ಹಾಸನ: ಧಾರಾಕಾರ ಮಳೆಯು ಮಲೆನಾಡು ಪ್ರದೇಶದಲ್ಲಿ ಸುರಿಯುತ್ತಿದ್ದು, ಇದರಿಂದಾಗಿ ಶಿರಾಡಿಘಾಟ್ ನಲ್ಲಿ ಕಳೆದ 3 – 4 ದಿನಗಳಿಂದ ಹಲವೆಡೆ ಗುಡ್ಡ ಕುಸಿಯುತ್ತಿದ್ದು, ವಾಹನ ಸಂಚಾರ ಕಷ್ತಕರವಾಗಿದೆ.
ಟ್ಯಾಂಕರ್ ಒಂದು ಮಂಗಳವಾರ ರಾತ್ರಿ ಪಲ್ಟಿಯಾಗಿ ಬಿದ್ದು ಮೂವರು ಮಂದಿ ಸಾವನ್ನಪ್ಪಿದ್ದಾರೆ. ಇದಲ್ಲದೇ ಗುಡ್ಡ ಕುಸಿತದಿಂದ ಕೆಲವು ಬಸ್ ಗಳು ಕೂಡಾ ಜಖಂಗೊಂಡಿದ್ದವು ಭಾರೀ ನಷ್ತ ಉಂಟಾಗಿದೆ.
ಶಿರಾಡಿಘಾಟ್ ನಲ್ಲಿ ಇನ್ನೂ ಐದು ದಿನಗಳವರೆಗೆ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ ಎಂದು ಸಕಲೇಶಪುರ ಉಪವಿಭಾಗಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗಷ್ಟೇ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ನ ರಸ್ತೆ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರಕ್ಕೆ ಮುಕ್ತವಾಗಿತ್ತು ಇಂದಿನಿಂದ ಆಗಸ್ಟ್ 20ರವರೆಗೆ ಎಲ್ಲಾ ವಾಹನ ಸಂಚಾರ ನಿಷೇಧಿಸಲಾಗಿದೆ . ಆಗಸ್ಟ್ 25ರವರೆಗೆ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ..