ಕುಮಟಾ: “ಕೇವಲ ಪರೀಕ್ಷೆಗೆಂದೇ ಓದುವ ಓದು ಓದಲ್ಲ. ಪರೀಕ್ಷೆ ಬರೆದಾದ ಕೂಡಲೇ ಅದನ್ನು ಮರೆತೇ ಬಿಡುತ್ತೇವೆ. ಕೇಳುವಿಕೆ, ಓದುವಿಕೆ, ಮನನ ಕ್ರಮಬದ್ಧವಾದಾಗ ಮಾತ್ರ ಓದು ಶಾಶ್ವತವಾಗಿರುತ್ತದೆ. ನಿಯತ ಓದು ಮನನ ನಿತ್ಯ ಮಂತ್ರವಾಗಿರಲಿ” ಎಂದು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಧ್ಯಾಪಕರಾದ ವಿದ್ವಾನ್ ಕೆ. ಕೃಷ್ಣರಾಜ ಭಟ್ಟ ಅವರು ಅಭಿಪ್ರಾಯಪಟ್ಟರು. ಯಾವ ರೀತಿ ಅಭ್ಯಾಸ ಮಾಡಿದರೆ ಮಾತ್ರ ಅದು ಶಾಶ್ವತವಾಗಿ ನೆನಪಿನಲ್ಲಿ ಉಳಿಯಬಲ್ಲದೆಂಬುದನ್ನು ತರಬೇತಿ ನೀಡುವುದರ ಮೂಲಕ ವಿದ್ಯಾರ್ಥಿಗಳಿಗೆ ಉತ್ತೇಜಿಸುತ್ತಾ ಮಾತನಾಡಿದರು. ಅವರು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಬಿ.ಎ.ಸನದಿ ಸಾಹಿತ್ಯ ಸಂಘದಡಿ ಹಮ್ಮಿಕೊಂಡ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. “ವಿದ್ಯಾರ್ಥಿ ಬದುಕಿನ ಮೌಲ್ಯ”ಗಳ ಕುರಿತು ಸುದೀರ್ಘ ಜನಜನಿತ ವಾಸ್ತವ ಕತೆಗಳಿಂದ ಸಮ್ಮೋಹಕವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದಿಸಿದರು.

RELATED ARTICLES  ಭಟ್ಕಳದಲ್ಲಿ ಸುನಿಲ್ ನಾಯ್ಕ ಗೆ ಬಿಜೆಪಿ ಟಿಕೆಟ್! ಯುವ ನಾಯಕನ ಬೆಂಬಲಿಗರಿಗೆ ಸಂತಸ.

ಅತಿಥಿಗಳಾಗಿ ಆಗಮಿಸಿದ ಪ್ರೇರಣಾ ಟ್ರಸ್ಟ್ ಅಧ್ಯಕ್ಷರಾದ ವಸಂತ ಭಟ್ ಅವರು ವಿದ್ಯಾರ್ಥಿಜೀವನದ ಗುರಿ ಮತ್ತು ಅದನ್ನು ಸಾಧಿಸುವ ನಿಟ್ಟಿನಲ್ಲಿ ಕಟ್ಟಿಕೊಳ್ಳಬೇಕಾದ ಕನಸನ್ನು ಮತ್ತು ಅದನ್ನು ನನಸಾಗಿಸುವ ಪರಿಯನ್ನು ವಿವರಿಸಿ ಅಭಿಪ್ರಾಯ ವ್ಯಕ್ತಪಡಿಸಿದರು. ಓದುವ ಆಸಕ್ತಿ ಮತ್ತು ಸಹನಶೀಲತೆಯನ್ನೇ ಕಳೆದುಕೊಳ್ಳುತ್ತಿರುವ ಈಗಿನ ವಿದ್ಯಾರ್ಥಿ ಸಮುದಾಯಕ್ಕೆ ಇಂತಹ ಪ್ರಾಜ್ಞರ ಬೋಧನೆಗಳು ಮಾರ್ಗದರ್ಶಿಯಾಗಿ ಉಳಿಯುತ್ತದೆ ಎಂದು ಮುಖ್ಯಾಧ್ಯಾಪಕ ಎನ್.ಆರ್.ಗಜು ಅಧ್ಯಕ್ಷೀಯ ನುಡಿಗಳನ್ನಾಡಿದರು. ಶಿಕ್ಷಕ ಕಿರಣ ಪ್ರಭು ಸ್ವಾಗತಿಸಿ ಪರಿಚಯಿಸಿದರು. ಶಿಕ್ಷಕ ಸುರೇಶ ಪೈ ನಿರೂಪಿಸಿದರೆ, ಶಿಕ್ಷಕ ವಿ.ಎನ್.ಭಟ್ಟ ವಂದಿಸಿದರು.

RELATED ARTICLES  ಕಲೆಯ ಶ್ರೀಮಂತಿಕೆ ಸಮಾಜದ ಸಮೃದ್ದಿಯನ್ನು ಪ್ರತಿನಿಧಿಸುತ್ತದೆ : ನರಸಿಂಹ ಕೋಣೇಮನೆ.