ಕುಮಟಾ: ಎಪ್ಪತ್ತೆರಡನೆಯ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಪ್ರಗತಿ ವಿದ್ಯಾಲಯ ಮೂರೂರು ನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಗತಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ಆದ ಶ್ರೀ ಎಂ.ಜಿ ಭಟ್ವ ಇಂದಿನ ವಿದ್ಯಾರ್ಥಿಗಳು ಮುಂದಿನ ಭವ್ಯ ಭಾರತದ ಪ್ರಜೆಗಳು ಲಕ್ಷಾಂತರ ಜನರ ಬಲಿದಾನದಿಂದ ನಾವು ಸ್ವಾತಂತ್ರ್ಯವನ್ನು ಪಡೆದಿದ್ದೇವೆ ಅಂತಹ ಸ್ವಾತಂತ್ರ್ಯವನ್ನು ನಾವು ಉಳಿಸಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯ ನಮ್ಮಲ್ಲಿ ದೇಶಪ್ರೇಮವನ್ನು ಬೆಳೆಸಿಕೊಂಡು ನಮ್ಮ ದೇಶದ ಕೀರ್ತಿಯನ್ನು ಜಗತ್ತಿನೆಲ್ಲೆಡೆ ಹಾರಿಸಬೇಕಾಗಿದೆ, ಭಾರತೀಯರೆಲ್ಲಾ ಒಂದು ಎಂಬ ಭಾವೈಕ್ಯತೆಯನ್ನು ಬೆಳೆಸಿಕೊಳ್ಳಬೇಕೆಂಬ ಕಿವಿ ಮಾತನ್ನು ಹೇಳಿದರು.

RELATED ARTICLES  ಕೊಂಕಣಿ ಅಕಾಡೆಮಿಯ ಸ್ಥಾಯಿಸಮಿತಿಯ ಸದಸ್ಯರಾಗಿ ಚಿದಾನಂದ ಭಂಡಾರಿ ನೇಮಕ.

ವೇದಿಕೆಯಲ್ಲಿ ಕನ್ನಡ ಮಾಧ್ಯಮದ ಅಧ್ಯಾಪಕರಾದ ಶ್ರೀ ವಿ.ಎಸ್ ಗೌಡ ರವರು ಸಂಸ್ಕೃತ ಪಾಠಶಾಲೆ ಮುಖ್ಯ ಅಧ್ಯಾಪಕರಾದ ಶ್ರೀ ಶ್ರೀಪಾದ್ ಭಟ್ ರವರು ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕಿ ಹಾಗೂ ವಿದ್ಯಾರ್ಥಿ ಪರಿಷತ್ ನ ಮನೋಹರ್ ಹರಿಕಂತ್ರ ಹಾಜರಿದ್ದರು ಶಾಲಾ ಶಿಕ್ಷಕ ಶಿಕ್ಷಕಿಯರು ವಿದ್ಯಾರ್ಥಿಗಳು ಹಾಜರಿದ್ದರು.

RELATED ARTICLES  ನೆರೆ ಪೀಡಿತ ಪ್ರದೇಶಗಳಲ್ಲಿ ಬಿ.ಎಸ್.ಎನ್.ಎಲ್ ನಿಂದ ಉಚಿತ ಕರೆ.