ಹೊನ್ನಾವರ:ಸಮಾಜಮುಖಿ ಕಾರ್ಯ ಮಾಡುತ್ತಾ ಗ್ರಾಮೀಣ ಭಾಗದಲ್ಲಿ ಎಲ್ಲರ ಮನೆ ಮಾತಾಗಿರುವ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಘಾಟಿಸಲು ಹೆಮ್ಮೆಯೆನಿಸುತ್ತದೆ. ಸರ್ವತೋಮಕ ಅಭಿವೃದ್ದಿಯ ಕನಸನ್ನು ಹೊತ್ತು, ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಲು ಹೋರಾಡುವ ಡಾ ವಿರೇಂದ್ರ ಹೆಗ್ಗಡೆಯವರ ಕನಸಿನ ಕೂಸು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ. ಕೃಷಿ, ಸಾಂಸ್ಕøತಿಕ, ಧಾರ್ಮಿಕ, ಆರೋಗ್ಯ ಸೇರಿದಂತೆ ಸರ್ವತೊಮಕ ಅಭಿವೃದ್ದಿಯನ್ನು ಈ ಯೋಜನೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಕಳೆದ 3 ವರ್ಷದಿಂದ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಗೌರವಿಸುವ ಜೊತೆ ನೂತನ ಪದಾದಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರದ ಈ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣವಾಗಿದೆ. ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರ ಶ್ರಮದಿಂದ ಗ್ರಾಮಿಣಾಭಿವೃದ್ದಿ ಇನ್ನಷ್ಟು ಪ್ರಸಿದ್ದತೆ ಪಡೆಯಲಿ. ಆ ಮೂಲಕ ಯೋಜನೆಯ ಕೀರ್ತಿ ಪತಾಕೆ ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂದು ಜಿಲ್ಲಾ ಪಂಚಾಯತ ಸದಸ್ಯರಾದ ಶಿವಾನಂದ ಹೆಗಡೆ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘ ಹೊನ್ನಾವರ ವತಿಯಿಂದ ಅಗ್ರಹಾರ ಮತ್ತು ಚಿಪ್ಪಿಹಕ್ಕಲ ಒಕ್ಕೂಟದ ಪದಗ್ರಹಣ ಕಾರ್ಯಕ್ರಮ ಕುಂಬಾರಮಕ್ಕಿಯ ಶಾಂತಿಕಾ ಪರಮೇಶ್ವರಿ ದೇವಸ್ಧಾನದ ಆವರಣದಲ್ಲಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ತೆಂಗಿನ ಗರಿ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಗ್ರಾಮಿಣಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಶಂಕರ ಶೆಟ್ಟಿ ಮತನಾಡಿ ಗ್ರಾಮೀಣ ಭಾಗದವರ ಸಂಕಷ್ಟ ಅರಿತು 1982ರಲ್ಲಿ ಯೋಜನೆ ಪ್ರಾರಂಭಿಸಿ ಅನೇಕ ಜನಪರ ಕಾರ್ಯಕ್ರಮ ಸಂಯೋಜನೆ ಮಾಡಿದ ಪರಿಣಾಮ ಇಂದು ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ತನ್ನ ವ್ಯಾಪ್ತಿ ಹೆಚ್ಚಿಸಿಕೊಂಡಿದೆ. ಯೋಜನೆ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಪ್ರಾರಂಭಿಸುವ ಜೊತೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಸಂಘದ ಸದಸ್ಯರ ಮೂಲಕ ಮಾಹಿತಿ ಜೊತೆ ಆ ಸೌಲಭ್ಯದ ಉಪಯೋಗ ಪಡೆದುಕೊಳ್ಳುವಂತೆ ನೋಡಿಕೊಳ್ಳುತ್ತಿದೆ. ಸಂಘಟನೆ ಇದ್ದಾಗ ಮತ್ರ ನಮ್ಮ ಅಭಿವೃದ್ದಿ ಸಾಧ್ಯ ಎಂದು ಮನಗಂಡು ಸಂಘದ ಮೂಲಕ ನಾಯಕತ್ವ ಗುಣ ರೂಡಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದೆ. ಸದಸ್ಯರು ಯೋಜನೆ ಸೌಲಭ್ಯದ ಪಡೆದು ಸ್ವಾವಲಂಭಿ ಜೀವನ ನಡೆಸುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ ಅಧ್ಯಕ್ಷೆ ಗುಣಮಾಲ ಜೈನ್ ಮಾತನಾಡಿ ಹೆಸರು ಸೂಚಿಸುವಂತೆ ಸ್ವಸಹಾಯದ ಮೂಲಕ ಸ್ವಾವಲಂಭಿ ಜೀವನ ನಡೆಸಲು ಯೋಜನೆ ಸಹಾಯಕಾರಿಯಾಗಿದೆ. ಸಾಕಷ್ಟು ಸಮಾಜಮುಖಿ ಕಾರ್ಯಕ್ರಮದ ಮೂಲಕ ಮನಗೆದ್ದ ಯೋಜನೆ ಇನ್ನಷ್ಟು ಪ್ರಸಿದ್ದತೆ ಪಡೆಯಲಿ ಎಂದರು.
ವೇದಿಕೆಯಲ್ಲಿ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರಾದ ದಾಮೋದರ ನಾಯ್ಕ, ದೇವಾಲಯದ ಅರ್ಚಕರಾದ ಗೋಪಾಲ ಹೆಗಡೆ, ಯೋಜನಾಧಿಕಾರಿ ಎಂ.ಎಸ್.ಈಶ್ವರ, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.