ಗಂಧರ್ವ ವಿದ್ಯಾಲಯ ಮೀರಜ್ ನವರು ಭರತನಾಟ್ಯ ಹಾಗೂ ಇನ್ನಿತರ ಕಲಾ ವಿದ್ಯಾರ್ಥಿಗಳಿಗೆ ನಡೆಸುವ “ಗಂಧರ್ವ ಪ್ರವೇಶಿಕಾ ಪ್ರಥಮ” ಪರೀಕ್ಷೆಯಲ್ಲಿ ಕುಮಟಾದ ದೀವಗಿಯ ಕು. ನಿತ್ಯಾ ಶಿವಪ್ರಸಾದ ದಿಂಡೆ ಅತ್ಯುತ್ತಮ ಸಾಧನೆ ತೋರಿದ್ದಾಳೆ. ಈ ಹಿಂದೆ ಹೊನ್ನಾವರ ಪರೀಕ್ಷಾ ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ ಈಕೆ ಭಾಗವಹಿಸಿದ್ದಳು. ಆ ಪರೀಕ್ಷೆಯ ಫಲಿತಾಂಶ ಬಂದಿದ್ದು ಈಕೆ ಉತ್ತರ ಕನ್ನಡ ಕರಾವಳಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಅತ್ಯುನ್ನತ (ಡಿಸ್ಟಿಂಕ್ಷನ್) ಪಡೆದ ಒಬ್ಬಳೇ ಒಬ್ಬ ಹುಡುಗಿ ಈಕೆ. ಸುಮಾರು 50ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಕು. ನಿತ್ಯಾ ಶಿವಪ್ರಸಾದ ದಿಂಡೆ ದೀವಗಿಯ ಪ್ರಸಿದ್ಧ ವೈದ್ಯರಾದ ಶ್ರೀ ಶಿವ ಪ್ರಸಾದ ದಿಂಡೆ ಹಾಗೂ ಶ್ರೀಮತಿ ಯಶಾ ದಿಂಡೆ ಇವರ ಸುಪುತ್ರಿ. ಕುಮಟಾದ ನಾದಶ್ರೀ ಕಲಾ ಕೇಂದ್ರದಲ್ಲಿ ಭರತನಾಟ್ಯ ಕಲಿಯುತ್ತಿರುವ ಈಕೆ ವಿದುಷಿ ನಯನಾ ಪ್ರಸನ್ನ ಪ್ರಭು ಇವರ ಶಿಷ್ಯೆ. ಈಕೆಯ ಸಾಧನೆಗೆ ಮನೆಯವರು ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES  ಕಾರ್ಮಿಕರ ಪ್ರತಿಭಟನಾ ಸ್ಥಳಕ್ಕೆ‌ ಭೇಟಿ ನೀಡಿದ ಮಾಜಿ ಶಾಸಕಿ ಶಾರದಾ ಶೆಟ್ಟಿ: ಕಷ್ಟಕ್ಕೆ ಸ್ಪಂದಿಸುವ ಭರವಸೆ.