ಭಟ್ಕಳ:ತಾಲೂಕಿನ ಬೈಲೂರು ಬಳಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಮನೆಗೆ ಇಂದು ಶಾಸಕರು ಭೇಟಿ ನೀಡಿ ಸಂತಾಪ ಸೂಚಿಸಿದರು.
ಮೃತರ ಕುಟುಂಬಕ್ಕೆ ನೋವನ್ನು ಸಹಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ.ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ ಅವರು ಕುಟುಂಬದವರನ್ನು ಸಂತೈಸಿದರು.
ವಾಹನ ಸವಾರರು ಬೈಕ ಚಲಾಯಿಸುವಾಗ ವೇಗದ ಮಿತಿ ಇರಲಿ ಮತ್ತು ದಯವಿಟ್ಟು ಹೆಲ್ಮೇಟ್ ಖಡ್ಡಾಯವಾಗಿ ಬಳಸಿ ಎಂದು ವಿನಂತಿಸಿಕೊಂಡ ಅವರು ಜನತೆ ಮಳೆಗಾಲದ ಸಮಯ ಖಡ್ಡಾಯವಾಗಿ ಸುರಕ್ಷಾ ಕ್ರಮಬಳಸುವಂತೆ ವಿನಂತಿಸಿದ್ದಾರೆ.