ಬೆಂಗಳೂರು: ಹಂಪಿನಗರದಲ್ಲಿರುವ ಶ್ರೀಭಾರತೀ ವಿದ್ಯಾಲಯದ ಇತಿಹಾಸದಲ್ಲೇ ಮೊದಲ ಬಾರಿಗೆ ಇಂದು ಹಳೆಯ ವಿದ್ಯಾರ್ಥಿಗಳ ಒಕ್ಕೂಟವು ಉದ್ಘಾಟನೆಯಾಯಿತು. ಇದರ ಮೂಲಕ ಹೊಸ ಅಧ್ಯಾಯವೊಂದು ಶ್ರೀಭಾರತೀ ವಿದ್ಯಾಲಯದ ಪುಸ್ತಕಕ್ಕೆ ಸೇರಿತು.

‌ಗುರುವಂದನೆ ಹಾಗೂ ದೀಪೋಜ್ವಲನದ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ವೈಷ್ಣವಿ ರಾಜ್ ಸ್ವಾಗತಿಸಿದರು. ಶ್ರೀ ರಾಮಚಂದ್ರಾಪುರಮಠದ ವಿದ್ಯಾ ವಿಭಾಗದ ಕಾರ್ಯದರ್ಶಿಗಳಾದ ಶ್ರೀ ಪ್ರಮೋದ ಪಂಡಿತ್ ಅವರು ನೆರೆದ ಛಾತ್ರರನ್ನುದ್ದೇಶಿಸಿ ಮಾತನಾಡುತ್ತ, ದೇಶ ವಿದೇಶಿಗಳಲ್ಲಿ ನಮ್ಮ ಶಾಲೆಯ ರಾಯಭಾರಿಗಳು ನೀವೇ, ನೀವು ಕೇವಲ ಈ ಪುಸ್ತಿಕೆಯ ಅಧ್ಯಾಯವಾಗುವುದಲ್ಲ, ಬದಲಾಗಿ ಅದರ ರಕ್ಷಾಕವಚವಾಗಬೇಕು ಎಂದು ಬಹಳ ಮಾರ್ಮಿಕವಾಗಿ ನುಡಿದರು. ಹಳೆಯ ವಿದ್ಯಾರ್ಥಿಗಳು ಬೇರೆ ಬೇರೆ ವಿಷಯವನ್ನಾಧರಿಸಿದ 6 Technical session ಗಳನ್ನು ಬಹಳ ಆಕರ್ಷಕ ರೀತಿಯಲ್ಲಿ ಚಟುವಟಿಕೆಗಳ ಮೂಲಕ ನಡೆಸಿಕೊಟ್ಟರು.

RELATED ARTICLES  ಭಟ್ಕಳ ಪ್ರಕರಣದಲ್ಲಿ ಜಾಮೀನುಪಡೆದು ಬಿಡುಗಡೆಗೊಂಡ ಪ್ರಮುಖರು ಹೇಳಿದ್ದೇನು?ವಿಡಿಯೋ ನೋಡಿ.

‌ಸಮಾವೇಶದ ವಿಷಯಗಳು
‌ಉನ್ನತ ವಿದ್ಯಾಭ್ಯಾಸ
‌ಪಾಠೋಪಕರಣ ಹಾಗೂ ತಂತ್ರಜ್ಞಾನದ ಬಳಕೆ
‌ಪಠ್ಯೇತರ ಚಟುವಟಿಕೆಗಳ ಮಹತ್ವ
‌ಶೈಕ್ಷಣಿಕ ಸಾಧನೆ
‌ವಿದ್ಯಾರ್ಥಿಗಳ ದೃಷ್ಟಿಯಲ್ಲಿ ಶಾಲೆಯ ಒಳಾಂಗಣ ರಚನೆ

ವಿದ್ಯಾರ್ಥಿಗಳಿಂದ ಹಾಡು, ನೃತ್ಯ, ಮಿಮಿಕ್ರಿ ಇತ್ಯಾದಿ ಮನೋರಂಜನಾ ಕಾರ್ಯಕ್ರಮಗಳೂ ನಡೆದವು. ಈ ಮಧ್ಯೆ ಸಿದ್ದಾಪುರದ ಭಾನ್ಕುಳಿಯಲ್ಲಿ ನಿರ್ಮಿತವಾಗಿರುವ ಗೋಸ್ವರ್ಗ ವೆಂಬ ವುನೂತನ ಕಲ್ಪನೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು.
‌ಶಾಲೆಯ ಶಿಕ್ಷಕರೂ ಕೂಡ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ISRO ದ ನಿವೃತ್ತ ವಿಜ್ಞಾನಿಗಳಾದ ಶ್ರೀ ಪಿ.ಜೆ.ಭಟ್ ಇವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಶಾಲೆಯ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಹೆಗಡೆಯವರು ವಿದ್ಯಾರ್ಥಿಗಳಿಂದ ಬಂದ ಸಲಹೆಗಳನ್ನು ಸ್ವೀಕರಿಸಿ ಅಳವಡಿಸುವುದಾಗಿ ಭರವಸೆಯಿತ್ತರು. ಶಾಲೆಯ ಶಿಕ್ಷಕಿ ಅನಂತಲಕ್ಷ್ಮೀಯವರು ವಂದನಾರ್ಪಣೆಗೈದರು. ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಲ್ಲ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

RELATED ARTICLES  ಉತ್ತರಕನ್ನಡಕ್ಕೆ ಭೇಟಿನೀಡಿದ ಸಿ.ಎಂ‌: ಜನರ ಕಷ್ಟಕ್ಕೆ ಸ್ಪಂದಿಸುವ ಭರವಸೆ