ನಿರಂತರ ಅಧ್ಯಯನ,ಅಭ್ಯಾಸ ಪ್ರಯತ್ನಗಳಿಂದ ವಿದ್ಯಾರ್ಥಿಗಳು ಉದ್ದೈಶಿಸಿದ ಗುರಿಯನ್ನು ತಲಪಬಹುದು.ಕಲಾವಿದ್ಯಾರ್ಥಿಗಳಿಗೂ ಇಂದು ಸಾಕಷ್ಟು ಶೈಕ್ಷಣಿಕ ಔದ್ಯೋಗಿಕ ಅವಕಾಶ ಗಳಿದ್ದು ಅವುಗಳನ್ನು ಯಶಸ್ವಿಯಾಗಿ ಬಳಸಿಕೊಂಡಲ್ಲಿ ಯಶಸ್ಸು ಖಂಡಿತ. ಎಂದು ಶ್ರೀ ಭಾರತೀ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ನ ಮಾನವ ಸಂಪನ್ಮೂಲ ಅಭಿವೃದ್ಧಿ ಘಟಕ”ಪ್ರೇರಣಾ”ದ ಮಾರ್ಗದರ್ಶಕ ಯು.ಎಸ್. ವಿಶ್ವೇಶ್ವರ ಭಟ್ ಹಿರಿಯಡ್ಕ ದ ಸ.ಪ.ಪೂ.ಕಾಲೇಜಿನ ಕಲಾವಿಭಾಗದ ವಿದ್ಯಾರ್ಥಿಗಳಿಗೆ ಕರೆನೀಡಿದರು.

RELATED ARTICLES  ಕವಲಕ್ಕಿಯ ಚಿನ್ನದ ಶೆಟ್ರು ಇನ್ನಿಲ್ಲ : ಸುಧಾಕರ ಶೇಟ್ ಅಕಾಲಿಕ ನಿಧನ

ಈ ಸಂದರ್ಭದಲ್ಲಿ ಸೇನೆಗಳಲ್ಲಿನ ಉದ್ಯೋಗಾವಕಾಶ,ವೃತ್ತಿ ಪರ,ಸ್ವೋದ್ಯೋಗಾವಕಾಶ,ಐಎಎಸ್… ಮುಂತಾದ ಕ್ಷೇತ್ರಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ಸಹತರಬೇತುದಾರ ವಾಣಿಜ್ಯ ಉಪನ್ಯಾಸಕ ಪ್ರವೀಣ್ ಸಹಕರಿಸಿದರು.ಪ್ರಾಂಶುಪಾಲ ಶ್ರೀ ಮಂಜುನಾಥ ಭಟ್ ಆಯೋಜಿಸಿದ್ದ ಈ ಒಪ್ಪೊತ್ತಿನ ಕಾರ್ಯಕ್ರಮದಲ್ಲಿ ಪ್ರಭಾರ ಪ್ರಾಂಶುಪಾಲೆ ಶ್ರೀಮತಿ ವೀಣಾ ನಾಯಕ್,ತರಗತಿ ಉಪನ್ಯಾಸಕ ಶ್ರೀ ಸಿದ್ದೇಶ್ವರ ಉಪಸ್ಥಿತರಿದ್ದರು.

RELATED ARTICLES  ನೀಲಿಚಿತ್ರ ನಟಿಗೆ ಹಣ ವರ್ಗಾವಣೆ ಪ್ರಕರಣ - ಅಮೇರಿಕಾದ ಮಾಜಿ ಅಧ್ಯಕ್ಷರ ಬಂಧನ - ಬಿಡುಗಡೆ.