ಕುಮಟಾ : ಹಿರೇಗುತ್ತಿ ಇಲ್ಲಿನ ಲಲಿತಾ ತಿಮ್ಮಪ್ಪ ನಾಯಕ ಸ್ಮರಣಾರ್ಥ ಸಭಾ ಭವನದಲ್ಲಿ ರವಿವಾರ ಸಂಜೆ ಅಪರೂಪದ ಸನ್ಮಾನ ಸಮಾರಂಭ ಊರ ನಾಗರಿಕರ ವತಿಯಿಂದ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸ ಮಾತನಾಡಿದ ಸ್ಥಳೀಯ ಶಾಸಕ ದಿನಕರ ಶೆಟ್ಟಿ “ ಅಪರೂಪದ ಎದೆಗಾರಿಕೆ ಮತ್ತು ಸಂಘಟನಾ ಶಕ್ತಿ ಹೊಂದಿರುವ ಹಿರೇಗುತ್ತಿ ಗ್ರಾಮಸ್ಥರು ಎಂತಹ ಕಠಿಣ ಸವಾಲುಗಳನ್ನು ಸ್ವೀಕರಿಸಿ ಕಾರ್ಯ ಪೂರೈಸುವ ಗುಣ ಇರುವವರು. ಈ ಹಿಂದೆ ಶಾಸಕನಾಗಿದ್ದಾಗ ಹಿರೇಗುತ್ತಿಗೆ ಜಿಲ್ಲೆಯ ಉಳಿದೆಲ್ಲ ಕಡೆಗಳಿಗಿಂತ ಮೊದಲು 108 ವಾಹನ ಬಂದಿತು.ಇದಕ್ಕೆ ಕಾರಣರಾದವರು ಪೊಲೀಸ್ ಅಧಿಕಾರಿಗಳಾದ ಎನ್.ಟಿ. ಪ್ರಮೋದ ರಾವ್ ಮತ್ತು ಹಿರಿಯ ಪತ್ರಕರ್ತರಾದ ಗಂಗಾಧರ ಹಿರೇಗುತ್ತಿಯವರಾಗಿದ್ದಾರೆ. ನನ್ನಿಂದ ಗ್ರಾಮಕ್ಕೆ ಈ ವ್ಯವಸ್ಥೆ ಬರಲು ಅವರ ಒತ್ತಡ ಹಿನ್ನೆಲೆಯಾಗಿದೆ. ಇಂತಹ ಊರಿನಲ್ಲಿ ಸನ್ಮಾನ ಪಡೆಯುತ್ತಿರುವುದಕ್ಕೆ ನನಗೆ ಅತೀವ ಸಂತೋಷ ಉಂಟಾಗಿದೆ. ಗ್ರಾಮಕ್ಕೆ ಅವಶ್ಯ ಇರುವ ಯಾವುದೇ ಸಾಮಾಜಿಕ ಕೆಲಸಕ್ಕೆ ನನ್ನ ನಿರಂತರ ಬೆಂಬಲ ಇದೆ ” ಎಂದು ಶಾಸಕರು ನುಡಿದರು.
ಹಿರಿಯ ಪೊಲೀಸ್ ಅಧಿಕಾರಿ ಎನ್.ಟಿ.ಪ್ರಮೋದರಾವ್ ಸಭೆಯಲ್ಲಿ ಮಾತನಾಡಿ “ಯಾವುದೇ ಊರು ಬೆಳೆಯ ಬೇಕಾದರೆ ಗ್ರಾಮಸ್ಥರ ಒಗ್ಗಟ್ಟು ಬಹು ಮುಖ್ಯವಾದದು. ಒಗ್ಗಟ್ಟಿನಿಂದ ಗ್ರಾಮಕ್ಕೆ ಬೇಕಾದ ಯಾವುದೇ ಕೆಲಸವನ್ನು ಮಾಡಿಕೊಳ್ಳುವ ಮತ್ತು ಮಾಡಿಸಿಕೊಳ್ಳುವ ಶಕ್ತಿ ಪ್ರಾಪ್ತವಾಗುತ್ತದೆ.ಆದ್ದರಿಂದ ಯಾವುದೇ ಸಮಸ್ಯೆಗೆ ಎಲ್ಲರೂ ಏಕತ್ರವಾಗಿ ನಿಂತು ಅದನ್ನು ಬಗೆ ಹರಿಸಿಕೊಳ್ಳುವಂತೆ ಅವರು ಸೂಚಿಸಿದರು”.
ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ ಮಾತನಾಡಿ “ ಹಿರೇಗುತ್ತಿ ನನ್ನ ಜನ್ಮ ಭೂಮಿಯಾದರೂ ನನ್ನ ತಾಯಿಯ ತವರು ತೊರ್ಕೆ ನನ್ನ ಮನದಳಾದಲ್ಲಿ ಅಚ್ಚಳಿಯದ ಸ್ಮøತಿಗಳನ್ನು ನೆಲೆ ನಿಲ್ಲಿಸಿದೆ.ಇದಕ್ಕೆ ತೊರ್ಕೆಯ ತೆರೆದ ವಿಶಾಲ ಬಯಲು,ಉಪ್ಪಿನ ಆಗರ ಮತ್ತು ವಿಶಿಷ್ಟ ಪರಿಸರ ಕಾರಣ ಆಗಿರ ಬಹುದು.ಹಿರೇಗುತ್ತಿಯಲ್ಲಿನ ನನ್ನ ಪದವಿ ತರುವಾಯದ ನಿರುದ್ಯೋಗದ ದಿನಗಳು ಮತ್ತು ಕೆಲವರು ನನ್ನನ್ನು ನೋಡಿಕೊಂಡ ರೀತಿ ಜೀವನದಲ್ಲಿ ಎಂತಹ ಸವಾಲುಗಳನ್ನು ಕೂಡ ಸ್ವೀಕರಿಸುವ ಛಲವನ್ನು ಹುಟ್ಟು ಹಾಕಿತು. ಕಠಿಣ ಪರಿಶ್ರಮ ಮತ್ತು ಎದೆಗುಂದದೆ ಸಾಗುವ ಛಲದಿಂದ ಎಂತಹ ಸಾಧನೆಯನ್ನು ಮಾಡ ಬಹುದಾಗಿದೆ.ಎಂದು ಹಿರೇಗುತ್ತಿ ನುಡಿದರು.ಹಿರೇಗುತ್ತಿಯಲ್ಲಿನ ಇಂದಿನ ಮುಖ್ಯ ಸಮಸ್ಯೆಯಾದ ಚತುಷ್ಪಥ ನಿರ್ಮಾಣಕ್ಕೆ ಎಲ್ಲರೂ ಸಹಮತದಿಂದ ಕೆಲಸ ಮಾಡುವಂತೆ ಅವರು ಕೇಳಿಕೊಂಡರು”.
ಪತ್ರಕರ್ತ ಶ್ರೀಧರ ಅಡಿ ಮಾತನಾಡಿ ಸ್ವಾಮಿ ವಿವೇಕಾನಂದರು ಅಮೇರಿಕಗೆ ತೆರಳಿದಾಗ ಕೇವಲ ಎರಡೇ ಎರಡು ಶಬ್ದಗಳಲ್ಲಿ ಭಾರತೀಯ ಸಂಸ್ಕøತಿಯನ್ನು ವಿವರಿಸಲು ಕೇಳಿಕೊಳ್ಳಲಾಯಿತು. ಆಗ ಅವರು ಹೇಳಿದ್ದು ಯುನಿವರ್ಸ್‍ಲ್ ಎಕ್ಸೆಪ್ಟನ್ಸ್ ಮತ್ತು ಟೊಲರೆನ್ಸ್ ಇದೇ ನಮ್ಮ ಸಂಸ್ಕøತಿಯ ಜೀವಾಳ ಎಂದರು. ಅಂದರೆ ಜಾತಿ ಧರ್ಮ ಮೇಲು ಕೀಳು ಬಿಳಿಯ ಕರಿಯ ಹೆಣ್ಣು ಗಂಡು ದೇಶ ವಿದೇಶ ಎಂಬ ಭೇದ ಕಾಣದೆ ವಿಶ್ವದ ಎಲ್ಲರನ್ನು ಒಪ್ಪಿಕೊಳ್ಳುವುದು. ಮತ್ತು ಈ ಎಲ್ಲರ ಬಗ್ಗೆ ನಾವು ಪಡೆದಿರುವ ಸಹಿಸ್ಣತೆ ಇದೆ ನಿಜವಾದ ಭಾರತೀಯ ಸಂಸ್ಕøತಿ ಎಂದರು. ಇವೆರಡೂ ಹಿರೇಗುತ್ತಿಯಲ್ಲಿದೆ.ಇಲ್ಲಿನ ಜನರಲ್ಲಿದೆ ಎಂದು ಹೇಳಿದರು. ಕಾರ್ಯ ಕ್ರಮದ ಘನ ಅಧ್ಯಕ್ಷತೆ ವಹಿಸಿದ ಬೀರಣ್ಣ ಯು. ಕೆಂಚನ್ ಹಿರೇಗುತ್ತಿ, “ ಹಿರೇಗುತ್ತಿ ಊರಿನ ಸಮಸ್ಥ ನಾಗರೀಕರು ತಮ್ಮದೇ ಕಾರ್ಯಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಸಾಧನೆ ಗೈಯ್ದ ಮಹನೀಯರನ್ನು ಸನ್ಮಾನಿಸಿರುವುದು ಅತ್ಯಂತ ಶ್ಲಾಘನೆಯ ಕಾರ್ಯ ಎಂದು ಸಂಘಟಕರನ್ನು ಅಭಿನಂದಿಸಿದರು. ಈ ಸನ್ಮಾನ ಕಾರ್ಯಕ್ರಮದಲ್ಲಿ ಬೆಳಕು ಟ್ರಸ್ಟ್ ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ, ನ್ಯಾಯವಾದಿ ನಾಗರಾಜ ನಾಯಕ, ಉದ್ಯಮಿ ಆನಂದ ಕವರಿ ಮತ್ತು ಸ್ಥಳೀಯರಾದ ಮಂಗಳೂರಿನ ಸೂರಜ್ ಎಜ್ಯುಕೇಶನಲ್ ಮತ್ತು ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಶಿಕ್ಷಣ ತಜ್ಞ ಮಂಜುನಾಥ ರೇವಕರ ಹಿರೇಗುತ್ತಿ ನನ್ನ ಊರಿನಲ್ಲಿ ನನ್ನನು ಸನ್ಮಾನಿಸಿರುವುದು ನನ್ನ ಜೀವನದಲ್ಲಿಯೇ ಅತಿ ಸಂತಸದ ದಿನವಾಗಿದೆ ನನ್ನ ಊರಿನ ವಿದ್ಯಾರ್ಥಿಗಳಿಗೆ ತನ್ನಿದಾದ ಸಹಾಯ ಸಹಕಾರ ನೀಡುತ್ತೇನೆ ಎಂದರು. ಕವಿಯತ್ರಿ ಶ್ರೀದೇವಿ ಕೆರೆಮನೆ ಅವರ ಮನೆದಾಳದ ಮಾತು ಕೃತಿಯನ್ನು ಗಂಗಾಧರ ಹಿರೇಗುತ್ತಿ ಬಿಡುಗಡೆಗೊಳಿಸಿದರು. ಶ್ರೀದೇವಿ ಕೆರೆಮನೆ ಮಾತನಾಡಿ “ ನನ್ನ ಹಿರೇಗುತ್ತಿ ಊರಿನ ಜನರ ಎದೆಗಾರಿಕೆ ಧೈರ್ಯದ ಒರತೆ ಸದಾ ಚಿಮ್ಮುತ್ತಿರಲಿ ಎಂದರು” . ಶಿಕ್ಷಕಿ ಕಲ್ಪನಾ ಗೋಪಾಲ ನಾಯಕ ಮಾತನಾಡಿ ನನ್ನ ಹಿರೇಗುತ್ತಿ ಊರಿನಲ್ಲಿ ರಷ್ಯಾದಲ್ಲಿ ಎಮ್.ಬಿ.ಬಿ.ಎಸ್ ಕಲಿಯುತ್ತಿರುವ ನನ್ನ ಮಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಸನ್ಮಾನ ಮಾಡಿದ ಸಂಘಟಕರಿಗೆ ಧನ್ಯವಾದ ಸಲ್ಲಿಸಿದರು. ಗ್ರಾ.ಪಂ. ಅಧ್ಯಕ್ಷ ಸಣ್ಣಪ್ಪ ನಾಯಕ, ಸೊಸೈಟಿ ಅಧ್ಯಕ್ಷ ನೀಲಕಂಠ ಎನ್. ನಾಯಕ, ಶ್ರೀ ಬ್ರಹ್ಮ ಜಟಕ ಯುವಕ ಸಂಘ ಅಧ್ಯಕ್ಷ ರಾಜು ಗಾಂವಕರ, ರಷ್ಯಾದಲ್ಲಿ ವೈದ್ಯಕೀಯ ಶಿಕ್ಷಣ ಕೈಗೊಳ್ಳುತ್ತಿರುವ ಸ್ಥಳೀಯ ಪ್ರತಿಭೆ ಶೀತಲ್ ನಾಯಕ ಮತ್ತು ಹಿರಿಯ ಸಾಹಿತಿ ಬೀರಣ್ಣ ನಾಯಕ ಉಪಸ್ಥಿತರಿದ್ದರು. ಶಶಿ ಸಂಗಡಿಗರ ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಉದ್ದಂಡ ಗಾಂವಕರ ಸರ್ವರನ್ನು ಸ್ವಾಗತಿಸಿದರು ಎನ್. ರಾಮು ಹಿರೇಗುತ್ತಿ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ ನಾಯಕ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಘಟಕರಾದ ರಾಮು ಕೆಂಚನ್, ರಾಮದಾಸ ಎಸ್. ನಾಯಕ, ರಾಮಕೃಷ್ಣ ಟಿ. ನಾಯಕ, ದೇವಿದಾಸ ನಾಯಕ, ಊರಿನ ಯುವಕ ಸಂಘದವರು ಮತ್ತು ನಾಗರಿಕರು ಎಲ್ಲಾ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ವರದಿ: ಎನ್. ರಾಮು ಹಿರೇಗುತ್ತಿ