ಹೊಸದಿಲ್ಲಿ : ಇಂದು ಸಂಜೆ 4 ಗಂಟೆಗೆ ಮಹದಾಯಿ ನದಿಯ ನೀರು ಹಂಚಿಕೆ ವಿವಾದದ ಪ್ರಕ್ರೀಯೆಯನ್ನು ಜೆ.ಎಂ.ಪಾಂಚಾಲ ನೇತೃತ್ವದ ಮಹದಾಯಿ ನ್ಯಾಯ ಮಂಡಳಿಯು ಅಂತಿಮ ತೀರ್ಪನ್ನು ನೀಡಲಿದೆ ಎಂದು ವರದಿಯಾಗಿದೆ.
ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ನ್ಯಾಯ ಮಂಡಳಿಯು ನೀರನ್ನು ಹಂಚಿಕೆಯ ತೀರ್ಪುನ್ನು ಪ್ರಕಟಿಸಲಿದ್ದು,ಈ ವಿವಾದವು ಭಾರೀ ಕುತೂಹಲ ಮೂಡಿಸಿದೆ. ಧಾರವಾಡ ಭಾಗದ ರೈತ ಹೋರಾಟಗಾರರು ತೀರ್ಪಿನ ಕುರಿತಾಗಿ ಕಾತರರಾಗಿದ್ದಾರೆ.
ಮಹದಾಯಿ ನದಿಯ 200 ಟಿಎಂಸಿ ಅಡಿ ನೀರಿನಲ್ಲಿ, ಕೇವಲ 9 ಟಿಎಂಸಿ ಅಡಿ ನೀರನ್ನು ಮಾತ್ರ ಗೋವಾ ಬಳಸಿಕೊಳ್ಳುತ್ತಿದೆ. ಬಹುಪಾಲು ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಹರಿಯುವ 45 ಟಿಎಂಸಿ ಅಡಿ ನೀರಿನ ಪೈಕಿ ಕರ್ನಾಟಕವು 14.98 ಟಿಎಂಸಿ ಅಡಿ ನೀರನ್ನು ಕೇಳುತ್ತಿದೆ ಎಂದು ವಾದ ಮಂಡನೆ ಕರ್ನಾಟಕವು ಮಾಡಿತ್ತು.

RELATED ARTICLES  ಬಸ್ ಕಂದಕಕ್ಕೆ ಉರುಳಿಬಿದ್ದ ಪರಿಣಾಮ 11 ಮಂದಿ ಸಾವು: ಹಲವರು ಗಂಭೀರ ಗಾಯ.