ಬೆಂಗಳೂರಿನ ಹಂಪಿನಗರದಲ್ಲಿರುವ ಶ್ರೀಭಾರತೀ ವಿದ್ಯಾಲಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಅಗಸ್ಟ 15 ರ ಈ ರಾಷ್ಟ್ರೀಯ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಗುರುವಂದನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶಾಲೆಯ ವಿದ್ಯಾರ್ಥಿ ಪ್ರತಿನಿಧಿಗಳಾದ ಕು. ಗೌತಮ್ ಹಾಗೂ ಕು. ಗೌರಿ ಇವರು ಸಕಲ ಗೌರವಗಳೊಂದಿಗೆ ಮುಖ್ಯ ಅತಿಥಿಗಳನ್ನು ಹಾಗೂ ಗಣ್ಯರನ್ನು ಧ್ವಜಾರೋಹಣಕ್ಕೆ ಕರೆತಂದರು. ಶಾಲೆಯ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಹೆಗಡೆಯವರು ಧ್ವಜಾರೋಹಣ ಮಾಡಿದರು.ಶಾಲಾ ವಿದ್ಯಾರ್ಥಿಗಳು ರಾಷ್ಟ್ರಗೀತೆ, ರಾಷ್ಟ್ರಭಕ್ತಿಗೀತೆಗಳನ್ನು ಹಾಡಿದರು.

RELATED ARTICLES  ಕೊನೆಯುಸಿರೆಳೆದ ಹಿರಿಯ ನಟಿ ಲೀಲಾವತಿ.

ಶಾಲಾ ವಿದ್ಯಾರ್ಥಿಗಳ ತಂಡವು ಕವಾಯತ್ತನ್ನು ನಡೆಸಿಕೊಟ್ಟಿತು. ಸಮೂಹ ಗಾಯನ, ಸಮೂಹ ನೃತ್ಯ, ಭಾಷಣ ಇತ್ಯಾದಿ ಮನರಂಜನಾ ಕಾರ್ಯಕ್ರಮಗಳು ನಡೆದವು. 2017-2018 ನೇ ಸಾಲಿನಲ್ಲಿ SSLC ಹಾಗೂ10 ನೇ ತರಗತಿಯ ICSE ಪರೀಕ್ಷೆಗಳಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ISRO ದ ಹಿರಿಯ ಹಾಗೂ ನಿವೃತ್ತ ವಿಜ್ಞಾನಿಗಳಾದ ಶ್ರೀ ಪಿ.ಜೆ. ಭಟ್ಟ ಇವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತ ಮುಂಬರುವ ದಿನಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಈ ಸ್ಚಾತಂತ್ರ್ಯೋತ್ಸವದ ಸಂದರ್ಭದಲ್ಲಿ ಪುರಸ್ಕರಿಸಲ್ಪಡುವಂತಾಗಬೇಕು ಎಂಬ ತಮ್ಮ ಕನಸನ್ನು ತೆರೆದಿಟ್ಟರು. ಶ್ರೀ ಗೋಪಾಲಕೃಷ್ಣ ಹೆಗಡೆಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಾಲೆಯ ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿಸಿದರು.ವಿದ್ಯಾರ್ಥಿಗಳೇ ಪೂರ್ಣ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

RELATED ARTICLES  ಅಕ್ರಮವಾಗಿ ಇಟ್ಟಿದ್ದ 20 ಲಕ್ಷಕ್ಕೂ ಹೆಚ್ಚು ಹಣ ಮತ್ತು ಅಪಾರ ಪ್ರಮಾಣದ ಮದ್ಯ ವಶ.

ಶಾಲೆಯ ಆಡಳಿತ‌ಮಂಡಳಿಯ ಸದಸ್ಯರಾದ ಶ್ರೀಮತಿ ಶಾರದಾ ಜಯಗೋವಿಂದ್ ಹಾಗೂ ಶ್ರೀ ಗೋವಿಂದರಾಜ್ ಕೋರಿಕ್ಕಾರ್ ಅವರು ಉಪಸ್ಥಿತರಿದ್ದರು.ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಸಮಾಪ್ತವಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಸಿಹಿಯನ್ನು ವಿತರಿಸಲಾಯಿತು. ಸಾವಿರಾರು ಜನ ಸಾರ್ವಜನಿಕರು ಈ ಸಂಭ್ರಮದ ಆಚರಣೆಗೆ ಸಾಕ್ಷಿಯಾದರು.