ತಿರುವನಂತಪುರಂ: ಕೇರಳದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದ ಸಾವಿಗೀಡಾದವರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. ರಾಜ್ಯದ 14 ಜಿಲ್ಲೆಗಳಲ್ಲಿ 11 ಜಿಲ್ಲೆಗಳು ನೆರೆಯಿಂದ ಜಲಾವೃತವಾಗಿದೆ,
ಸಧ್ಯ ಮಳೆ ತುಸು ಕಡಿಮೆಯಾಗಿದ್ದು ಶನಿವಾರ ಸಂಜೆಯ ವೇಳೆಗೆ ಪ್ರವಾಹ ಇಳಿಮುಖವಾಗಿದೆ.ಆದರೆ ಇನ್ನೂ ಒಂದು ದಿನ ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಜನರು ಜಾಗೃತರಾಗಿರುವಂತೆ ಎಚ್ಚರಿಕೆ ನೀಡಲಾಗಿದೆ.
ಸತತ ಮಳೆಯಿಂದ ರಾಜ್ಯಾದ್ಯಂತ 25 ಕಡೆ ಭೂಕುಸಿತ, ಗೋಡೆ ಕುಸಿತಗಳು ಉಂಟಾಗಿದೆ.ಅಳಪ್ಪುಳ, ಎರ್ನಾಕುಳಂ ಮತ್ತು ವಯನಾಡ್ ಜಿಲ್ಲೆಗಳು ಅತಿ ಹೆಚ್ಚು ಪ್ರವಾಹದಿಂದ ಹಾನಿಗೊಳಗಾಗಿದೆ.ಈ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸಂಖ್ಯೆಯ ನಿರಾಶ್ರಿತರ ಶಿಬಿರ ತೆರೆಯಲಾಗಿದೆ.