ಥಾನದ ಬಾಗಿಲಿಗೆ ಬರುವುದರಿಂದ ದೇವಸ್ಥಾನದ ದಿನನಿತ್ಯದ ಆಚರಣೆ ಹಾಗೂ ವಾರ್ಷೆಕವಾಗಿ ನಡೆಯುವ ಎಲ್ಲಾ ಹಬ್ಬ ಹರಿದಿನಗಳಿಗೆ ಅಡಚಣೆ ಉಂಟಾಗುವುದು ಸತ್ಯ. ಬಸ್ ನಿಲ್ದಾಣ ಬೇರೆ ಕಡೆ ಸ್ಥಳಾಂತರಗೊಳ್ಳುವುದರಿಂದ ಊರ ಹಾಗೂ ಹೊರ ಊರಿನ ಪ್ರಯಾಣಿಕರಿಗೆ ತೊಂದರೆಯುಂಟಾಗುವುದು. ದೇವಸ್ಥಾನದ ಎದುರುಗಡೆ 18 ಅಡಿ ಎತ್ತರದ ಗೋಡೆ ನಿರ್ಮಾಣವಾಗುವುದರಿಂದ ಇಕ್ಕೆಲಗಳಲ್ಲಿ ಅಭಿವೃದ್ದಿಕಾರ್ಯ ಹಾಗೂ ಕೃಷಿ ಚಟುವಟಿಕೆಗಳು ಕುಂಟಿತಗೊಳ್ಳುವುದು. ಸಂಚಾರಿ ಪೋಲಿಸ್ ಠಾಣೆ ಸ್ಥಳಾಂತರಗೊಂಡು ಅಲ್ಲಿರುವ ಅಂಬ್ಯುಲೆನ್ಸ ಸೇವೆಯನ್ನು ಕಳೆದುಕೊಳ್ಳುವ ಪರಿಸ್ತಿತಿ ಹಿರೇಗುತ್ತಿ ಊರಿನವರಿಗೆ ಬರುವುದಂತು ಸತ್ಯ.

RELATED ARTICLES  ಹೊನ್ನಾವರದಲ್ಲಿ ಪಾದಯಾತ್ರೆ ನಡೆಸಿ ಸೋನಿ ಮತಯಾಚನೆ.

ಈ ಸಭೆಯಲ್ಲಿ ಮಾರುತಿ ಎಚ್. ನಾಯ್ಕ ಮಾಜಿ ಜಿ.ಪಂ. ಸಧಸ್ಯರು ನೀಲಕಂಠ ನಾರಾಯಣ ನಾಯಕ ಅಧ್ಯಕ್ಷರು ವ್ಯವಸಾಯ ಸೇವಾ ಸಹಕಾರಿ ಸಂಘ ಹಿರೇಗುತ್ತಿ ಊರಿನ ಹಿರಿಯರಾದ ಬೊಮ್ಮಯ್ಯ ಪಾಟಿಲನ್ ಶಿವರಾಯ ನಾಯಕ, ಶಾಂತಾ ನಾಯಕ, ಗ್ರಾ.ಪಂ ಹಿರೇಗುತ್ತಿ ಅಧ್ಯಕ್ಷರಾದ ಸಣ್ಣಪ್ಪ ಮಾರುತಿ ನಾಯಕ ಬೊಮ್ಮಯ್ಯ ಬೊಮ್ಮನ್ ಸಣ್ಣಪ್ಪ ಟಿ. ನಾಯಕ, ರಾಮಾ ಗಾಂವಕರ, ಗೋಪಾಲ ನಾಯಕ, ಪೊಪ್ಪಯ್ಯ ಗಾಂವಕರ, ಶ್ರೀದರ ನಾಯಕ, ಸಣ್ಣಪ್ಪ ನಾಯಕ ಬಾಲಿಮನೆ
ದೇವಿದಾಸ ನಾಯಕ ಲಕ್ಷ್ಮಿದರ ಗಾಂವಕರ, ಸೀತಾ ಗಾಂವಕರ, ಯುವಕ ಸಂಘದ ಎಲ್ಲಾ ಪದಾಧಿಕಾರಿಗಳು, ಸ್ತ್ರೀ ಶಕ್ತಿ ಸಂಘದವರು, ಧರ್ಮಸ್ಥಳ ಸಂಘದವರು, ಹಳ್ಳೇರ ಸಮಾಜದ ಮುಖಂಡರಾದ ನಾಗೇಶ ಸೀತು ಕಳ್ಳೇರ, ಯಶ್ವಂತ ಹಳ್ಳೇರ, ತಿಮ್ಮಣ್ಣ ಹಳ್ಳೇರ, ಗಣಪತಿ ಹಳ್ಳೇರ ಹಾಗೂ ಸಮಸ್ಥ ಊರಿನ ನಾಗರೀಕರು ಹಾಜರಿದ್ದರು. ಅದೇ ಸಮಯದಲ್ಲಿ ಕುಮಟಾದಿಂದ ಕಾರವಾರಕ್ಕೆ ಹೋರಟ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಆರ್. ವಿ ದೇಶಪಾಂಡೆರವರಿಗೆ ಹೀರೆಗುತ್ತಿ ಬ್ರಹ್ಮಜಟಕ ದೇವಸ್ತಾನದ ಹತ್ತಿ ನಿಲ್ಲಿಸಿ ಈ ಅಂಡರ್ ಪಾಸ್ ಸಮಸ್ಯೆ ಕುರಿತು ಮನವರಿಕೆ ಮಾಡಿ ಸಮಸ್ಯೆ ಪರಿಹರಿಸುವಂತೆ ಮನವಿ ನೀಡಲಾಯಿತು.

ಎನ್ ರಾಮು.