ಭಟ್ಕಳ : ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಭಟ್ಕಳ ತಾಲೂಕಿನ ಗೊರಟೆ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಾಮೂಹಿಕ ಹಾಗೂ ವೈಯಕ್ತಿಕ ದೇಶಭಕ್ತಿ ಗೀತೆ ಸ್ಪರ್ಧೆ ಆಯೋಜಿಸಲಾಗಿತ್ತು.
ಬಹುಮಾನ ವಿತರಿಸಿ ಮಾತನಾಡಿದ ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ದೇಶಭಕ್ತಿಯನ್ನು ಗೀತೆಗಳನ್ನು ಹಾಡುವ ಮೂಲಕ ಸ್ವತಂತ್ರ್ಯ ಪೂರ್ವ ಮತ್ತು ಇಂದಿನ ಇತಿಹಾಸ ಸ್ಮರಿಸಿಕೊಂಡು ಭವ್ಯ ಬವಿಷ್ಯವನ್ನು ನಿರ್ಮಿಸುವ ಸತ್ ಪ್ರಜೆಗಳಾಗಿ ರೂಪುಗೊಂಡರೆ ಸ್ವತಂತ್ರ್ಯ ಹೋರಾಟಗಾರರು ನೀಡಿದ ಬಲಿದಾನಕ್ಕೆ ಬೆಲೆನೀಡಿದಂತಾಗುತ್ತದೆ. ವಿದ್ಯಾರ್ಥಿ ಜೀವನವನ್ನು ಅಧ್ಯಯನ ಅಧ್ಯಾಪನದಲ್ಲಿ ತೊಡಗಿಸಿಕೊಂಡು ವಿದ್ಯಾವಂತ, ಸಚ್ಛಾರಿತ್ರ್ಯವಂತರಾಗಿ ಈ ದೇಶಕ್ಕೆ ಕೊಡುಗೆ ನೀಡುವ ಕಾರ್ಯ ಮಾಡಬಹುದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧ್ಯಾಪಕ ರಾಘವೇಂದ್ರ ನಾಯ್ಕ ಮಾತನಾಡಿ ಭಟ್ಕಳ ತಾಲೂಕಾ ಕಸಾಪ ಕಳೆದೆರಡು ವರ್ಷಗಳಿಂದ ವೈವೀಧ್ಯಮಯ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿಧ್ಯಾರ್ಥಿಗಳಲ್ಲಿ ಸಾಹಿತ್ಯ ಸಂಗೀತಗಳಲ್ಲಿ ಆಸಕ್ತಿ ಮೂಡಿಸುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಪರಿಷತ್ತಿನಿಂದ ಇನ್ನಷ್ಟು ಉತ್ತಮ ಕಾರ್ಯಕ್ರಮ ಸಂಘಟನೆಯಾಗುವಂತಾಗಲಿ ಎಂದರು. ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದ ಕಸಾಪ ಸಂಘಟನ ಕಾರ್ಯದರ್ಶಿ ಪ್ರಕಾಶ ಶಿರಾಲಿ ವಿಧ್ಯಾರ್ಥಿಗಳ ಯಶಸ್ಸಿಗೆ ಶುಭ ಹಾರೈಸಿದರು. ದೇಶಭಕ್ತಿ ಗೀತೆ ವೈಯಕ್ತಿಕ ಸ್ಪರ್ಧೆಯಲ್ಲಿ ನಿತೇಶ ಕೃಷ್ಣ ಕುರಾಡೆ, ಭವ್ಯ ಶ್ರೀಧರ ನಾಯ್ಕ ಸೌಮ್ಯ ರಾಮಕೃಷ್ಣ ನಾಯ್ಕ
ಅನುಕ್ರಮವಾಗಿ ಪ್ರಥಮ ದ್ವಿತೀಯ ಹಾಗೂ ತ್ರತೀಯ ಸ್ಥಾನ ಪಡೆದರೆ ಸಮೂಹ ದೇಶ ಭಕ್ತಿ ಗೀತೆಯಲ್ಲಿ ಸೌಮ್ಯ ಸಂಗಡಿಗರು ಪ್ರಥಮ ಸ್ಥಾನ, ಹರ್ಷಿತಾ ಸಂಗಡಿಗರು ದ್ವಿತೀಯ ಹಾಗೂ ಸುಷ್ಮಿತಾ ಸಂಗಡಿಗರು ತೃತೀಯ ಸ್ಥಾನ ಪಡೆದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದೈಹಿಕ ಶಿಕ್ಷಕ ಮಧುಕರ ಹೆಗಡೆಕರ್ ನಿರ್ವಹಿಸಿದರು. ಕಾರ್ಯಕ್ರಮದ ನಂತರ ವಿಧ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.