ಕುಮಟಾ: ಕೊಂಕಣಿ ಭಾಷೆಯನ್ನು 1992 ಅ 20ರಂದು ದೇಶದ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಅಧಿಕೃತವಾಗಿ ರಾಷ್ಟ್ರ ಭಾಷೆಯಾಗಿ ಸೇರಿಸಲಾಗಿದ್ದು, ಈ ಒಂದು ಐತಿಹಾಸಿಕ ಕೊಂಕಣಿಗೆ ರಾಷ್ಟ್ರ ಭಾಷೆ ಮಾನ್ಯತೆ ದೊರೆತ ದಿನದ ನಿಮಿತ್ತ ಈ ಐತಿಹಾಸಿಕ ದಿನವನ್ನು ಕೊಂಕಣಿ ಮಾನ್ಯತಾ ದಿವಸ್ ಎಂದು ವಿಜೃಂಭಣೆಯಿಂದ ಆಚರಿಸುತ್ತಿದ್ದು, ಅಂದು ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಕೊಂಕಣಿಗರನ್ನು ಗುರುತಿಸಿ, ಸನ್ಮಾನಿಸಲಾಗುವುದು. ಅಲ್ಲದೆ ಕೊಂಕಣಿ ಕಲೆ, ಸಾಹಿತ್ಯ ಸೇರಿದಂತೆ ವಿವಿಧ ಪ್ರಕಾರದ ಸಂಸ್ಕøತಿಯನ್ನು ಪ್ರೋತ್ಸಾಹಿಸುವ ಕಾರ್ಯ ಪರಿಷತ್‍ನಿಂದ ಮಾಡುತ್ತೇವೆ ಎಂದರು. ಅ 20ರಂದು ಪಟ್ಟಣದ ಗಿಬ್ ಪ್ರೌಢ ಶಾಲೆಯ ರಾಜೇಂದ್ರ ಪ್ರಸಾದ ಸಭಾಭವನದಲ್ಲಿ ತಾಲೂಕಾ ಕೊಂಕಣಿ ಪರಿಷತ್ ವತಿಯಿಂದ “ಕೊಂಕಣಿ ಮಾನ್ಯತಾ ದಿವಸ್” ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಕೊಂಕಣಿ ಪರಿಷತ್ ಕುಮಟಾದ ತಾಲೂಕು ಅಧ್ಯಕ್ಷ ಅರುಣ ಉಭಯಕರ್ ತಿಳಿಸಿದರು.

RELATED ARTICLES  ದೀವಗಿಯಲ್ಲಿ ಭಜನಾ ಸಪ್ತಾಹ

ಕಾರ್ಯಕ್ರಮದ ಸಂಘಟನಾ ಸಮಿತಿ ಅಧ್ಯಕ್ಷೆ ವನಿತಾ ಎಸ್ ನಾಯಕ ಮತ್ತು ಕಾರ್ಯದರ್ಶಿ ನಿರ್ಮಲಾ ಪ್ರಭು ಮಾತನಾಡಿ, ಅಂದು ನಡೆಯುವ “ಕೊಂಕಣಿ ಮಾನ್ಯತಾ ದಿವಸ್” ಕಾರ್ಯಕ್ರಮದ ಉದ್ಘಾಟನೆಯನ್ನು ಮುಂಬೈನ ಡಾ ಸಿಂಧೂ ಆರ್ ಶಾನಭಾಗ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಘಟನಾ ಸಮಿತಿ ಅಧ್ಯಕ್ಷೆ ವನಿತಾ ಎಸ್ ನಾಯ್ಕ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸಾಮಾಜಿಕ ಕಾರ್ಯಕರ್ತೆ ಶಕುಂತಲಾ ಆರ್ ಕಿಣಿ ಮಂಗಳೂರು, ಸಂಧ್ಯಾ ಕುರ್ಡೇಕರ್, ಟಿಎಚ್‍ಒ ಡಾ ಆಜ್ಞಾ ನಾಯಕ ಮತ್ತು ಸಿಂಡಿಕೇಟ್ ಬ್ಯಾಂಕ್‍ನ ನಿವೃತ್ತ ಮ್ಯಾನೇಜರ್ ಜಸಿಂತಾ ಗೋನ್ಸಾಲ್ವಿಸ್ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಮನರಂಜನೆಯಾಗಿ ಮಹಿಳೆಯರ ದಾಂಡಿಯಾ ನೈತ್ಯ ಹಾಗೂ ಚಿಕ್ಕ ಮಕ್ಕಳ ಸಾಂಸ್ಕ್ರತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಸರ್ವಜನಿಕರು ಆಗಮಿಸಿ ಪ್ರೋತ್ಸಾಹಿಸಬೇಕು ಎಂದು ವಿನಂತಿಸಿದರು.

RELATED ARTICLES  UPSC ಫಲಿತಾಂಶ : ಹೊನ್ನಾವರದ ದೀಪಕ್ ಶೇಟ್ ಸಾಧನೆ.

ಪರಿಷತ್‍ನ ಉಪಾಧ್ಯಕ್ಷ ಮುರಳೀಧರ ಪ್ರಭು ಮಾತನಾಡಿ, ಮಾತೃ ಭಾಷೆ ಕೊಂಕಣಿ ಉಳಿದಿರುವುದೆ ಮಾತೆಯವರಿಂದ. ಅವರೇ ಭಾಷೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರಿಗೆ ವಿಶೇಷ ಅವಕಾಶ ನೀಡುವ ಸದುದ್ದೇಶದಿಂದ ಈ ಕಾರ್ಯಕ್ರಮದ ಸಂಪೂರ್ಣ ಜವಬ್ದಾರಿಯನ್ನು ಮಹಿಳೆಯರಿಗೆ ವಹಿಸಲಾಗಿದೆ. ಹಾಗಾಗಿ ಈ ಕಾರ್ಯಕ್ರಮಕ್ಕೆ ಎಲ್ಲ ಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಾತೆಯರನ್ನು ಪ್ರೋತ್ಸಾಹಿಸಬೇಕೆಂದು ಕೋರಿದರು.

ಪ್ರಮುಖರಾದ ಎಂ ಬಿ ಪೈ, ಅರುಣ ಮಣಕೀಕರ್, ಎಂ ಕೆ ಶಾನಭಾಗ, ವನಿತಾ ನಾಯಕ, ನಿರ್ಮಲಾ ಪ್ರಭು ಹಾಗೂ ಇತರರು ಉಪಸ್ಥಿತರಿದ್ದರು.