ಯಲ್ಲಾಪುರ : ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಚೌತಿಯ ಗಣಪನ ವಿಸರ್ಜನೆಗೆ ವ್ಯವಸ್ಥೆಗಳೂ ಸಿದ್ಧವಾಗಬೇಕಿದೆ. ಆದರೆ
ಬರುವ ಗಣೇಶ ಚತುರ್ಥಿಯಂದು ಯಲ್ಲಾಪುರ ಪಟ್ಟಣದಲ್ಲಿ ಪೂಜಿಸಲ್ಪಡುವ ಗಣೇಶ ಮೂರ್ತಿಗಳ ವಿಸರ್ಜನೆಗೆ ಈ ಭಾರಿ ಸಮಸ್ಯೆಯಾಗುವ ಸಾಧ್ಯತೆಯಿದೆ.

ಪಟ್ಟಣದಲ್ಲಿ ಸಾರ್ವಜನಿಕ ಹಾಗೂ ಖಾಸಗಿಯಾಗಿ ಸುಮಾರು ಐದುನೂರಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನಿಟ್ಟು ಪೂಜೆ ಸಲ್ಲಿಸಲಾಗುತ್ತದೆ. ಇದರಲ್ಲಿ ಅತೀ ಹಿಂದಿನಿಂದ ಬಂದ ಆಚರಣೆಯಂತೆ, ಎಲ್ಲ ಸಾರ್ವಜನಿಕ ಗಣೇಶ ಮೂರ್ತಿಗಳು‌ ಹಾಗೂ ಮನೆಯಲ್ಲಿಟ್ಟು ಪೂಜಿಸುವ ಬಹುತೇಕ ಗಣೇಶ‌ಮೂರ್ತಿಗಳನ್ನು ಪಟ್ಟಣದ ಜೋಡುಕೆರೆಯ ಪಕ್ಕದ ಹನುಮಂತನ ಕೆರೆಯಲ್ಲಿ/ ಮಾರುತಿ ದೇವಸ್ಥಾನದ ಪಕ್ಕದಲ್ಲಿ ವಿಸರ್ಜಿಸಲಾಗುತ್ತದೆ. ಈ ಸ್ಥಳ ಗಣಪತಿ ಮೂರ್ತಿಗಳು, ಶಾರದಾಮೂರ್ತಿಗಳು, ಕೃಷ್ಣಮೂರ್ತಿ ಹಾಗೂ ಮುಸ್ಲಿಂರ ಮೋಹರಂ ಡೋಲಿಗಳ ವಿಸರ್ಜನೆಗಾಗಿಯೇ ಇರುವ ಸ್ಥಳವಾಗಿದೆ.

RELATED ARTICLES  ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ, ಶಾಸಕ ಸಿ.ಟಿ ರವಿ ವಿರುದ್ದ ಕೋರ್ಟ್ ನಲ್ಲಿ ದೂರು

ಕಳೆದು ಐದಾರು ತಿಂಗಳಿಂದ ಪಟ್ಟಣದ ಬಾಳಗಿಮನೆಯಿಂದ ಬಿಸಗೋಡ ಕ್ರಾಸ್ ವರೆಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಚರಂಡಿ ಹಾಗೂ ಪುಟ್ ಪಾತ್ ಕಾಮಗಾರಿ ನಡೆಯುತ್ತಿದ್ದು ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ‌. ಈ ಕಾಮಗಾರಿಯಲ್ಲಿ ರಸ್ತೆಕ್ಕಿಂತ ಒಂದರಿಂದ ಒಂದುವರೆ ಅಡಿ ಮೇಲೆ ಮೇಲೆ ಸಿಮೆಂಟ್ ಕಾಂಕ್ರಿಂಟ್ ಬಂದಿದ್ದು, ಈ ಎತ್ತರದ ಕಾಂಕ್ರೀಟ್ ಹಾಗೂ ನಾಲ್ಕರಿಂದ ಐದು ಅಡಿ ಅಗಲದ ಚರಂಡಿ ಪುಟ್ ಪಾತ್ ದಾಟಿ ಗಣಪತಿ ಮೂರ್ತಿಯಿರುವ ವಾಹನ ಕೆರೆಯ ಅಂಚಿನವರೆಗೂ ಸಾಗಿಸುವುದು ಕಷ್ಟದಾಯವಾಗಿದೆ.ಇದೀಗ ಇದು ದೊಡ್ಡ ಸಮಸ್ಯೆಯಾಗಿ ಗೋಚರಿಸುತ್ತಿದೆ.

ಸಣ್ಣ ಸಣ್ಣ ಗಣಪತಿ ಮೂರ್ತಿಗಳ ವಿಸರ್ಜನೆಗೆ ಅಷ್ಟೊಂದು ಸಮಸ್ಯೆ ಬಾರದೇ ಇದ್ದರೂ, ಬ್ರಹತ್ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆಗೆ ತೊಂದರೆಯಾಗಬಹುದು ಎನ್ನಲಾಗಿದೆ.

RELATED ARTICLES  ಆದರ್ಶ ಗಣೇಶೋತ್ಸವ ಆಚರಿಸಿರಿ

ಚರಂಡಿ‌ ಪುಟ್ ಪಾತಗಾಗಿ ತೆಗೆದಿರುವ ಮಣ್ಣನ್ನು ಕೆರೆಯ ಪಾತ್ರದಲ್ಲಿ ಅದರಲ್ಲಿಯೂ ಗಣಪತಿ ಮೂರ್ತಿಗಳ ವಿಸರ್ಜನೆ ಸಾಗಿಸುವ ಮದ್ಯದಲ್ಲಿ ಸುರಿಯಲಾಗಿದೆ. ಇದೇ ಸ್ಥಳದಲ್ಲಿ ಕೆಲವು ಜನ ಕೆಡವಿದ ತಮ್ಮ ಹಳೆಯ ಕಟ್ಡಡದ ಇಟ್ಟಿಗೆ ಸಿಮೆಂಟ್ ಕಾಂಕ್ರೀಟ್ ಅವಶೇಷಗಳನ್ನು ಕೆರೆಯಲ್ಲಿಯೇ ತಂದು ಸುರುವಿದ್ದಾರೆ. ಕೆಲ ಸಮಯ ತ್ಯಾಜ್ಯ ವಿಲೇವಾರಿ ಘಟಕದಂತೆಯೂ ಬಳಕೆ ಮಾಡಿಕೊಳ್ಳಲಾಗಿದ್ದು. ಇಲ್ಲಿ ಮಣ್ಣು ತ್ಯಾಜ್ಯದ ಗುಡ್ಡೆಯೆ ಬೆಳೆದು ಬಿಟ್ಟಿದೆ. ಆದ್ದರಿಂದ ಗಣೇಶೋತ್ಸವ ಸಮಿತಿಯ ಕಾರ್ಯಕರ್ತರು ವಿಸರ್ಜನೆಗೆ ಅಡ್ಡಿಯುಂಟಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಸೂಕ್ತ‌ ವ್ಯವಸ್ಥೆ ಕಲ್ಪಿಸುವಂತೆಯೂ ಆಗ್ರಹ ಕೇಳಿ ಬಂದಿದೆ.