ಮಂಡ್ಯ : ಭತ್ತ ನಾಟಿ ಮಾಡಲು ಸೀತಾಪುರಕ್ಕೆ ಆಗಮಿಸಿ ಅರಳುಕುಪ್ಪೆಯ ಜಮೀನಿನಲ್ಲಿ ಭತ್ತ ನಾಟಿ ಮಾಡಿದ ಸಿಎಂ ಕುಮಾರಸ್ವಾಮಿ ವರುಣ ಸ್ವಾಗತ ಕೋರಿದ್ದಾನೆ.

ಕೆಂಚೇಗೌಡರ ಕುಟುಂಬಕ್ಕೆ ಸೇರಿದ ಐದು ಎಕರೆ ಜಮೀನಿನಲ್ಲಿ ನಡೆದ ಭತ್ತದ ನಾಟಿಯಲ್ಲಿ ಕುಮಾರಸ್ವಾಮಿ ಭಾಗವಹಿಸಿದ್ದರು. 150 ಜನ ರೈತ ಮಹಿಳೆಯರು, 50 ಜನ ರೈತರು ನಾಟಿ ಮಾಡಿದರು. ನಾಟಿ ವೇಳೆ ಪಾಂಡವಪುರ ತಾಲೂಕಿನ ಹೆಗ್ಗಡಹಳ್ಳಿಯ ಸೋಬಾನೆ ಕೃಷ್ಣೇಗೌಡ ತಂಡದಿಂದ ಸೋಬಾನೆ ಪದ ಗಾಯನ ನಡೆಯಿತು.

ನಂತರ ಮಾತನಾಡಿದ ಸಿಎಂ, ನನ್ನ ರೈತ ಬಂಧುಗಳಿಗೆ ವಂದನೆ ಸಲ್ಲಿಸುತ್ತೇನೆ, ಸೀತಾಪುರ ಗ್ರಾಮದಲ್ಲಿ ರೈತರ ಜೊತೆಗೂಡಿ ನಾಟಿ ಕಾರ್ಯ ಮಾಡಿರುವುದು ಜೀವನದಲ್ಲಿ ಸಾರ್ಥಕತೆ ಹಾಗೂ ಪುಣ್ಯ, ಇನ್ನೊಂದು ವಾರದಲ್ಲಿ ರೈತರ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲವೂ ಮನ್ನಾ ಮಾಡಲಾಗುವುದು, ಮುಂದಿನ ತಿಂಗಳಿನಿಂದ ರಾಜ್ಯದ 30 ಜಿಲ್ಲೆಗೂ ಭೇಟಿ ಕೊಡುತ್ತೇನೆ, ತಿಂಗಳಲ್ಲಿ ಒಂದು ದಿನ ರೈತರ ಜೊತೆ ಕೃಷಿ ಚಟುವಟಿಕೆಯಲ್ಲಿ ಭಾಗಯಾಗ್ತೀನಿ, ಯಾರು ಆತ್ಮಹತ್ಯೆಗೆ ಶರಣಾಗಬೇಡಿ, ನಿಮ್ಮ ಜೊತೆ ನಾವಿದ್ದೇವೆ.

RELATED ARTICLES  ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ; ನನ್ನ ರಾಜಕೀಯ ಗುರುಗಳ ಮಗನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವುದು ನನ್ನ ಭಾಗ್ಯ: ಡಿಕೆಶಿ

ಗೌರಿಗಣೇಶ ಹಬ್ಬದಷ್ಟರಲ್ಲಿ ರೈತರಿಗೆ ಒಳ್ಳೆಯ ಕಾರ್ಯಕ್ರಮ ಕೊಡುತ್ತೇನೆ, ರಾಜ್ಯದ ಆರುವರೆ ಕೋಟಿ ಜನರಿಗೂ ಒಳ್ಳೆಯ ಕಾರ್ಯಕ್ರಮ ಕೊಡುತ್ತೇನೆ ಎಂ ತಿಳಿಸಿದ್ದರು. ಸಿಎಂ ನಾಟಿ ಮಾಡಲಿದ್ದ ಹಿನ್ನೆಲೆಯಲ್ಲಿ ಅರಳುಕುಪ್ಪೆ ಜಮೀನಿನಲ್ಲಿ ವ್ಯಾಪಕ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಬ್ಯಾರಿಕೇಡ್, ಎಲ್‌ಇಡಿ ಸ್ಕ್ರೀನ್ ಅಳವಡಿಸಲಾಗಿತ್ತು. ಮೆಟಲ್ ಡಿಟೆಕ್ಟರ್ ಮೂಲಕ ಮೂಲಕ ಪ್ರತಿಯೊಬ್ಬರ ತಪಾಸಣೆ ನಡೆಸಲಾಗಿದೆ.

RELATED ARTICLES  ಗುಟ್ಕಾ ಹಗರಣ: ತಮಿಳು ನಾಡಿನಲ್ಲಿ 40 ಕಡೆ ಸಿಬಿಐ ದಾಳಿ.

ಬಿಜೆಪಿ ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಕುಮಾರಸ್ವಾಮಿ, ನಾಟಿ ಕಾರ್ಯವನ್ನ ಮಾಡಿ ಸಿಎಂ ಡ್ರಾಮಾ ಮಾಡ್ತಿದ್ದಾರೆಂದು ಹೇಳಿದ್ದಾರೆ, ಆದರೆ ನಾನು ನಾಟಕ ಮಾಡಲು ಇಲ್ಲಿಗೆ ಬಂದಿಲ್ಲ, ಡ್ರಾಮಾ ಮಾಡಲು ಬಂದಿಲ್ಲ ಎಂದು ಹೇಳಿದ್ದಾರೆ.