ಕುಮಟಾ: ಇಲ್ಲಿನ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ವರದಿಗಾರರಾದ ಸುಬ್ರಾಯ ಭಟ್ಟ ಅವಿರೋಧವಾಗಿವಾಗಿ ಅಯ್ಕೆಯಾಗಿದ್ದಾರೆ. ಇವರು ಕನ್ನಡ ಪ್ರಭ ಪತ್ರಿಕೆಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದು ಹಿಂದಿನ ಅವಧಿಗೂ ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯಕ್ರಮಗಳನ್ನು ಸಂಘಟಿಸಿದ್ದರು ಹಾಗೂ ಕಾರ್ಯ ಯೋಜನೆ ಕೈಗೊಂಡಿದ್ದರು.

ಇದೇ ಸಂದರ್ಭ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಕಾರ್ಯದರ್ಶಿಯಾಗಿ ಸಂಯುಕ್ತ ಕರ್ನಾಟಕ ವರದಿಗಾರರಾದ ಜಿ.ಡಿ.ಶಾನಭಾಗ ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

RELATED ARTICLES  ಬಣ್ಣ‌ ಬಳಿದ ಹಾಗೂ ಪಿಒಪಿ ಗಣಪತಿ ಮೂರ್ತಿಗಳನ್ನು ಸಮುದ್ರದಲ್ಲಿ ವಿಸರ್ಜನೆ ಮಾಡಿದರೆ ಶಿಕ್ಷೆ

ಖಜಾಂಚಿಯಾಗಿ ಕರಾವಳಿ ಮುಂಜಾವು ವರದಿಗಾರ ಪವನ ಹೆಗಡೆ ಅವರನ್ನು ನೇಮಿಸಲಾಯಿತು.

ಸಲಹಾ ಸಮಿತಿ ಸದಸ್ಯರಾಗಿ ವಿಸ್ಮಯ ಟಿವಿ ಕಾರ್ಯಕ್ರಮ ನಿರೂಪಕರು ಹಾಗೂ ಸತ್ವಾಧಾರ ನ್ಯೂಸ್ ನ ಸಹ ಪ್ರಧಾನರಾದ ಜಯದೇವ ಬಳಗಂಡಿ, ಪ್ರಜಾವಾಣಿ ವರದಿಗಾರ ಎಂ.ಜಿ.ನಾಯ್ಕ, ದೂರದರ್ಶನ ವಾಹಿನಿಯ ವರದಿಗಾರ ಗಣೇಶ ರಾವ್, ಉದಯವಾಣಿ ವರದಿಗಾರ ಶಂಕರ ಶರ್ಮ, ಕರಾವಳಿ ಮುಂಜಾವು ವರದಿಗಾರ ನಾಗರಾಜ ಪಟಗಾರ, ಎಂ.ಎನ್.ಭಟ್ಟ ಆಯ್ಕೆಯಾದರು.

RELATED ARTICLES  ಕುಮಟಾದಲ್ಲಿ ಡಿ.7 ರಿಂದ ಕೋಳಿ ಸಾಕಣಿಕೆ ಉಚಿತ ತರಬೇತಿ

ಈ ಆಯ್ಕೆ ಪ್ರಕ್ರಿಯೆಯ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಶ್ರೀಕಾಂತ ಶಾನಭಾಗ, ನೂತನ ಟವಿ ವರದಿಗಾರ ದಿನೇಶ ಗಾಂವ್ಕರ್ ಹಾಗೂ ಇತರರು ಉಪಸ್ಥಿತರಿದ್ದರು.