ಯಲ್ಲಾಪುರ: ಭಾರೀ ಮಳೆಗೆ ಅರೆಬೈಲ್ ಘಾಟ್ನಲ್ಲಿ ಗುಡ್ಡವೊಂದು ಕುಸಿದು ಖಾಸಗಿ ಬಸ್ ಮೇಲೆ ಬಿದ್ದಿರುವ ಘಟನೆ ನಡೆದಿದೆ. ಅದೃಷ್ಟವಷಾತ್ ಪ್ರಯಾಣಿಕರು ಯಾವುದೇ ಸಾವು – ನೋವು ಸಂಭವಿಸದೆ ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಗುಡ್ಡ ರಸ್ತೆಗೆ ಕುಸಿದು ಬಿದ್ದಇರುವುದರಿಂದ ಹುಬ್ಬಳ್ಳಿ -ಅಂಕೋಲಾ ಸಂಪರ್ಕಿಸುವ ಹೆದ್ದಾರಿಯಲ್ಲಿ ಸಂಪರ್ಕ ಸ್ಥಗಿತಗೊಂಡಿದೆ.
ಇದರಿಂದಾಗಿ ವಾಹನ ಸವಾರರು ಮತ್ತು ಪ್ರಯಾಣಿಕರು ಪರದಾಡಬೇಕಾಗಿತ್ತು.
ಅಧಿಕಾರಿಗಳು ಜೆಸಿಬಿ ಯಂತ್ರದೊಂದಿಗೆ ಸ್ಥಳಕ್ಕಾಗಮಿಸಿ ಮಣ್ಣು ತೆರವು ಮಾಡಿಸಿ ಸಂಪರ್ಕಕ್ಕೆ ಅನುಕೂಲ ಮಾಡಿ ಕೊಟ್ಟಿರುವ ಬಗ್ಗೆ ವರದಿಯಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು ತಗ್ಗು ಪ್ರದೇಶಗಳು ಜಲಾವೃತವಾಗಿದೆ ಎಂದು ವರದಿಯಾಗಿದೆ.

RELATED ARTICLES  ನವೋದಯ ಸ್ವ-ಸಹಾಯ ಸಂಘ ಉದ್ಘಾಟನೆ