ತುಮಕೂರು : ಯಡಿಯೂರಪ್ಪ ನೀಡುವ ಸರ್ಟಿಫಿಕೇಟ್ ನಮಗೆ ಬೇಕಿಲ್ಲ ‘ ಎಂದು ತುಮಕೂರಲ್ಲಿ ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ. ‘ ಸರ್ಕಾರ ಉಸ್ತುವಾರಿ ನೇಮಕ, ಸಾಲಮನ್ನಾ ವಿಚಾರ ಕಾಲ ಕಳೆಯುತ್ತೆಂದು ಬಿಎಸ್ವೈ ಆರೋಪಿಸಿದ್ದರು. ‘ ಯಡಿಯೂರಪ್ಪ ತಮ್ಮ ಹಿಂದಿನ ಅವಧಿಯನ್ನು ತಿರುಗಿನೋಡಿಕೊಳ್ಳಲಿ..’ ಎಂದು ಬಿಎಸ್ ವೈ ಗೆ ಡಿಸಿಎಂ ಪರಮೇಶ್ವರ್ ಟಾಂಗ್ ಕೊಟ್ಟಿದ್ದಾರೆ.

ಪಕ್ಷದಲ್ಲಿ ಉಸ್ತುವಾರಿ ನೇಮಕ ಅಸಮಾಧಾನ ವಿಚಾರವಾಗಿ ಮಾತನಾಡಿದ ಅವರು ‘ ಸಮನ್ವಯ ಸಮಿತಿಯಲ್ಲಿ ಈ ವಿಚಾರ ಚರ್ಚೆ ಆಗಬೇಕೆಂದೇನಿಲ್ಲ. ಎರಡು ಪಕ್ಷದ ಪ್ರಮುಖರು ಚರ್ಚಿಸಿ ನಿರ್ಧರಿಸಲಾಗಿದೆ. ಜನರ ಒಳಿತಿಗಾಗಿ ಸಮ್ಮಿಶ್ರ ಸರ್ಕಾರ ರಚನೆಯಾಗಿರೋದು ‘ ಎಂದರು.
‘ ಸಂಸತ್ ಚುನಾವಣೆಯಲ್ಲಿ ಈ ‌ಬಾರಿ ಹೊಸ ಮುಖಗಳಿಗೆ ಆದ್ಯತೆ ನೀಡಲಾಗುವುದು. ಯುವಕರು, ಮಹಿಳೆಯರಿಗೆ ಆಧ್ಯತೆ ನೀಡಲು ರಾಹುಲ್ ತಿಳಿಸಿದ್ದಾರೆ ‘ ಟಿಕೆಟ್ ವಿಚಾರದಲ್ಲಿ ಹಾಲಿ ಸಂಸದರಿಗೆ ಡಿಸಿಎಂ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

RELATED ARTICLES  ಹೊನ್ನಾವರದಲ್ಲಿ ಗಲಬೆ? ವಿಡಿಯೋ ವೈರಲ್!

ಸಾವಿರಕ್ಕೂ ಅಧಿಕ ಹೋಮ್ ಗಾರ್ಡ್ ಗಳು ಅಮಾನತು,ನೋಟಿಸ್ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ ‘ ಹೊಮ್ ಗಾರ್ಡ್ ಹುದ್ದೆಗಳು ಸರ್ಕಾರದ ನೇಮಕಾತಿಯಲ್ಲ. ಸೇವಾ ಮನೋಭಾವದಿಂದ ಸ್ವಯಂ ಪ್ರೇರಣೆಯಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಅವರು ಪ್ರತಿಭಟಿಸುವ ಅವಶ್ಯಕತೆ ಕಂಡು ಬರಲ್ಲ ‘ ಎಂದು ತುಮಕೂರಿನಲ್ಲಿ ಡಿಸಿಎಂ ಹೇಳಿಕೆ ನೀಡಿದ್ದಾರೆ.

RELATED ARTICLES  ಇಂದು ಉತ್ತರಕನ್ನಡದಲ್ಲಿ 41 ಮಂದಿಗೆ ಕೊರೋನಾ ಪಾಸಿಟೀವ್...!