ಚೆನ್ನೈ: ಇಂದು ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರನ್ನು 24 ಗಂಟೆಗಳ ಕಾಲ ನಿಕಟ ವೀಕ್ಷಣೆಯಲ್ಲಿಡಲಾಗಿದೆ ಎಂದು ವರದಿಯಾಗಿದೆ .

ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಿದ್ದು, ಕರುಣಾನಿಧಿ ಅವರ ದೇಹದ ಅಂಗಾಂಗಗಳ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಚಿಕಿತ್ಸೆ
ಮುಖ್ಯವಾಗಿದೆ. ಅವರಿಗೆ ನಿರಂತರ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

RELATED ARTICLES  ಸಾಧನಾ ಪದವಿ ಕಾಲೇಜಿನಲ್ಲಿ ಇಂದು "ಸಂಸ್ಕೃತೋತ್ಸವ ೨೦೧೮"

ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು, ಮುಂದಿನ 24 ಗಂಟೆಗಳ ಕಾಲ ಅವರ ಆರೋಗ್ಯದ ಬಗ್ಗೆ ತೀವ್ರ ಕಾಳಜಿ ವಹಿಸಲಾಗಿದೆ.
ಕರುಣಾನಿಧಿ ಅವರ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಆಸ್ಪತ್ರೆಯ ಹೊರಭಾಗದಲ್ಲಿ ನೆರೆದಿದ್ದು, ತಮ್ಮ ನಾಯಕ ಬೇಗನೆ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

RELATED ARTICLES  ಮೂರು ಮುತ್ತು ಖ್ಯಾತಿಯ ಕಲಾವಿದ ಅಶೋಕ್‌ ಶಾನಭಾಗ ಇನ್ನಿಲ್ಲ