ಸುಳ್ಯ: ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ , ಸುಳ್ಯ – ಮಡಿಕೇರಿ ರಸ್ತೆ ನಡುವಿನ ಸಂಪಾಜೆ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿದಿದ್ದು ಸಂಚಾರ ಸ್ಥಗಿತಗೊಂಡಿದೆ.
ಸಂಪಾಜೆ ಪ್ರದೇಶದಲ್ಲಿ ಪದೇ – ಪದೇ ಗುಡ್ಡ ಕುಸಿದು ರಸ್ತೆಗೆ ಬೀಳುತ್ತಿದ್ದ, ಮಡಿಕೇರಿ ಮತ್ತು ತಾಳತ್ತಮನೆ ನಡುವಿನ ರಸ್ತೆ ಸಂಪೂರ್ಣ ಕುಸಿದು ಹೋಗಿದೆ. ಈ ಘಾಟಿಯಲ್ಲಿ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ.. ಆದರೆ ತಡರಾತ್ರಿಯಿಂದಲೇ ಗುಡ್ಡ ಕುಸಿದು ರಸ್ತೆಗೆ ಬೀಳುತ್ತಿದ್ದು, ಇಂದು ಬೆಳ್ಳಗ್ಗೆ ಅಧಿಕಾರಿಗಳು ಜೆಸಿಬಿ ಮೂಲಕ ರಸ್ತೆಗೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸುತ್ತಿದ್ದಾಗ ಮತ್ತೆ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿಯಲು ಆರಂಭಿಸಿದೆ ಎಂದು ವರದಿಯಾಗಿದೆ.
ಈಗ ಸುಳ್ಯ – ಮಡಿಕೇರಿ ರಸ್ತೆಯಲ್ಲಿ ಸಂಚಾರವನ್ನು ಸಂಪೂರ್ಣ ಬಂದ್ ಸ್ಥಗಿತಗೊಳಿಸಲಾಗಿದ್ದು, ಎರಡೂ ಭಾಗದ ರಸ್ತೆಯಲ್ಲಿ ವಾಹನಗಳು ಸಾಲು ಕಟ್ಟಿ ನಿಲ್ಲುವಂತಾಗಿದೆ

RELATED ARTICLES  ಏರುತ್ತಿದೆ ಚುನಾವಣಾ ಕಾವು: ಫೆ 20 ಕ್ಕೆ ಕುಮಟಾಕ್ಕೆ ಆಗಮಿಸಲಿದ್ದಾರೆ ಬಿಜೆಪಿ ಚಾಣಾಕ್ಷ್ಯ ಅಮಿತ್ ಶಾ!