ಭಟ್ಕಳ: ಜುಲೈ 1ರಿಂದ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿರುವ ಎಲ್ಲಾ ವೈನ್ ಶಾಪ್ ಮತ್ತು ಬಾರ್‍ಗಳನ್ನು ತೆರವು ಮಾಡಬೇಕೆಂಬ ಆದೇಶವಾಗಿದೆ. ಆದರೆ ಭಟ್ಕಳದ ಮೂಡಭಟ್ಕಳ ಬೈಪಾಸ್‍ನ ಟಾಪ್ ಟವರ್ ಕಾಂಪ್ಲೆಕ್ಸ್‍ನಲ್ಲಿನ ಶ್ರೀ ಕೃಷ್ಣ ಪ್ರಸಾದ ಹೋಟೆಲ್‍ನಲ್ಲಿ ಅನಧೀಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಭಟ್ಕಳ ನಗರ ಪೋಲೀಸ್‍ರು ಖಚಿತ ಮಾಹಿತಿ ಪಡೆದು ಸೋಮವಾರದಂದು ರಾತ್ರಿ ಹೋಟೇಲ್ ಮೇಲೆ ದಿಢೀರ ದಾಳಿ ಮಾಡಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆದ ಮದ್ಯದಲ್ಲಿ 134 ಬಿಯರ್ ಬಾಟಲ್ ಹಾಗೂ 45 ಚಿಕ್ಕ ಬಾಟಲ್ ಪತ್ತೆಯಾಗಿದ್ದು, ಅಂದಾಜು ಮೊತ್ತ 17,000 ರೂ. ಎಂದು ತಿಳಿದು ಬಂದಿದೆ. ಮಾಲೀಕರಾದ ಆರೋಪಿ ಚಂದ್ರು ನಾರಾಯಣ ನಾಯ್ಕನ್ನು ವಶಕ್ಕೆ ಪಡೆದ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಸಂಧರ್ಭದಲ್ಲಿ ಪಿಎಸೈ ಕುಡಗುಂಟಿ ಸೇರಿದಂತೆ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಇದ್ದರು.

RELATED ARTICLES  ಒಳ್ಳೆಯ ಪುಸ್ತಕಗಳನ್ನು ಓದಿದರೆ ಅದು ಒಳ್ಳೆಯ ಭವಿಷ್ಯವನ್ನು ರೂಪಿಸುತ್ತದೆ ; ಡಾ. ಅಶೋಕ ಪ್ರಭು