ಹೊನ್ನಾವರ: ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ಇಕೋ ಕ್ಲಬ್ ಮತ್ತು ಹೊನ್ನಾವರ ಪತ್ರಕರ್ತರ ಸಂಘದ ಆಶ್ರಯದಲ್ಲಿ ವಿಶ್ವ ಛಾಯಾಚಿತ್ರ ದಿನಾಚರಣೆಯನ್ನು ನ್ಯೂ ಇಂಗ್ಲಿಷ್ ಸ್ಕೂಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ವಿಶ್ವ ಛಾಯಾಚಿತ್ರ ದಿನಾಚರಣೆ ಅಂಗವಾಗಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದ್ದು, ಛಾಯಾಗ್ರಾಹಕರು, ಹವ್ಯಾಸಿ ಛಾಯಾಗ್ರಾಹಕರು ತಾವು ಕ್ಲಿಕ್ಕಿಸಿದ ಅಪರೂಪದ ಹಾಗೂ ಹೃನ್ಮನ ಸೆಳೆಯುವ ಪರಿಸರ, ಕಲೆ, ಸಾಂಸ್ಕೃತಿಕ, ಧಾರ್ಮಿಕ, ಪ್ರವಾಸ ಇತರೇ ಉತ್ತಮ ಛಾಯಾಚಿತ್ರಗಳನ್ನು ಪ್ರದರ್ಶಿದಬಹುದಾಗಿದೆ.

RELATED ARTICLES  ಸ್ವರಾಜ್ಯ ಕವಿಗೋಷ್ಠಿಗೆ ಕವಿತೆಗಳ ಆಹ್ವಾನ.

ಆಸಕ್ತ ಛಾಯಾಗ್ರಾಹಕರು ತಾವು ಕ್ಲಿಕ್ಕಿಸಿದ ಉತ್ತಮ ಛಾಯಾಚಿತ್ರಗಳನ್ನು 12×8 ರ ಅಳತೆಯಲ್ಲಿ ಆಗಸ್ಟ್ 13 ರೊಳಗೆ ಬಿ.ಜೆ.ನಾಯ್ಕ, ನ್ಯೂ ಇಂಗ್ಲಿಷ್ ಸ್ಕೂಲ್ ಹೊನ್ನಾವರ ಈ ವಿಳಾಸಕ್ಕೆ ಕಳುಹಿಸಬೇಕಿದೆ. ಅಥವಾ [email protected] ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

RELATED ARTICLES  ರಾಷ್ಟ್ರೋತ್ಥಾನ ಪರಿಷತ್: ಪ್ರತಿಭಾವಂತ ಮಕ್ಕಳಿಗೆ ಉಚಿತ ಶಿಕ್ಷಣ .