ಅಂಕೋಲಾ : ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಒಂದಾದ ಜಿ.ಸಿ ಕಾಲೇಜಿನಲ್ಲಿ ಡಾ. ಎಸ್.ಆರ್ ರಾಮಾನುಜನ್ ಅವರ ಜನ್ಮದಿನದ ನಿಮಿತ್ತ ಅಗಸ್ಟ 13 ಮತ್ತು 14 ರಂದು ಗ್ರಂಥಾಲಯ ದಿನ ಆಚರಿಸಲಾಗುತ್ತದೆ.

ನಾಡಿನ ಪ್ರತಿಷ್ಠಿತ ಸಪ್ನಾ ಪ್ರಕಾಶನ ಸಂಸ್ಥೆ ಸೇರಿದಂತೆ ಹಲವು ನಾಮಾಂಕಿತ ಪ್ರಕಾಶನ ಸಂಸ್ಥೆಗಳು ತಮ್ಮ ಪುಸ್ತಕ ಪ್ರದರ್ಶನ ಮತ್ತು ಮಾರಾಟದಲ್ಲಿ ಭಾಗವಹಿಸುತ್ತಿದ್ದು ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಇದರ ಪ್ರಯೋಜನ ಪಡೆಯಬಹುದಾಗಿದೆ.

RELATED ARTICLES  ಉತ್ತರ ಕನ್ನಡದ ಸಕ್ರಿಯ ಕೊರೋನಾ ಪ್ರಕರಣದಲ್ಲಿ ಇಬ್ಬರು ಕಡಿತ : ಅದೇಕೆ ಗೊತ್ತೇ?

ಹೊಸ ತಲೆಮಾರಿನ ಯುವ ಸಮುದಾಯಕ್ಕೆ ಸಾಹಿತ್ಯಿಕ, ನಾಟಕ, ಕಲೆ ಮೊದಲಾದ ಆಸ್ತಕಿಯನ್ನು ಪ್ರೋತ್ಯಾಹಿಸುವುದು ಇದರ ಆಶಯವಾಗಿದೆ. ಪಠ್ಯ ಮತ್ತು ಪಠ್ಯೇತನ ಪುಸ್ತಕಗಳ ಮಾರಾಟ ಮತ್ತು ವಸ್ತು ಪ್ರದರ್ಶನವಿದ್ದು, ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ಇದರ ಪ್ರಯೋಜನ ಪಡೆಯಬಹುದು. ಗ್ರಂಥಾಲಯದ ದಿನಾಚರಣೆ ಈ ಮೂಲಕ ಆಚರಿಸುತ್ತಿರುವುದು ಪ್ರಶಂಸನೀಯ ಕಾರ್ಯ.

RELATED ARTICLES  ಜಿಲ್ಲೆಯ‌ ಹಲವೆಡೆ ಮಳೆ : ರೈತರಲ್ಲಿ ಮೂಡಿದ ಆತಂಕ