ಕುಮಟಾ: “ಮಕ್ಕಳಲ್ಲಿ ಕಂಡುಬರುವ ರಕ್ತಹೀನತೆ, ಅಪೌಷ್ಟಿಕತೆ, ಹಸಿವು ಆಗದಿರುವುದು, ನಿಶ್ಯಕ್ತಿ, ಹೊಟ್ಟೆನೋವು ಮುಂತಾದವುಗಳು ಜಂತುಹುಳುವಿನ ಸೊಂಕಿನಿಂದ ಕಂಡುಬರುವಂತಾಗಿದೆ.” ಈ ಜಂತುಹುಳು ನಿವಾರಕ ಅಲ್ಪೆಂಡೊಜೊಲ್ ಮಾತ್ರೆಯನ್ನು ಮಕ್ಕಳಿಗೆ ನುಂಗಿಸುವುದರ ಮೂಲಕ ತಡೆಗಟ್ಟಬಹುದು ಎಂದು ಡಾ.ಗಿರೀಶ ನಾಯ್ಕ ವೈದ್ಯಾಧಿಕರಿ (ಪ್ರಾಥಮಿಕ ಆರೋಗ್ಯ ಕೇಂದ್ರ) ಹಿರೇಗುತ್ತಿ ಇವರು ನುಡಿದರು.

ಅವರು ಹಿರೇಗುತ್ತಿ ಹೈಸ್ಕೂಲಿನಲ್ಲಿ ವಿಜ್ಞಾನ ಸಂಘ, ಇಕೋಕ್ಲಬ್, ಆರೋಗ್ಯಕೂಟದಿಂದ ನಡೆದ ಜಂತುಹುಳು ನಿವರಣೆ ದಿನಾಚರಣೆಯಂದು ಗಿಡಕ್ಕೆ ನೀರೆರಿಯುವುದರ ಮೂಲಕ ಚಾಲನೆ ನೀಡಿದರು.

RELATED ARTICLES  ಮುಂದುವರೆದ ಬಿಜೆಪಿ ಸೇರ್ಪಡೆ ಪರ್ವ

ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಾಧ್ಯಾಪಕರಾದ ರೋಹಿದಾಸ.ಎಸ್.ಗಾಂವಕರ “ಸರಕಾರ ಕೊಟ್ಟ ಜಂತುಹುಳು ನಿವಾರಕ ಮಾತ್ರೆಯನ್ನು ತೆಗೆದುಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ದೈನಂದಿನ ಕಾರ್ಯ ಚಟುವಟಿಕೆಯಲ್ಲಿ ಹೆಚ್ಚಾಗಿ ತೋಡಗಿಸಿಕೊಳ್ಳಲು ಸಹಕಾರಿಯಗುವುದರ ಜೊತೆಗೆ ಒಬ್ಬರಿಂದ ಒಬ್ಬರಿಗೆ ಸೊಂಕನ್ನು ತಡೆಗಟ್ಟಬಹುದು” ಎಂದರು.
ಪ್ರಶಿಕ್ಷಣಾರ್ಥಿ ದೀಪಾ ನಾಯ್ಕ ಮಾತನಾಡಿ “ವಿದ್ಯಾರ್ಥಿಗಳು ಶುದ್ಧ ನೀರು ಕುಡಿಯುವುದರಿಂದ ವೈಯಕ್ತಿಕ ಸ್ವಚ್ಚತೆಯಿಂದ, ಪರಿಸರ ಸ್ವಚ್ಚವಾಗಿಡುವುದರಿಂದ ಪರೋಕ್ಷವಾಗಿ ಜಂತುಹುಳು ಸೊಂಕು ತಡೆಯಬಹುದೆಂದರು”. ಮಾರ್ಗದರ್ಶಕ ಶಿಕ್ಷಕರಾದ ಮಹದೇವ ಬಿ ಗೌಡ ಇವರು ಪ್ರಾಸ್ತಾವಿಕ ಮಾತನಾಡಿದರು.

RELATED ARTICLES  ಫೆ. ೧೦ ಸೌಗಂಧಿಕ ಕವನ ಸಂಕಲನ ಬಿಡುಗಡೆ

ಕಾರ್ಯಕ್ರಮದಲ್ಲಿ ವಿಶ್ವನಾಥ.ಪಿ.ಬೇವಿನಕಟ್ಟಿ, ನಾಗರಾಜ.ಜಿ.ನಾಯಕ, ಎನ್.ರಾಮು ಹಿರೇಗುತ್ತಿ, ಜಾನಕಿ ಗೊಂಡ, ಇಂದಿರಾ ನಾಯಕ, ಶಿಲ್ಪಾ ನಾಯಕ, ಸೌಜನ್ಯ ಬಂಟ,ಕವಿತಾ ಅಂಬಿಗ ಹಾಗೂ ಬಿ.ಎಡ್ ಪ್ರಶಿಕ್ಷಾಣಾರ್ಥಿಗಳು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಶಶಿ ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾರ್ಥಿ ಪ್ರತಿನಿಧಿ ಸಹನಾ ಗೌಡ ಸ್ವಾಗತಿಸಿದಳು. ವಿದ್ಯಾರ್ಥಿ ಪ್ರತಿನಿಧಿ ವೆಂಕಟೇಶ.ಜೆ.ಪಟಗಾರ ನಿರ್ವಹಿಸಿದರು. ವಿನಯಾ ಗೌಡ ವಂದಿಸಿದರು.

ವರದಿ : ಎನ್ ರಾಮು ಹಿರೇಗುತ್ತಿ