ಶಿರಸಿ: ಯಕ್ಷ ಸಂಭ್ರಮ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಟಿಎಮ್‌ಎಸ್ ಸಹಕಾರದಲ್ಲಿ ಚತುರ್ಥ ತಾಳಮದ್ದಳೆ ಸಪ್ತಾಹವನ್ನು ಅ. 2೦ರಿಂದ 26 ರವರೆಗೆ ಹಮ್ಮಿಕೊಳ್ಳಲಾಗಿದ್ದು, ಇಲ್ಲಿನ ಟಿಎಮ್‌ಎಸ್ ಸಭಾಭವನದಲ್ಲಿ ಪ್ರತಿದಿನ ಸಂಜೆ 4ರಿಂದ ತಾಳಮದ್ದಳೆ ನಡೆಯಲಿದೆ.
ಟಿಎಮ್‌ಎಸ್ ಅಧ್ಯಕ್ಷ ಜಿ.ಎಮ್. ಹೆಗಡೆ ಹುಳಗೋಳ ಕಾರ್ಯಕ್ರಮ ಉದ್ಘಾಟಿಸುವರು. ಟ್ರಸ್ಟ್ ಅಧ್ಯಕ್ಷ ಎಮ್.ಎ. ಹೆಗಡೆ ದಂಟ್ಕಲ್ ಅಧ್ಯಕ್ಷತೆ ವಹಿಸಲಿದ್ದು , ಮುಖ್ಯ ಅತಿಥಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಸಹಾಯಕ ನಿರ್ದೇಶಕ ಕೆ.ಹಿಮಂತರಾಜು ಆಗಮಿಸಲಿದ್ದಾರೆ. ಒಟ್ಟೂ ೭ ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಒಟ್ಟೂ ೪೦ ಕಲಾವಿದರು ಭಾಗವಹಿಸಲಿದ್ದಾರೆ.
ಅ. 2೦ರಂದು ಅತಿಕಾಯ ಮೋಕ್ಷ ತಾಳಮದ್ದಳೆ ನಡೆಯಲಿದ್ದು, ಕವಿ ಹಟ್ಟಿಯಂಗಡಿ ರಾಮ ಭಟ್ಟ, ಭಾಗವತರಾಗಿ ನಾರಾಯಣ ಭಾಗ್ವತ್ ನೆಬ್ಬೂರು, ಅನಂತ ಹೆಗಡೆ, ಮೃದಂಗ ಗಣಪತಿ ಭಾಗ್ವತ್, ಚಂಡೆ ಪ್ರಮೋದ ಕಬ್ಬಿನಗದ್ದೆ ಹಾಗೂ ಅರ್ಥದಾರಿಗಳಾಗಿ ಡಾ. ಎಮ್. ಪ್ರಭಾಕರ ಜೋಶಿ, ಸುಣ್ಣಂಬಳ ಭಟ್ಟ, ವಾಸುದೇವ ಭಟ್ಟ, ವಿ. ಗಣಪತಿ ಭಟ್, ವಿ. ಶೇಷಗಿರಿ ಭಟ್ಟ ಭಾಗವಹಿಸಲಿದ್ದಾರೆ. ಅ. 21ರಂದು ಕಾರ್ತವೀರ್ಯಾರ್ಜುನ ಕಾಳಗ ನಡೆಯಲಿದ್ದು , ಕಡಂದಲೆ ರಾಮರಿಂದ ಸಂಪಾದಿತ ಮದ್ದಳೆಯಲ್ಲಿ ಭಾಗ್ವತರಾಗಿ ಕೇಶವ ಹೆಗಡೆ ಕೊಳಗಿ, ಅನಂತ ಹೆಗಡೆ, ಮೃದಂಗ ಶಂಕರ ಭಾಗ್ವತ್, ಚಂಡೆ ವಿಘ್ನೇಶ್ವರ ಕೆಸರಕೊಪ್ಪ, ಅರ್ಥದಾರಿಗಳಾಗಿ ಸಣ್ಣಂಬಳ ವಿಶ್ವೇಶ್ವರ ಭಟ್, ಅಶೋಕ ಭಟ್, ಪ್ರೊ. ಎಮ್.ಎನ್. ಹೆಗಡೆ, ವಾಸುದೇವ ಭಟ್, ವಿ. ಗಣಪತಿ ಭಟ್, ವಿ. ಬಾಲಚಂದ್ರ ಭಟ್, ಸುಬ್ರಾಯ ಹೆಗಡೆ, ಮಂಜುನಾಥ ಗೋರನಮನೆ ಭಾಗವಹಿಸಲಿದ್ದಾರೆ.
ಅ. 22ರಂದು ಮೂಲ್ಕಿ ವೆಂಕಟೇಶನ ಭಕ್ತರ ಸುಧನ್ವ ಮೋಕ್ಷದಲ್ಲಿ ಭಾಗತವತರಾಗಿ ಪರಮೇಶ್ವರ ಹೆಗಡೆ, ಅನಂತ ಹೆಗಡೆ, ಮೃದಂಗ ನರಸಿಂಹ ಭಟ್, ಚಂಡೆ ಕೃಷ್ಣಯಾಜಿ ಇಡಗುಂಜಿ, ಅರ್ಥದಾರಿಗಳಾಗಿ ವಿ. ಉಮಾಕಾಂತ ಭಟ್, ಸಣ್ಣಂಬಳ ವಿಶ್ವೇಶ್ವರ ಭಟ್, ವಾಸುದೇವ ಭಟ್, ವಿ. ಗಣಪತಿ ಭಟ್, ಪ್ರೊ. ಪವನ ಕಿರಣಕೆರೆ ಭಾಗವಹಿಸಲಿದ್ದಾರೆ.
ಅ. ೨೩ರಂದು ಗಣೇಶ ಕೋಲಕಾಡಿ ಕವಿಯಾಗಿ ತ್ರಯಂಬಕ ರುದ್ರ ಮಹಾತ್ಮೆ ನಡೆಯಲಿದ್ದು, ಭಾಗವತರಾಗಿ ಜನ್ಸಾಲೆ ರಾಘವೇಂದ್ರ ಆಚಾರ್ಯ, ಅನಂತ ಹೆಗಡೆ, ಮೃದಂಗ ಶಂಕರ ಭಾಗ್ವತ, ಚಂಡೆ ಪ್ರಮೋದ ಕಬ್ಬಿನಗದ್ದೆ, ಅರ್ಥದಾರಿಗಳಾಗಿ ಪ್ರೊ.ಎಮ್.ಎ.ಹೆಗಡೆ , ವಿಶ್ವೇಶ್ವರ ಭಟ್, ಪ್ರೊ. ಎಮ್.ಎನ್.ಹೆಗಡೆ, ವಾಸುದೇವ ಭಟ್, ವಿ.ಗಣಪತಿ ಭಟ್ ಭಾಗವಹಿಸಲಿದ್ದಾರೆ.
ಅ. 24ರಂದು ಪಾರ್ತಿಸುಬ್ಬ , ಅಜಪುರ ವಿಷ್ಣು ಕವಿಯಾಗಿ ಪಾದುಕಾ ಪ್ರದಾನ – ಉತ್ತರನ ಪೌರುಷ ನಡೆಯಲಿದ್ದು, ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಅನಂತ ಹೆಗಡೆ, ಮೃದಂಗ ಚೈತನ್ಯ ಕೃಷ್ಣ ಪದ್ಯಾಣ, ನರಸಿಂಹ ಭಟ್, ಅರ್ಥದಾರಿಗಳಾಗಿ ವಿಶ್ವೇಶ್ವರ ಭಟ್, ವಾಸುದೇವ ಭಟ್, ಹರೀಶ ಬಳಂತಿಮೊಗರು, ವಿ. ಗಣಪತಿ ಭಟ್, ರಾಮ ಜೋಯಿಸ ಬೆಳ್ಳಾರೆ ಭಾಗವಹಿಸಲಿದ್ದಾರೆ. ಅ. 25ರಂದು ಪ್ರೊ.ಎಮ್.ಎ. ಹೆಗಡೆ ಕವಿಯಾಗಿ ಮರುತ್ ಜನ್ಮ ಮದ್ದಳೆ ನಡೆಯಲಿದ್ದು, ಭಾಗ್ವತರಾಗಿ ವಿ. ಗಣಪತಿ ಭಟ್ , ರವಿಚಂದ್ರ ಕನ್ನಡಿಕಟ್ಟೆ, ಮೃದಂಗ ಶಂಕರ ಭಾಗ್ವತ, ಚೈತನ್ಯ ಪದ್ಯಾಣ, ಅರ್ಥದಾರಿಗಳಾಗಿ ಪ್ರೊ. ಎಮ್.ಎ. ಹೆಗಡೆ, ವಿಶ್ವೇಶ್ವರ ಭಟ್, ವಾಸುದೇವ ಭಟ್, ವಿ. ಗಣಪತಿ ಭಟ್, ಪೆರ್ಮುದೆ ಜಯಪ್ರಕಾಶ ಶೆಟ್ಟಿ, ರಜನೀಶ ಹೊಳ್ಳ, ರಾಮ ಜೋಯಿಸ ಬೆಳ್ಳಾರೆ, ವಾದಿರಾಜ ಕಲ್ಲೂರಾಯ ಭಾಗವಹಿಸಲಿದ್ದಾರೆ.
ಸಪ್ತಾಹದ ಕೊನೆಯ ದಿನ ಅ. 26ರಂದು ಬೆಳಿಗ್ಗೆ 1೦ ರಿಂದ ತಾಳಮದ್ದಳೆ ಸಪ್ತಾಹ ಸಮಾರೋಪ ನಡೆಯಲಿದ್ದು, ವಿ. ಸುಬ್ರಾಯ ಭಟ್ ಅವರ ಮಹಾಸತ್ಯ ಪುಸ್ತಕ ಬಿಡುಗಡೆ ಕಾರ್ಯಕ್ರಮದೊಂದಿಗೆ ಪ್ರಸಿದ್ಧ ಲೇಖಕ ಹಾಗೂ ಚಿಂತಕ ಲಕ್ಷ್ಮೀಶ ತೊಳ್ಪಾಡಿ ಅವರಿಂದ ಶೇಣಿ ಶತಮಾನ ಸ್ಮರಣಿ ಕುರಿತು ವಿಶೇಷ ಉಪನ್ಯಾಸ, ಶೇಣಿ ಸಂಸ್ಮರಣಾ ಸಂವಾದ ಕಾರ್ಯಕ್ರಮ ತೊಳ್ಪಾಡಿಯವರ ಜೊತೆ ನಡೆಯಲಿದ್ದು , ಸಂವಾದಕರಾಗಿ ಪ್ರೊ. ಎಮ್.ಎ. ಹೆಗಡೆ, ವಿ. ಉಮಾಕಾಂತ ಭಟ್, ವಿ. ಸುಬ್ರಾಯ ಭಟ್, ಡಾ. ವಿಜಯನಳಿನಿ ರಮೇಶ, ಗೋಪಾಲಕೃಷ್ಣ ಭಾಗವತ ಇರಲಿದ್ದಾರೆ. ಸಪ್ತಾಹದ ಸಮಾರೋಪ ಮಧ್ಯಾಹ್ನ ೩ರಿಂದ ನಡೆಯಲಿದ್ದು , ಹೊಸ್ತೋಟ ಮಂಜುನಾಥ ಭಟ್ ಕವಿಯಾಗಿ ಶ್ರೀರಾಮ ನಿರ್ಯಾಣ ಮದ್ದಳೆ ನಡೆಯಲಿದ್ದು, ಭಾಗವತರಾಗಿ ವಿ.ಗಣಪತಿ ಭಟ್, ರಾಮಕೃಷ್ಣ ಹೆಗಡೆ, ಮೃದಂಗ ಎನ್.ಜಿ. ಹೆಗಡೆ, ಅರ್ಥದಾರಿಗಳಾಗಿ ವಾಸುದೇವ ಭಟ್, ವಿ. ಗಣಪತಿ ಭಟ್ ಸಂಕದಗುಂಡಿ, ಗಣೇಶ ಶೆಟ್ಟಿ, ರಾಮ ಜೋಯಿಸ ಬೆಳ್ಳಾರೆ ಭಾಗವಹಿಸಲಿದ್ದಾರೆ.