ಶಿರಸಿ :ಟಿ.ಎಸ್.ಎಸ್. ಸುಪರ್ ಮಾರ್ಕೆಟ್‍ನಲ್ಲಿ ನಡೆಯುತ್ತಿರುವ “ಸ್ವಾದ ವೈವಿಧ್ಯ” ಸ್ಥಳದಲ್ಲೇ ಅಡುಗೆಮಾಡುವ ಸ್ಪರ್ಧಾ ಸರಣಿಯ ತೃತೀಯ ಸ್ಪರ್ಧೆಯ ಪ್ರಯುಕ್ತ ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿರುವ ಸಿಹಿ ತಿಂಡಿಯಾದ ಕಡುಬನ್ನು ಸ್ಥಳದಲ್ಲೇ ತಯಾರಿಸುವ ಸ್ಪರ್ಧೆಯನ್ನು ಕಾರ್ಯಕ್ರಮದಲ್ಲಿ ಆಯೋಜಿಸಲಾಗಿತ್ತು.

ಈ ಸ್ಪರ್ಧೆಯಲ್ಲಿ ಶ್ರೀಮತಿ ಲೀಲಾವತಿ ದಿವಾಕರ ಹೆಗಡೆ ಗಡಿಮನೆ ಪ್ರಥಮ ಸ್ಥಾನ ಹಾಗೂ ಶ್ರೀಮತಿ ರೇಣುಕಾ ಶ್ರೀಪತಿ ಭಟ್ಟ ಬ್ಯಾಗದ್ದೆ ದ್ವಿತೀಯ ಸ್ಥಾನಗಳಿಸಿದ್ದಾರೆ. ಐವರು ಸ್ಪರ್ಧಾಳುಗಳು ಭಾಗವಹಿಸಿದ್ದ ಈ ಸ್ಪರ್ಧೆಗೆ ಶಿರಸಿಯ ನಿಸರ್ಗ ಆಸ್ಪತ್ರೆಯ ಖ್ಯಾತ ವೈದ್ಯರಾದ ಶ್ರೀ ವೆಂಕಟ್ರಮಣ ಹೆಗಡೆ, ಹಾಗೂ ಶಿರಸಿಯ ತೋಟಗಾರಿಕಾ ಸಂಶೋಧನಾ & ವಿಸ್ತರಣಾ ಕೇಂದ್ರದ ಪ್ರಾಧ್ಯಾಪಕರಾದ ಮಂಜು ಎಮ್.ಜೆ. ನಿರ್ಣಾಯಕರಾಗಿ ತೀರ್ಪು ನೀಡಿದರು.

RELATED ARTICLES  ಇತರರಿಗೆ ಮಾದರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಕುಮಟಾ ರೋಟ್ರಾಕ್ಟ ಸದಸ್ಯರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಶಾಂತಾರಾಮ ವಿ. ಹೆಗಡೆ ಶೀಗೇಹಳ್ಳಿ, ಆಡಳಿತ ಮಂಡಳಿ ನಿರ್ದೇಶಕರಾದ ಶ್ರೀ ವಿ. ವಿ. ಹೆಗಡೆ ಬಾಳೇಹದ್ದ, ಶ್ರೀ ಆರ್.ಆರ್. ಹೆಗಡೆ ಐನಕೈ ಹಾಗೂ ಸಂಘದ ಪ್ರಧಾನ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES  ಅಘನಾಶಿನಿ ಜೀವದೊಡಲ ನೈಜ ಸತ್ಯಕ್ಕೆ ಸಾಕ್ಷಿಯಾಯ್ತು ಕುಮಟಾದಲ್ಲಿ ಪ್ರದರ್ಶನ ಕಂಡ ಅಘನಾಶಿನಿ ಸಾಕ್ಷ್ಯಚಿತ್ರ!