ಭಾರತೀಯ ರೈಲ್ವೆಯ ದಕ್ಷಿಣ ವಲಯವು ಪ್ಯಾರಾ ಮೆಡಿಕಲ್ ವರ್ಗದ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 71
ಹುದ್ದೆಗಳ ವಿವರ
1.ನರ್ಸಿಂಗ್ ಸೂಪರಿಟೆಂಡೆಟ್ – 35
2.ಆರೋಗ್ಯ ಮತ್ತು ಮಲೇರಿಯಾ ಇನ್ಸ್’ಫೆಕ್ಟರ್ – 24
3.ಹೇಮೋ ಡಯಾಲಿಸಿಸ್ ಟೆಕ್ನಿಷಿಯನ್ – 01
4.ವಿಸ್ತರಣಾ ಶಿಕ್ಷಕ (ಎಕ್ಸ್’ಟೆನ್ಷನ್ ಎಜುಕೇಟರ್) – 01
5.ರೇಡಿಯೋಗ್ರಾಫರ್ – 01
6.ಫಾರ್ಮಾಸಿಸ್ಟ್ (ಔಷಧಿಗಾರ) -01
7.ಇಸಿಜಿ ಟೆಕ್ನಿಷಿಯನ್ – 01
8.ಲ್ಯಾಬೋರೆಟರಿ ಅಸಿಸ್ಟೆಂಟ್ – 07

ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗೆ 3 ವರ್ಷದ ನರ್ಸಿಂಗ್ ಅಥವಾ ಬಿಎಸ್ಸಿ ನರ್ಸಿಂಗ್, ಕ್ರ.ಸಂ 2ರ ಹುದ್ದೆಗೆ ಬಿಎಸ್ಸಿ ಕೆಮಿಸ್ಟ್ರಿ, ಕ್ರ.ಸಂ 3ರ ಹುದ್ದೆಗೆ ಬಿಎಸ್ಸಿ ಮತ್ತು ಡಿಪ್ಲೋಮಾ ಇನ್ ಹೇಮೋ ಡಯಾಲಿಸಿಸ್, 4ರ ಹುದ್ದೆಗೆ ಸಮಾಜಶಾಸ್ತ್ರ / ಸಮಾಜಕಾರ್ಯ ವಿಷಯದಲ್ಲಿ ಪದವಿ ಕ್ರ.ಸಂ 5ರ ಹುದ್ದೆಗೆ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯದಲ್ಲಿ ಪಿಯುಸಿ, ಕ್ರ.ಸಂ 6ರ ಹುದ್ದೆಗೆ ವಿಜ್ಞಾನ ವಿಷಯದಲ್ಲಿ ಪಿಯುಸಿ, ಕ್ರ.ಸಂ 7ರ ಹುದ್ದೆಗೆ ವಿಜ್ಞಾನ ವಿಷಯದಲ್ಲಿ ದ್ವಿತೀಯಾ ಪಿಯುಸಿ ಅಥವಾ ಪದವಿ, ಕ್ರ.ಸಂ 8ರ ಹುದ್ದೆಗೆ ವಿಜ್ಞಾನ ವಿಷಯದಲ್ಲಿ ದ್ವಿತೀಯಾ ಪಿಯುಸಿ ಉತ್ರ್ತೀಣರಾಗಿರಬೇಕು.

RELATED ARTICLES  ಪರಿಸರ ಮಾಲಿನ್ಯ ನಿಯಂತ್ರಿಸಿ, ಮನೆಯ ಅಂದವೂ ಹೆಚ್ಚಿಸಿ. ಇಲ್ಲಿದೆ ನೋಡಿ ಪ್ಲಾಸ್ಟಿಕ್ ಉದ್ಯಾನ..!

ವಯೋಮಿತಿ : ಕ್ರ.ಸಂ 1ರ ಹುದ್ದೆಗೆ 20 ರಿಂದ 40 ವರ್ಷ, ಕ್ರ.ಸಂ 2,5,7,8ರ ಹುದ್ದೆಗೆ 18 ರಿಂದ 33 ವರ್ಷ, ಕ್ರ.ಸಂ 3ರ ಹುದ್ದೆಗೆ 20 ರಿಂದ 33 ವರ್ಷ, ಕ್ರ.ಸಂ 4ರ ಹುದ್ದೆಗೆ 22 ರಿಂದ 35 ವರ್ಷ, ಕ್ರ.ಸಂ 6ರ ಹುದ್ದೆಗೆ 20 ರಿಂದ 35ವರ್ಷದೊಳಗಿರಬೇಕು. ಹಿಂದಿಳಿದವರಿಗೆ 3 ವರ್ಷ, ಪ.ಜಾ, ಪ.ಪಂ ದವರಿಗೆ 5 ವರ್ಷದವರೆಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಶುಲ್ಕ : ಸಾಮಾನ್ಯ ಮತ್ತು ಹಿಮದುಳಿದ ವರ್ಗವರಿಗೆ 500 ರೂ, ಪ.ಜಾ, ಪ.ಪಂ, ಪಿಡಬ್ಲ್ಯೂಡಿ, ಮಹಿಳಾ, ಆರ್ಥಿಕವಾಗಿ ಹಿಂದುಳಿದವರಿಗೆ, ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ 250 ರೂ ಶುಲ್ಕ ನಿಗದಿಗೊಳಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-08-2018

RELATED ARTICLES  ಪೆಥಾಯ್ ಚಂಡಮಾರುತ : ಮುಂದಿನ 2 ದಿನದಲ್ಲಿ ಭಾರೀ ಮಳೆ ಸಾಧ್ಯತೆ.

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.rrcmas.in ಗೆ ಭೇಟಿ ನೀಡಿ.