ಕುಮಟಾ :ಕಳೆದ ರವಿವಾರ ಗೆಳೆಯನ ಜೊತೆಯಲ್ಲಿ ಕುಮಟಾ ಸಮುದ್ರ ಬಂಡೆಯ ಮೇಲೆ ನಿಂತಾಗ ಕಾಲು ಜಾರಿ ಮೇಲಿಂದ ಸಮುದ್ರದ ನೀರಿನಲ್ಲಿ ಕೊಚ್ಚಿ ಹೋಗಿದ್ದ ಕುಮಟಾದ ವನ್ನಳ್ಳಿ ನಿವಾಸಿ ಆನಂದ ನಾರಾಯಣ ಮೊಗೆರ ಶವದ ಹುಡುಕಾಟ ಕಳೆದ ಮೂರು ದಿನಗಳಿಂದ ಜಿಲ್ಲಾಡಳಿತ ಸಹಾಯದಿಂದ ನಡೆಯುತ್ತಿತು ಆದರೆ ಇಂದು ಬೆಳಿಗ್ಗಿನ ಜಾವ ಆತನ ಶವ 7.45ರ ಸುಮಾರಿಗೆ ದೊರೆತಿದೆ.

RELATED ARTICLES  ನೀರಿಲ್ಲದೇ ಸೊರಗಿದ ಮಾಗೋಡು ಜಲಪಾತ! ಇಳಿಮುಖವಾಯ್ತು ಪ್ರವಾಸಿಗರ ಸಂಖ್ಯೆ!

ಮುಂಜಾನೆಯ ಹೊತ್ತಿಗೆ ಜಿಲ್ಲಾಡಳಿತ ಕಾರವಾರದ ಇಂಡಿಯನ್ ನೇವಿ ಇವರ ಸಹಾಯ ಕೇಳಿ ಹೆಲಿಕಾಪ್ಟರ್ ಮೂಲಕ ಕುಮಟಾದ ಸಮುದ್ರದಲ್ಲಿ ಶವದ ಹುಡುಕಾಟ ನಡೆಸುತ್ತಿರುವಾಗ ಹೆಲಿಕಾಪ್ಟರ್ ರೆಕ್ಕೆಯ ಗಾಳಿ ರಭಸಕ್ಕೆ ಆನಂದನ ಶವ ನೀರಿನಿಂದ ಮೇಲೆ ತೇಲಿ ಬಂದಿದೆ ಎನ್ನಲಾಗಿದೆ.

ಕಳೆದ ನಾಲ್ಕು ದಿನಗಳಿಂದ ಕುಮಟಾ ಪೋಲಿಸ್ ಸಿಬ್ಬಂದಿಗಳು ಹಾಗೂ ಕರಾವಳಿ ಪೋಲಿಸ್ ಸಿಬ್ಬಂದಿಗಳು ಕುಮಟಾದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರವಾರದ ಇಂಡಿಯನ್ ನೇವಿ ಮತ್ತು ಸ್ಥಳೀಯ ಊರಿನ ನಾಗರಿಕರು ಆನಂದನ ಶವದ ಹುಡುಕಾಡಕ್ಕೆ ಸಹಕರಿಸಿದರು. ನಾಲ್ಕನೇ ದಿನದ ಹುಡುಕಾಟದಲ್ಲಿ ಕೊಳೆತ ಶವ ಸಿಕ್ಕಾಗ ಕುಟುಂಬಕ್ಕೆ ಆಘಾತ ಉಂಟಾಯಿತು. ಕುಟುಂಬ ದುಃಖದ ಮಡುವಿನಲ್ಲಿ ಒದ್ದಾಡುತ್ತಿದೆ.

RELATED ARTICLES  ಕಡಲಾಮೆ ಉಳಿವಿನತ್ತ ಚಿಂತನೆ : ಗಂಗೆಕೊಳ್ಳ ಸೇರಿದವು ಕಡಲಾಮೆ‌ಮರಿಗಳು.

ಪೋಲೀಸರು ಹಾಗೂ ಜಿಲ್ಲಾಡಳಿತ ಕೈಗೊಂಡ ಕಾರ್ಯ ಯಶಸ್ವಿಯಾಗಿದ್ದು ಪೋಲೀಸರು ಈ ಬಗ್ಗೆ ಮುಂದಿನ‌ಕಾರ್ಯ ಕೈಗೊಂಡಿದ್ದಾರೆ.