ಕುಮಟಾ: ಶ್ರೀ ನಂದಿಕೇಶ್ವರ ಗ್ರಾಮ ಅರಣ್ಯ ಸಮಿತಿ ಬಂಗಣೆಯಿಂದ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ಶ್ರೀ ಪ್ರವೀಣಕುಮಾರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಕುಮಟಾ ಉಪವಿಭಾಗ ಕುಮಟಾರವರು ಕಾರ್ಯಕ್ರಮವನ್ನು ದೀಪ ಬೆಳೆಗಿಸುವುದರೊಂದಿಗೆ ಉದ್ಘಾಟಿಸಿ ಹಾಗೂ 6, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಿಸಿ ಮಾತನಾಡಿ ಇಂದಿನ ಮಕ್ಕಳು ನಾಳಿನ ಪ್ರಜೆಗಳು, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಅರಣ್ಯ ಹಾಗೂ ಪರಿಸರದ ಕುರಿತು ಪ್ರೀತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿ ತಮ್ಮ ಬಂಗಣೆ ಗ್ರಾಮದ ಸುತ್ತಮುತ್ತಲು ಪ್ರಕೃತಿದತ್ತವಾದ ವಿಶಾಲವಾದ ಅರಣ್ಯ ಪ್ರದೇಶವಿದೆ. ಸದರ ಅರಣ್ಯ ಪ್ರದೇಶವನ್ನು ಸುಸ್ಥಿರವಾಗಿ ಬೆಳೆಸಿ ಮುಂದಿನ ಜನಾಂಗಕ್ಕೆ ಪ್ರಕೃತಿದತ್ತವಾದ ಕೊಡುಗೆಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕಾರಣ ಇಂಥಹ ಕಾರ್ಯಕ್ರಮಗಳನ್ನು ಎಲ್ಲರ ಸಹಭಾಗಿತ್ವದೊಂದಿಗೆ ನಡೆಸುತ್ತಿರುವುದು ಸೂಕ್ತವಾಗಿರುತ್ತದೆ. ಪಾಲಕರು ಮಕ್ಕಳಿಗೆ ಸೂಕ್ತ ಸಮಯದಲ್ಲಿ ಶಿಕ್ಷಣ ನೀಡುವುದು ಮುಖ್ಯವಾಗಿರುತ್ತದೆಂದು ಕಾರ್ಯಗಾರರಲ್ಲಿ ತಿಳಿಸಿದರು.

RELATED ARTICLES  ಹೊನ್ನಾವರ ತಾಲೂಕಿನಲ್ಲಿ ಮಳೆಯ ಅವಾಂತರ

ಶ್ರೀ ವರದ ರಂಗನಾಥ ವಲಯ ಅರಣ್ಯಾಧಿಕಾರಿಗಳು ಕುಮಟಾರವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತನಾಡಿ ಗ್ರಾಮ ಅರಣ್ಯ ಸಮಿತಿಗಳಲ್ಲಿ 2 ನಿಧಿಗಳಿದ್ದು, ಅವುಗಳಲ್ಲಿ ಗ್ರಾಮ ಅಭಿವೃದ್ಧಿ ನಿಧಿ ಮತ್ತು ಗ್ರಾಮ ಅರಣ್ಯ ಅಭಿವೃದ್ಧಿ ನಿಧಿಗಳಾಗಿರುತ್ತದೆ. ಗ್ರಾಮ ಅಭಿವೃದ್ಧಿ ನಿಧಿಯಿಂದ ಗ್ರಾಮಕ್ಕೆ ಮತ್ತು ಸಮುದಾಯಕ್ಕೆ ಉಪಯೋಗವಾಗುವಂತಹ ಕೆಲಸ ಕಾರ್ಯಗಳನ್ನು ಕೈಗೊಳ್ಳಲು ಅವಕಾಶವಿರುತ್ತದೆ. ಅದರಂತೆ ಗ್ರಾಮ ಅಭಿವೃದ್ಧಿ ನಿಧಿಯಿಂದ ಅರಣ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಸ್ಕೂಲ್ ಬ್ಯಾಗ್ ನೀಡಲು ಅರಣ್ಯ ಸಮಿತಿ ಸಭೆಯಲ್ಲಿ ನಿರ್ಧರಿಸಿದಂತೆ ಇಂದು ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು. ಗ್ರಾಮ ಅರಣ್ಯ ಅಭಿವೃದ್ಧಿ ನಿಧಿಯಿಂದ ಅರಣ್ಯದ ಅಭಿವೃದ್ಧಿಗಾಗಿ ನೆಡುತೋಪು ಬೆಳೆಸಲು ಅವಕಾಶವಿರುತ್ತದೆ. ಹಾಗೂ ಇನ್ನಿತರ ಅರಣ್ಯ ಅಭಿವೃದ್ಧಿ ಚಟುವಟಿಕೆಗೆ ಕೈಗೊಳ್ಳಲು ಅವಕಾಶವಿರುತ್ತದೆ ಎಂದು ತಿಳಿಸಿದರು. ಅರಣ್ಯ ರಕ್ಷಣೆಗಾಗಿ ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ಹಾಗೂ ನೆಡುತೋಪುಗಳ ಪಾಲನೆಗಾಗಿ ಗ್ರಾಮ ಅರಣ್ಯ ಸಮಿತಿಯವರು ಸಕ್ರೀಯವಾಗಿ ಭಾಗವಹಿಸಿ ಅರಣ್ಯ ಇಲಾಖೆಗೆ ಸಹಕಾರ ನೀಡಬೇಕೆಂದು ತಿಳಿಸಿದರು.

RELATED ARTICLES  ಪಾದಯಾತ್ರೆ ಮೂಲಕ ಮತ ಯಾಚಿಸಿದ ನಿವೇದಿತ ಆಳ್ವಾ

ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಪ್ರಾರ್ಥನೆಯೊಂದಿಗೆ ಸಭೆಯನ್ನು ಪ್ರಾರಂಭಿಸಿದರು. ಮತ್ತು ಶ್ರೀಯುತ ಬೋರಕರ್ ಮುಖ್ಯೋಪಾಧ್ಯಾಯರು ಸಭೆಯಲ್ಲಿ ಎಲ್ಲರನ್ನು ಸ್ವಾಗತಿಸಿ ಮಾತನಾಡಿದರು. ಶ್ರೀ ಚಂದ್ರಕಾಂತ ಎಂ. ಉಪ ವಲಯ ಅರಣ್ಯಾಧಿಕಾರಿ ಬಡಾಳರವರು ಕಾರ್ಯಕ್ರಮವನ್ನು ಸಂಘಟಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರು, ಎಸ್.ಡಿ.ಎಂ.ಸಿ. ಅಧ್ಯಕ್ಷರು ಉಪಸ್ಥಿತರಿದ್ದರು. ಶ್ರೀ ದುರ್ಗು ಬಿ. ಹರಿಕಂತ್ರ ಸುಗಮಗಾರರು ಗ್ರಾಮ ಅರಣ್ಯ ಸಮಿತಿಯ ಕುರಿತು ಮಾತನಾಡಿ ಸಭೆಗೆ ವಂದನೆ ಸಲ್ಲಿಸಿದರು.