ಈ ‘ಆರು’ ಅನ್ನುವುದಕ್ಕೆಪದಕೋಶದಲ್ಲಿಹಲವುಅರ್ಥಗಳಿವೆ.ಎತ್ತುಗಳನ್ನುಹೂಡಿದನೇಗಿಲಿಗೂಆರುಎನ್ನುತ್ತಾರೆ.ಶಕ್ತವಾಗು, ಗಟ್ಟಿಯಾಗಿಕೂಗು, ತಣ್ಣಗಾಗುಎಂಬಅರ್ಥಗಳುಸಹಇವೆ.ಆರಿಸುಎಂದರೆಶೇಖರಿಸು, ಆಯ್ಕೆಮಾಡು, ನಂದಿಸುಎಂಬಅರ್ಥಗಳೂಪದಕೋಶದಲ್ಲಿಸಿಗುತ್ತವೆ.ಆರುಗುಣಗಳು, ಅಂಶಗಳು/ವಿಚಾರಗಳಕುರಿತುವಿವೇಚಿಸುವುದುಈಲೇಖನದಉದ್ದೇಶ.      ಮಹಾಭಾರತದಉದ್ಯೋಗಪರ್ವದಲ್ಲಿವಿದುರಧೃತರಾಷ್ಟ್ರನಿಗೆನ್ಯಾಯಯುತಮಾರ್ಗದಕುರಿತುತಿಳಿಸಿಹೇಳುವುದರೊಂದಿಗೆ, ನಡವಳಿಕೆಗಳು, ಸದಾಚಾರ, ಮಾತು, ನೀತಿ, ಧರ್ಮ, ಸುಖ-ದುಃಖಗಳಪ್ರಾಪ್ತಿ, ನ್ಯಾಯ-ಅನ್ಯಾಯ, ಸತ್ಯ, ಅಹಿಂಸೆ, ಕ್ಷಮೆ, ಮಿತ್ರ-ಶತ್ರುಗಳಾರು, ಮುಂತಾದಸಂಗತಿಗಳಬಗ್ಗೆತಿಳುವಳಿಕೆನೀಡಿರುವಬಗೆಗೂವಿಸ್ತೃತವಾಗಿವಿವರಿಸಲಾಗಿದೆ. ವಿದುರನೀತಿಎಂದೇಹೆಸರಾಗಿರುವಈಪರ್ವದಲ್ಲಿಸಜ್ಜನ-ಸಾಧಕರಿಗೆಇರಬೇಕಾದನೂರಾರುಕಲ್ಯಾಣಕಾರಿಗುಣಗಳಬಗ್ಗೆಮಾಹಿತಿ, ಮಾರ್ಗದರ್ಶನಗಳುಇದ್ದು, ಅವುಗಳಲ್ಲಿಬರುವ ‘ಆರು’ ಅಂಶಗಳನ್ನುಹೆಕ್ಕಿಲೇಖನವಾಗಿಸಿರುವೆ.

೧. ಉನ್ನತಸ್ಥಿತಿಗೆಏರಬಯಸುವವರು, ಐಶ್ವರ್ಯಬಯಸುವವರುನಿದ್ರೆ, ತೂಕಡಿಕೆ, ಭಯ, ಸಿಟ್ಟು, ಸೋಮಾರಿತನಮತ್ತುವಿಳಂಬನೀತಿ – ಈಆರರಿಂದದೂರವಿರಬೇಕು. ಒಬ್ಬಸಾಧಕನಸಾಧನೆಗೆಸತತಶ್ರಮ, ಏಕಾಗ್ರತೆಅಗತ್ಯವಿದ್ದುಇದಕ್ಕೆನಿದ್ರೆ, ತೂಕಡಿಕೆಗಳು, ಸೋಮಾರಿತನಗಳುಅಡ್ಡಿತರುತ್ತವೆ.ನಮ್ಮಜೀವಿತಾವಧಿಯಾವಾಗಅಂತ್ಯವಾದೀತೋತಿಳಿಯದಾಗಿರುವಾಗಯಾವುದೇಕೆಲಸವನ್ನುಮುಂದೂಡದೇ, ‘ನಾಳೆಮಾಡುವುದನ್ನುಇಂದೇಮಾಡು, ಇಂದುಮಾಡುವುದನ್ನುಈಗಲೇಮಾಡು’ ಎಂಬಅನುಭವಿಗಳಮಾತನ್ನುಅನುಸರಿಸುವುದುಸೂಕ್ತವಾಗಿದೆ. ಮಾಡಹೊರಟಿರುವಕೆಲಸಕ್ಕೆಅಡ್ಡಿಗಳು, ಅಡಚಣೆಗಳುಎದುರಾದಾಗಎದೆಗುಂದದೆ, ಭಯಪಡದೆಮುಂದಡಿಯಿಡುವುದುಸಾಧಕರಲಕ್ಷಣವಾಗಿದೆ.
೨. ಜ್ಞಾನವನ್ನುಹಂಚದಗುರು, ಅಧ್ಯಯನಮಾಡದಋತ್ವಿಜ, ದುರ್ಬಲರಾಜ, ಅಪ್ರಿಯವಾಧಿನಿಪತ್ನಿ, ಸದಾಊರಿನಲ್ಲೇಇರಬಯಸುವಗೋಪಾಲಕಮತ್ತುವನದಲ್ಲಿಇರಬಯಸುವಕ್ಷೌರಿಕ – ಈಆರುಜನರನ್ನುಸಮುದ್ರದಲ್ಲಿರಂಧ್ರಬಿದ್ದನಾವೆಯಂತೆದೂರವಿರಿಸಬೇಕುಎಂದುವಿದುರಹೇಳಿದ್ದಾನೆ. ಗುರುವಾದವನುತನ್ನಶಿಷ್ಯರಿಗೆತನಗೆಗೊತ್ತಿರುವಜ್ಞಾನವನ್ನುಹಂಚಬೇಕು.ತಿಳಿದಜ್ಞಾನವನ್ನುಇತರರಿಗೆಹಂಚದಿದ್ದರೆಅದುಕಳ್ಳತನಕ್ಕೆಸಮನಾದುದುಎಂಬುದುವೇದೋಕ್ತಿಯಾಗಿದೆ.ಒಂದೊಮ್ಮೆಉಚ್ಛ್ರಾಯಸ್ಥಿತಿಯಲ್ಲಿದ್ದಆಯುರ್ವೇದದಅನೇಕಸಂಗತಿಗಳು, ಲೋಹವನ್ನುಚಿನ್ನವಾಗಿಪರಿವರ್ತಿಸಬಹುದಾದವಿದ್ಯೆ, ಇತ್ಯಾದಿಗಳುಅವುಗಳನ್ನುತಿಳಿದವರೊಂದಿಗೇಕಣ್ಮರೆಯಾಗಿವೆ.ಮಾರಣಾಂತಿಕರೋಗಗಳಿಗೆಪರಿಣಾಮಕಾರಿಚಿಕಿತ್ಸೆಕೊಡಬಲ್ಲನಾಟಿವೈದ್ಯರುಗಳನ್ನೂನಾವುಕಂಡಿದ್ದೇವೆ.ಅವರುತಮ್ಮಜ್ಞಾನವನ್ನುಇನ್ನೊಬ್ಬರಿಗೆತಿಳಿಸಿಕೊಡದೇಇರುವುದರಿಂದಅವರೊಂದಿಗೇಆವಿದ್ಯೆಅಂತ್ಯಕಾಣುತ್ತವೆ.’ಯೋಗ್ಯಶಿಷ್ಯಸಿಗಲಿಲ್ಲ, ಹೇಳಿಕೊಡಲಿಲ್ಲ’ ಎಂಬುದುನೆಪವಾಗುತ್ತದೆ.ಅಧ್ಯಯನಮಾಡಬೇಕಾದುದುಒಬ್ಬಋತ್ವಿಜನಕರ್ತವ್ಯವಾಗಿದೆ.ಸಮಾಜಕ್ಕೆಅವರಮಾರ್ಗದರ್ಶನಅಗತ್ಯವಿರುತ್ತದೆ.ಆತನೇಸರಿಯಾಗಿತಿಳಿದುಕೊಳ್ಳದಿದ್ದರೆಆತಏನುಮಾರ್ಗದರ್ಶನಮಾಡಿಯಾನು?ಮಾಡಿದರೂಅದುಸರಿಯಾಗಿರದಿದ್ದರೆಹಾನಿಕಾರಕಪರಿಣಾಮಬೀರುವುದಂತೂನಿಶ್ಚಿತ. ಇಂದಿನಅನೇಕಪಂಡಿತೋತ್ತಮರು, ಗುರುಗಳುಅನ್ನಿಸಿಕೊಂಡವರನ್ನುಗಮನಿಸಿದರೆಈಮಾತಿನಮಹತ್ವತಿಳಿಯುತ್ತದೆ.ದುರ್ಬಲರಾಜನಿಂದದೇಶಕ್ಕೆಅಪಾಯಕಟ್ಟಿಟ್ಟಬುತ್ತಿ.ವಿವಿಧಮಾಫಿಯಾಗಳರಿಮೋಟ್ಕಂಟ್ರೋಲಿನಲ್ಲಿಆಡಳಿತಗಾರರುಆಡಳಿತನಡೆಸಿದರೆದೇಶದಪ್ರಜೆಗಳುಅನೇಕರೀತಿಯಸಂಕಷ್ಟಗಳಿಗೆಒಳಪಡುತ್ತಾರೆ.ಇದರಅನುಭವಜನರಿಗೆಈಗಾಗಲೇಆಗಿಬಿಟ್ಟಿದೆ, ಆಗುತ್ತಿದೆ.ಗೋಪಾಲಕನಾದವನುದನ-ಕರುಗಳನ್ನುಮೇಯಿಸುವಸಲುವಾಗಿಕಾಡಿಗೆಹೋಗದೆಊರಿನಲ್ಲೇಇರಲುಇಚ್ಛಿಸಿದರೆಪ್ರಯೋಜನವೇನು?ಈಗಕಾಡುಗಳೂಇಲ್ಲ, ಗೋಮಾಳವೂಇಲ್ಲ, ಇನ್ನುದನ-ಕರುಗಳಪಾಡು, ಅವುಗಳನ್ನುಸಾಕಿದವರಪಾಡುಅನುಭವಿಸಿದವರಿಗೇಗೊತ್ತು.ಕ್ಷೌರಿಕನಾದವನುಊರಿನಲ್ಲಿರದೆಕಾಡಿನಲ್ಲಿದ್ದರೆಅವನಿಂದಏನುಪ್ರಯೋಜನಎಂಬುದುವಿದುರನಪ್ರಶ್ನೆ.
೩. ಸತ್ಯ, ದಾನ, ಸೋಮಾರಿಯಾಗದಿರುವುದು, ಅಸೂಯಾಪರನಾಗದಿರುವುದು, ಕ್ಷಮಾಗುಣ, ಧೈರ್ಯ – ಈಆರುಗುಣಗಳನ್ನುಎಂದಿಗೂಬಿಡಬಾರದು. ಒಬ್ಬಆದರ್ಶವ್ಯಕ್ತಿಹೇಗಿರಬೇಕೆಂಬುದಕ್ಕೆಇಲ್ಲಿತಿಳುವಳಿಕೆಯಿದೆ.ಸತ್ಯವಂತ, ದಾನಶೀಲವ್ಯಕ್ತಿಗೆಸಮಾಜದಲ್ಲಿಮನ್ನಣೆಇರುತ್ತದೆ.ಸೋಮಾರಿಯಾದರೆಉನ್ನತಸ್ಥಿತಿಗೆಏರಲಾಗದೆಂಬುದನ್ನುಹಿಂದೆಯೇತಿಳಿದೆವು.ಅಸೂಯೆಪಡುವುದುತನಗಿಂತಇನ್ನೊಬ್ಬರುಮೇಲಿದ್ದಾರೆಎಂಬುದನ್ನುಒಪ್ಪುವವರಮತ್ತುಕೀಳರಿಮೆಯಿಂದನರಳುವವರಗುಣವಾಗಿರುತ್ತದೆ.ಅಗತ್ಯದಸಂದರ್ಭಗಳಲ್ಲಿತಪ್ಪುಗಳನ್ನುಕ್ಷಮಿಸುವಉದಾತ್ತತೆಯೊಂದಿಗೆ, ಸವಾಲುಗಳನ್ನುಎದುರಿಸುವಛಲಮತ್ತುಧೈರ್ಯಗಳಿದ್ದರೆಅಂತಹವನುನಾಯಕನೆನಿಸಿಕೊಳ್ಳುತ್ತಾನೆ.
೪. ಮನುಷ್ಯನಿಗೆಸುಖ-ಸಂತೋಷಗಳನ್ನುನೀಡುವಆರುಸಂಗತಿಗಳೆಂದರೆ, ಧನಪ್ರಾಪ್ತಿ, ಒಳ್ಳೆಯಆರೋಗ್ಯ, ಅನುಕೂಲವತಿಜೊತೆಗೆಪ್ರಿಯವಾದಿನಿಸತಿ, ವಿಧೇಯಮಗ, ಧನಸಂಪಾದನೆಗೆನೆರವಾಗುವವಿದ್ಯೆ. ಇದಕ್ಕೆವಿವರಣೆಯಅಗತ್ಯಕಾಣುವುದಿಲ್ಲ. ಹಣವಿದ್ದವರಿಗೆಆರೋಗ್ಯವಿರದಿರುವ, ಆರೋಗ್ಯವಾಗಿರುವವರಿಗೆಹಣವಿಲ್ಲದಸ್ಥಿತಿ, ಕೌಟುಂಬಿಕಸಂಬಂಧಗಳುಚೆನ್ನಾಗಿಲ್ಲದಿದ್ದರೆಎಲ್ಲವೂಇದ್ದರೂಪ್ರಯೋಜನವಾಗದಂತಹಸ್ಥಿತಿಗಳನ್ನುಕಂಡರೆಈಸಂಗತಿಗಳಮಹತ್ವದಅರಿವುನಮಗಾಗುತ್ತದೆ.
೫. ಅರಿಷಡ್ವರ್ಗಗಳಾದಕಾಮ, ಕ್ರೋಧ, ಲೋಭ, ಮದ, ಮತ್ಸರ, ಮೋಹಗಳಮೇಲೆಪ್ರಭುತ್ವಸಾಧಿಸುವವನುಪಾಪಗಳಿಂದಮುಕ್ತನಾಗಿರುತ್ತಾನೆ. ಇವುಗಳಲ್ಲಿಕಾಮವುಚತುರ್ವಿಧಪುರುಷಾರ್ಥಗಳಲ್ಲೂಒಂದಾಗಿದೆ.ಸುಕಾಮವುಮುಕ್ತಿಯೆಡೆಗೆಕರೆದೊಯ್ದರೆಕುಕಾಮಜೀವಿಯನ್ನುಪಾತಾಳಕ್ಕೆಬೀಳಿಸುತ್ತದೆ.ಸಕಲಜೀವರಾಶಿಯನ್ನುಪ್ರೀತಿಸುವಸುಮೋಹಸಮಾಜವನ್ನುಒಂದುಗೂಡಿಸುತ್ತದೆ.ಸಂಕುಚಿತಮೋಹಸಮಾಜಕ್ಕೆಕಂಟಕವಾಗುತ್ತದೆ.ಇದೇರೀತಿಸಾತ್ವಿಕಕ್ರೋಧಒಳಿತುತಂದರೆವಿನಾಕಾರಣದ, ಸ್ವಾರ್ಥಪರಕ್ರೋಧಹಾನಿತರುತ್ತದೆ.ಆದರೆಉಳಿದಲೋಭ, ಮದ, ಮತ್ಸರಗಳುಕೆಡುಕನ್ನೇತರುವಗುಣಗಳಾಗಿವೆ.

RELATED ARTICLES  ಧೋನಿ ಬಗ್ಗೆ ಯಾರಿಗೂ ಗೊತ್ತಿಲ್ಲದ ಸಂಗತಿಯೊಂದನ್ನು ಬಹಿರಂಗಪಡಿಸಿದ ಗಂಗೂಲಿ!