ಭಾರತೀಯ ಆಹಾರ ಪದ್ಧತಿಯಲ್ಲಿ ಪ್ರಮುಖವಾಗಿ ಬಳಸುವಂತಹ ಸಾಂಬಾರ ಪದಾರ್ಥಗಳಲ್ಲಿ ಒಂದಾಗಿರುವ ಬೆಳ್ಳುಳ್ಳಿಯಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಇವೆ ಎನ್ನುವುದು ಹಿಂದಿನಿಂದಲೂ ತಿಳಿದುಕೊಂಡು ಬಂದಿರುವಂತಹ ವಿಚಾರ. ಪೋಷಕಾಂಶಗಳ ಆಗರವಾಗಿರುವ ಬೆಳ್ಳುಳ್ಳಿಯು ದೇಹದಲ್ಲಿನ ಪ್ರತಿರೋಧಕ ಶಕ್ತಿ ಹೆಚ್ಚಿಸಿ, ಉರಿಯೂತ ತಗ್ಗಿಸಿ, ಅಕಾಲಿಕ ವಯಸ್ಸಾಗುವ ಲಕ್ಷಣ ಮರೆಮಾಚಿ, ರಕ್ತನಾಳಗಳಿಗೆ ಆರಾಮ ನೀಡಿ ಹಾನಿಯಾಗದಂತೆ ತಡೆಯುವುದು. ಇದರಿಂದಾಗಿ ಹೃದಯಾಘಾತ ಮತ್ತು ಸಂಧಿವಾತದಂತಹ ಸಮಸ್ಯೆ ನಿವಾರಣೆ ಮಾಡುವುದು. ಆದರೆ ಬೆಳ್ಳುಳ್ಳಿಯು ತೂಕ ಕಳೆದುಕೊಳ್ಳಲು ಸಹಕಾರಿ ಎಂದು ನಿಮಗೆ ತಿಳಿದಿದೆಯಾ? ಹೌದು, ಈ ಲೇಖನದಲ್ಲಿ ಬೆಳ್ಳುಳ್ಳಿಯಿಂದ ತೂಕ ಕಳೆದುಕೊಳ್ಳುವುದು ಹೇಗೆ ಎಂದು ತಿಳಿಸಿಕೊಡಲಿದ್ದೇವೆ. ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು ಬೆಳ್ಳುಳ್ಳಿಯಲ್ಲಿ ವಿಟಮಿನ್ ಬಿ6, ವಿಟಮಿನ್ ಸಿ, ಮ್ಯಾಂಗನೀಸ್ ಮತ್ತು ಸೆಲೆನಿಯಂ ಸಮೃದ್ಧವಾಗಿದೆ. ಇದರಲ್ಲಿ ಕೆಲವೊಂದು ಖನಿಜಾಂಶಗಳಾದ ಫ್ರೊಸ್ಪರಸ್, ಪೊಟಾಶಿಯಂ, ಕ್ಯಾಲ್ಸಿಯಂ, ಕಬ್ಬಿನ ಮತ್ತು ತಾಮ್ರವಿದೆ.

ಬೆಳ್ಳುಳ್ಳಿ ಮತ್ತು ತೂಕ ಇಳಿಸುವಿಕೆ ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಎನ್ನುವ ಅಂಶದಿಂದಾಗಿ ತೂಕ ಇಳಿಸಲು ಇದು ನೆರವಾಗಲಿದೆ ಎಂದು ಕೊರಿಯಾದ ಅಧ್ಯಯನವೊಂದು ತಿಳಿಸಿದೆ. 2011ರಲ್ಲಿ ಜರ್ನಲ್ ಆಫ್ ನ್ಯೂಟ್ರಿಷನ್ ನಲ್ಲಿ ಈ ಅಧ್ಯಯನ ವರದಿ ಪ್ರಕಟಿಸಲಾಗಿದೆ. ಈ ಅಧ್ಯಯನವು ಬೆಳ್ಳುಳ್ಳಿ ಮತ್ತು ಕೊಬ್ಬು ಕರುಗುವ ಮಧ್ಯೆ ಸಂಬಂಧ ಕಂಡುಕೊಂಡಿದೆ. ಹೆಚ್ಚು ಹಳೆ ಬೆಳ್ಳುಳ್ಳಿ ಸಾರ ಮತ್ತು ವ್ಯಾಯಾಮದಿಂದ ತೂಕ ಕಳೆದುಕೊಳ್ಳಲು ಸಾಧ್ಯವಾಗಲಿದೆ. ಹಳೆ ಬೆಳ್ಳುಳ್ಳಿ ಸಾರ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಋತುಬಂಧದ ಬಳಿಕ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಕಾಯಿಲೆಗಳನ್ನು ನಿವಾರಿಸುವುದು ಎಂದು ನ್ಯೂಟ್ರಿಷನ್ ರಿಸರ್ಚ್ ಆ್ಯಂಡ್ ಪ್ರಾಕ್ಟೀಸ್ ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯು ಹೇಳಿದೆ.

RELATED ARTICLES  ಮೂಲವ್ಯಾಧಿ ಅಥವಾ ಹೆಮರಾಯ್ಡಗಳು ಬಗೆಗೆ ಇದೆ ಹಲವಾರು ಮಾಹಿತಿ.

ಅಡುಗೆಗೆ ಬಳಸುವ ಮೊದಲು ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ಇಟ್ಟರೆ ಅದು ತುಂಬಾ ಪರಿಣಾಮಕಾರಿ ಯಾಗಿರಲಿದೆ. ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ಅಡುಗೆಗೆ ಬಳಸುವ ಮೊದಲು ಸುಮಾರು ಹತ್ತು ನಿಮಿಷ ಕಾಲ ಕೋಣೆಯ ತಾಪಮಾನದಲ್ಲಿ ಇಟ್ಟರೆ ಅದರಿಂದ ಶೇ.70ರಷ್ಟು ಅಂಶಗಳು ದೇಹಕ್ಕೆ ಲಭ್ಯವಾಗುತ್ತದೆ ಎಂದು ವರದಿಗಳು ಹೇಳಿವೆ. ಬೆಳ್ಳುಳ್ಳಿ ಜಜ್ಜಿಕೊಳ್ಳುವುದರಿಂದ ಆರೋಗ್ಯಕಾರಿ ಅಂಶಗಳು ಬಿಡುಗಡೆಯಾಗುವುದು ಮತ್ತು ಇದರಿಂದ ಬೆಳ್ಳುಳ್ಳಿಯ ಸಂಪೂರ್ಣ ಆರೋಗ್ಯ ಲಾಭಗಳು ಲಭ್ಯವಾಗುವುದು. ಬೆಳ್ಳುಳ್ಳಿಯಲ್ಲಿ ಮೈಕ್ರೋವೇವ್ ನಲ್ಲಿ ಇಟ್ಟರೆ ಅದರಿಂದ ರೋಗಗಳ ವಿರುದ್ಧ ಹೋರಾಡುವ ಅಂಶಗಳು ನಷ್ಟವಾಗುವುದು.

ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುವುದು:

ಬೆಳ್ಳುಳ್ಳಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನೈಸರ್ಗಿಕವಾಗಿ ತಗ್ಗಿಸುವುದು. 2006ರಲ್ಲಿ ನಡೆಸಿರುವ ಅಧ್ಯಯನದ ಪ್ರಕಾರ ಬೆಳ್ಳುಳ್ಳಿಯು ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುವುದು ಮತ್ತು ಅಪಧಮನಿ ಕಾಠಿಣ್ಯ ಅಪಾಯ ತಗ್ಗಿಸುವುದು. ಮಧುಮೇಹದಿಂದಾಗಿ ಅಪಧಮನಿ ಕಾಠಿಣ್ಯದ ಸಮಸ್ಯೆಯು ಹೆಚ್ಚಾಗಿರುವುದು. ಬೆಳ್ಳುಳ್ಳಿ ಸೇವನೆಯಿಂದಾಗಿ ಹೃದಯದ ಸಮಸ್ಯೆ ಕಡಿಮೆ ಮಾಡಬಹುದು. ಶೇ.80ರಷ್ಟು ಮಧುಮೇಹಿಗಳಲ್ಲಿ ಇದು ಕಡಿಮೆಯಾಗಿರುವುದು.

RELATED ARTICLES  ಬಜೆ ಬೇರು ಬಹುಉಪಯೋಗಿ: ನಿಮಗೆ ಗೊತ್ತಾ?

ಲೋಹವನ್ನು ಹೊರಹಾಕುವುದು:

ಬೆಳ್ಳುಳ್ಳಿಯು ದೇಹ ಸೇರಿಕೊಂಡಿರುವ ಭಾರವಾದ ಲೋಹಗಳನ್ನು ಹೊರಹಾಕುವುದು. ಭಾರದ ಲೋಹದಿಂದ ಅಂಗಾಂಗಗಳಿಗೆ ಹಾನಿಯಾಗುವುದನ್ನು ಬೆಳ್ಳುಳ್ಳಿಯಲ್ಲಿ ಸಲ್ಫರ್ ತಡೆಯುವುದು.

ರಕ್ತದೊತ್ತಡ ತಗ್ಗಿಸುವುದು:

ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಲ್ಲಿ ರಕ್ತದೊತ್ತಡ ಕಡಿಮೆ ಮಾಡುವಲ್ಲಿ ಬೆಳ್ಳುಳ್ಳಿಯು ಪ್ರಮುಖ ಪಾತ್ರ ವಹಿಸುವುದು. ಬೆಳ್ಳುಳ್ಳಿಯನ್ನು ನಿಯಮಿತವಾಗಿ ಸೇವನೆ ಮಾಡಿದರೆ ಅದರಿಂದ ಹೃದಯ ಕಾಯಿಲೆಗಳಾದ ಹೃದಯಾಘಾತ ಮತ್ತು ಪಾರ್ಶ್ವವಾಯು ತಡೆಯಬಹುದು.

ಆಹಾರ ಕ್ರಮದಲ್ಲಿ ಬೆಳ್ಳುಳ್ಳಿ ಸೇರಿಸಿಕೊಳ್ಳುವುದು ಹೇಗೆ?

ತೂಕ ಇಳಿಸಿಕೊಳ್ಳಬೇಕೆಂದು ಬಯಸಿರುವವರು ಆಹಾರದಲ್ಲಿ ಬೆಳ್ಳುಳ್ಳಿಯನ್ನು ಬಳಸಬಹುದು.
1. ಉಪಾಹಾರಕ್ಕೆ ಮೊಟ್ಟೆ ಅಥವಾ ಆಮ್ಲೆಟ್ ಗೆ ಸಣ್ಣಗೆ ಕೊಚ್ಚಿರುವ ಮಾಡಿಕೊಂಡ ಬೆಳ್ಳುಳ್ಳಿ ಹಾಕಿ.
2. ಮಧ್ಯಾಹ್ನ ಊಟಕ್ಕೆ ತುಂಡು ಮಾಡಿರುವ ಬೆಳ್ಳುಳ್ಳಿಯನ್ನು ಪ್ರೋಟೀನ್ ಅಥವಾ ತರಕಾರಿಗೆ ಹಾಕಿಕೊಳ್ಳಿ. ಬೆಳ್ಳುಳ್ಳಿಯನ್ನು ಅನ್ನಕ್ಕೆ ಹಾಕಿಕೊಳ್ಳಬಹುದು.
3. ರಾತ್ರಿ ಊಟಕ್ಕೆ ಫ್ರೈ ಮಾಡಿರುವ ಮಶ್ರೂಮ್ ಜತೆಗೆ ಕತ್ತರಿಸಿಕೊಂಡಿರುವ ಬೆಳ್ಳುಳ್ಳಿ ಮತ್ತು ತರಕಾರಿ ತಿನ್ನಬಹುದು.

ಸಲಹೆ:
ಕೆಲವು ಬೆಳ್ಳುಳ್ಳಿ ಎಸಲುಗಳನ್ನು ಜಜ್ಜಿಕೊಂಡು ಅದನ್ನು ಜೇನುತುಪ್ಪಕ್ಕೆ ಹಾಕಿಕೊಳ್ಳಿ.
ಇದನ್ನು ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದರಿಂದ ತೂಕ ಕಳೆದುಕೊಳ್ಳಲು, ಪ್ರತಿರೋಧಕ ಶಕ್ತಿ ಹೆಚ್ಚಿಸಲು ಮತ್ತು ದೇಹವನ್ನು ಬಲಿಷ್ಠ ಹಾಗೂ ಆರೋಗ್ಯವಾಗಿಡಲು ನೆರವಾಗುವುದು.