ಯಲ್ಲಾಪುರ: ಬಸ್ ಹಾಗೂ ಕ್ಯಾಂಟರ್ ಮಧ್ಯೆ ಅಪಘಾತ ಸಂಭವಿಸಿ ಕ್ಯಾಂಟರ್ ಚಾಲಕ ಸ್ಥಳದಲ್ಲಿಯೇ ಸಾವನಫ್ಪಿ 15 ಜನ‌ಬಸ್ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಶನಿವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ 63 ಅರಬೈಲ್ ಘಟ್ಟದ ಮೇಲೆ ಸಂಭವಿಸಿದೆ.

ಮೃತ ಕ್ಯಾಂಟರ್ ಚಾಲಕನ‌ ಗುರುತು ಪತ್ತೆಯಾಗಿಲ್ಲ. ಹುಬ್ಬಳ್ಳಿಯಿಂದ ಕಾರವಾರಕ್ಕೆ ತೆರಳುತ್ತಿದ್ದ ಎದುರಿನಿಂದ ತೆರಳುತ್ತಿದ್ದ ವಾಹನವನ್ನು ಓವರ್ ಟೇಕ್ ಮಾಡಿಕೊಂಡ ಬಂದ ಕ್ಯಾಂಟರ ಚಾಲಕ ಬಸ್‌ಗೆ ಅಪಘಾತಪಡಿಸಿದ್ದಾನೆ ಎನ್ನಲಾಗಿದೆ. ಬಸ್ ಪ್ರಯಾಣಿರಾದ ಲಕ್ಮನ (26) ಓರಿಸ್ಸಾ, ವನ್ನಿಲ್ (25) ಒರಿಸ್ಸಾ, ಗೋಪಾಲ (32)
ಗೋಬಿಂಡೊ (25), ಸುರೇಂದ್ರ ವಿ ನಾಯ್ಕ {46) ಅಂಕೋಲಾ ಹಿಲ್ಲೂರು, ಪ್ರಸನ್ನ (32) ಹಿಲ್ಲೂರು, ಪೂರ್ಣಿಮಾ (28) ಹಿಲ್ಲೂರು, ರಿನೋವಾ {32) ಗದಗ, ಇಂದಿರಾ (46) ಶಿರಸಿ, ಜಾಕೀರಾ (28) ಯಲವಿಗಿ ಗದಗ, ಕೌಸ್ತುಭ (34) ನಾಸಿಕ ಹಾಗೂ ಇನ್ನಿತರರು ಗಾಯಗೊಂಡ ಬಸ್ ಪ್ರಯಾಣಿಕರಾಗಿದ್ದಾರೆ.ಗುಳ್ಳಾಪುರದ 108 ವಾಹನ ಹಾಗೂ ಖಾಸಗಿ ವಾಹನದ‌ ಮೂಲಕ ತಾಲ್ಲೂಕಾ ಆಸ್ಪತ್ರೆಯಲ್ಲಿ ದಾಖಲಿಲಾಗಿದೆ.

RELATED ARTICLES  ಕೊರೋನಾ ಸಂಕಷ್ಟದ ನಡುವೆಯೇ ಜನರಿಗೆ ವಿದ್ಯುತ್ ದರದ ಶಾಕ್..!

ಸ್ಥಳಕ್ಕೆ ಪೊಲೀಸ್ ನಿರೀಕ್ಷಕ ಡಾ ಮಂಜುನಾಥ ನಾಯಕ ಹಾಗೂ ಸಿಬ್ಬಂದಗಳು ಸ್ಥಳಕ್ಕೆ ಬೇಟಿ ನೀಡಿ, ಅಪಘಾತದಿಂದಾದ ಟ್ರಾಫಿಕ್ ಸಮಸ್ಯೆ ಬಗೆಹರಿಸಿದ್ದಾರೆ.
.

RELATED ARTICLES  ಡೆತ್ ನೋಟ ಬರೆದಿಟ್ಟು ಯುವಕ ಮುರ್ಡೇಶ್ವರ ಯುವಕ ಸಾವು