ಉತ್ತರ ಕನ್ನಡ : ತಾಲ್ಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಕಾರಣದಿಂದ, ವಿದ್ಯಾರ್ಥಿಗಳಿಗೆ ಅನಾನುಕೂಲ ಆಗುವ ಹಿನ್ನಲೆಯಲ್ಲಿ ನಾಳೆ ಮಂಗಳವಾರ ಒಂದು ದಿನ ಉತ್ತರ ಕನ್ನಡದ ಕೆಲ ತಾಲೂಕಿನ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ವರದಿಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಶಿರಸಿ, ಸಿದ್ಧಾಪುರ ,ಕಾರವಾರ ಹಾಗೂ ಅಂಕೋಲಾ ತಾಲೂಕಿನ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

RELATED ARTICLES  ಮಂಕಿಯಲ್ಲಿ ಚಿರಾಯು ಹೆಲ್ತಕೆರ ಉದ್ಘಾಟನೆ.

ಎಲ್. ಕೆ.ಜಿ ಯಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ರಜೆ ಘೋಷಣೆ ಮಾಡಲಾಗಿದೆ ಎಂದು ವರದಿಯಾಗಿದೆ. ಆಯಾ ಸ್ಥಳದ ಪರಿಸ್ಥಿತಿ ನೋಡಿ ರಜೆಯ ಬದಲಾವಣೆ ಮಾಡಬಹುದೆಂದು ಅಧಿಕೃತ ಮೂಲಗಳು ತಿಳಿಸಿದೆ.

RELATED ARTICLES  ಮಳೆ ಮುಗಿದರೂ ಮುಗಿದಿಲ್ಲ ಅವಾಂತರ : ರಸ್ತೆ ಸರಿಪಡಿಸಲು ಜಿಲ್ಲಾಡಳಿತ ಹರ ಸಾಹಸ

ಯಲ್ಲಾಪುರದಲ್ಲಿ ಆಗಸ್ಟ್ 14 ರಂದು ಒಂದು ಒಂದು ದಿನ ಶಾಲೆಗಳಿಗೆ ರಜೆ ನೀಡುವಂತೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಅರ್ ಹೆಗಡೆ ತಿಳಿಸಿದ್ದಾರೆ.

ನಾಡಿದ್ದು ಬುಧವಾರ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮಗಳು ಶಾಲೆಗಳಲ್ಲಿ ನಡೆಯಲಿದೆ.