ಯಲ್ಲಾಪುರ: ಸಬ್ ರಿಜಿಸ್ಟರ್ ಆಫೀಸ್ ಅಧಿಕಾರಿಗಳು ಎಡವಟ್ಟು ಮಾಡಿ, ಇಬ್ಬರು ಯುವಕರ ಜೊತೆ ಯುವತಿಯನ್ನು ಮದುವೆ ಮಾಡಿಸಿದ ಘಟನೆ ಈಗ ದೊಡ್ಡ ಸುದ್ದಿಯಾಗಿ ಹೊರ ಬಿದ್ದಿದೆ. ಹೌದು ಶಿರಸಿಯಲ್ಲಿ ಹಾಗೂ ಕಾರವಾರದಲ್ಲಿ ಒಬ್ಬಳೇ ಹುಡುಗಿ ಇಬ್ಬರ ಜೊತೆಗೆ ಮದುವೆ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹುಡುಗಿಯೋರ್ವಳು ಎರಡು ವರ್ಷಗಳಿಂದ ಯಲ್ಲಾಪುರದ ಗಣಪತಿ ಭಟ್‍ನನ್ನು ಪ್ರೀತಿಸಿ 9 ತಿಂಗಳ ಹಿಂದೆ ತನ್ನ ಕುಟುಂಬದವರನ್ನು ಎದುರು ಹಾಕಿಕೊಂಡು ಯಲ್ಲಾಪುರದ ಸಬ್ ರಿಜಿಸ್ಟರ್ ಆಫೀಸಿನಲ್ಲಿ ಮದುವೆಯಾಗಿದ್ದಳು.ಮದುವೆಯಾಗಿ ಇಷ್ಟು ದಿನ ಸಂಸಾರ ನಡೆಸಿ ಈಗ ಮತ್ತೊಬ್ಬನ‌ಜೊತೆ ವಿವಾಹವಾಗಿದ್ದಾಳೆ.
Screenshot 20180807 183413 1 01
ಆಕೆ ಪ್ರೀತಿಸಿ ಮದುವೆಯಾಗಿದ್ದು ಆಕೆಯ ಮನೆಯವರಿಗೆ ಇಷ್ಟವಿರಲಿಲ್ಲ. ಮನೆಯವರು ಮೊದಲು ಅವರ ಮದುವೆಗೆ ಒಪ್ಪಿಗೆ ಸೂಚಿಸಿರಲಿಲ್ಲ. ಮದುವೆ ಆದ ಬಳಿಕ ಆಕೆಯ ಪೋಷಕರು ನಾವು ಮದುವೆಯನ್ನು ಒಪ್ಪಿದ್ದೇವೆ. ಮನೆಗೆ ಬಾ ಎಂದು ಹೇಳಿದ್ದಾರೆ ಎನ್ನಲಾಗಿದೆ . ಪೋಷಕರ ಮಾತನ್ನು ನಂಬಿ ಮನೆಗೆ ಹೋಗಿದ್ದಾಳೆ. ತವರು ಮನೆಗೆ ಹೋದ ಬಳಿಕ ಮಮತಾ ಹಾಗೂ ತಂದೆ ಧನಂಜಯ್ ಗಣಪತಿ ಭಟ್ ನನ್ನು ಬಿಟ್ಟು ಬಿಡುವಂತೆ ಮನವೊಲಿಸಿರ ಬಹುದೆಂದು ನೊಂದ ಮೊದಲ ಪತಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

RELATED ARTICLES  ಅಂಕೋಲಾ ಪೊಲೀಸ್ ಠಾಣೆಯಿಂದ “ ಮಾದರಿ ಗಣೇಶೋತ್ಸವ ಅವಾರ್ಡ “ ಪರಿಸರ ಸ್ನೇಹಿ, ಸಮಾಜಮುಖಿ ಸಮಿತಿಗೆ ಪ್ರಶಸ್ತಿಯ ಗರಿ ನೀಡಲು ತಿರ್ಮಾನ.

ಈಗ ಆಗಸ್ಟ್ 5ರಂದು ಆಕೆಗೆ ಯಲ್ಲಾಪುರ ತಾಲೂಕಿನ ತಾರಿಮನೆ ಮಾಗೋಡಿನ ರಾಜೇಶ್‍ನೊಂದಿಗೆ ಕಾರವಾರದ ಸಬ್ ರಿಜಿಸ್ಟರ್ ಆಫೀಸಿನಲ್ಲಿ ಮದುವೆ ಆಗಿದೆಯಂತೆ. ಯಲ್ಲಾಪುರದಲ್ಲಿ ಮದುವೆ ರಿಜಿಸ್ಟರ್ ಆಗಿರುವ ಕುರಿತು ಮಾಹಿತಿ ಇದ್ದರೂ, ಕಾರವಾರದಲ್ಲಿ ಅಧಿಕಾರಿಗಳು ಇನ್ನೊಂದು ಯುವಕನೊಂದಿಗೆ ಮದುವೆ ರಿಜಿಸ್ಟರ್ ಮಾಡಿ ಎಡವಟ್ಟು ಮಾಡಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ಕುಮಟಾ ಸಾರಿಗೆ ಘಟಕಕ್ಕೆ ಇನ್ನೆರಡು ಬಸ್ ಸೇರ್ಪಡೆ

ಪತಿ ಗಣಪತಿ ತನ್ನ ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗಲು ಬಂದಾಗ ವಿಷಯ ಬೆಳಕಿಗೆ ಬಂದಿದೆ. ತನ್ನ ಪತ್ನಿ ಇನ್ನೊಬ್ಬನೊಂದಿಗೆ ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಈ ಬಗ್ಗೆ ಗಣಪತಿ ಪಟ್ಟು ಹಿಡಿದಿದ್ದು ಯಲ್ಲಾಪುರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಮುಂದಿನ ತನಿಖೆ ‌ನಂತರ‌ ಪ್ರಕರಣ ಯಾವ ತಿರುವು ಪಡೆಯಲಿದೆ ಎಂಬುದನ್ನು ಮಾತ್ರ ಕಾದು ನೋಡಬೇಕಾಗಿದೆ.