ಕುಮಟಾ: ಉತ್ತಮ ಆಹಾರ, ಆರೋಗ್ಯ, ಶಿಕ್ಷಣ, ಸಾಮಾಜಿಕ ನ್ಯಾಯ ಪ್ರತಿಯೊಬ್ಬ ನಾಗರಿಕನಿಗೂ ದೊರಕುವಂತಾಗಬೇಕು ಆ ನಿಟ್ಟಿನಲ್ಲಿ ಭಾರತಾಂಬೆಯ ಸೇವೆಗೆ ಇಂದಿನ ವಿದ್ಯಾರ್ಥಿಗಳು ಸನ್ನದ್ಧರಾಗಬೇಕು. ಭಾರತ ವಿಶ್ವದಲ್ಲಿಯೇ ಅಗ್ರಗಣ್ಯ ಸ್ಥಾನಕ್ಕೇರಬೇಕೆಂದು ಇಲ್ಲಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎನ್.ಆರ್.ಗಜು ಅಭಿಪ್ರಾಯಪಟ್ಟರು.

RELATED ARTICLES  ಇದ್ದಕ್ಕಿದ್ದಂತೆ ಬೈಕ್ ಗೆ ಬೆಂಕಿ : ಜನ ಕಂಗಾಲು

ಅವರು ಶಾಲೆಯ ಧ್ವಜಾರೋಹಣಗೈದು ಮಕ್ಕಳಿಗೆ ದೇಶಪ್ರೇಮ ಹೆಚ್ಚಿಸುವ ಕುರಿತು ಪ್ರೋತ್ಸಾಹಕ ಮಾತನಾಡಿದರು. ದೈಹಿಕ ಶಿಕ್ಷಕ ಎಲ್.ಎನ್.ಅಂಬಗ ವಿವಿಧ ಕವಾಯತಿಗೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿ ಪ್ರತಿನಿಧಿ ಕುಮಾರ ವಿಶ್ವಾಸ್ ಪೈ ಶಿಸ್ತು ಪಾಲನೆ ನೇತೃತ್ವವಹಿಸಿದ್ದರು.

RELATED ARTICLES  ಇಂದಿನ ನಿಮ್ಮ ದಿನ ಹೇಗಿದೆ ಗೊತ್ತೇ? ಇಲ್ಲಿದೆ ನೋಡಿ ದಿನಾಂಕ 30/03/2019 ರ ದಿನ ಭವಿಷ್ಯ.

ಈ ಸಂದರ್ಭದಲ್ಲಿ ಗಿಡ ನೆಟ್ಟು ಹಸಿರು ಸ್ವಾತಂತ್ಯೋತ್ಸವದ ಕಲ್ಪನೆ ಮೂಡಿಸಲಾಯಿತು. ರಾಷ್ಟ್ರಗೀತೆ, ನಾಡ ಗೀತೆ ಮತ್ತು ರೈತಗೀತೆಗಳನ್ನು ಸುಶ್ರಾವ್ಯವಾಗಿ ಹಾಡಲಾಯಿತು.