ಕಲಬುರಗಿ : ಭಾರೀ ಮಳೆಯು ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಸುರಿಯುತ್ತಿದ್ದು , ಬುಧವಾರ ರಾತ್ರಿ, ಪಕ್ಕದ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಮನೆಯಲ್ಲಿ ಮಲಗಿದ್ದ ತಾಯಿ ಮಕ್ಕಳು ಭೀಕರ ಸಾವನ್ನಪ್ಪಿದ್ದ ಘಟನೆ, ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿಯ ಆಳಂದದ ಹಿತ್ತಲಶಿರೂರು ಗ್ರಾಮದಲ್ಲಿ ಪಕ್ಕದ ಮನೆಯ ಗೋಡೆ ಕುಸಿದ ಪರಿಣಾಮ ಪ್ರಭು ಎನ್ನುವವರ ಮನೆಯ ಮೇಲೆ ಬಿದ್ದು ಮನೆಯೊಳಗೆ ಮಲಗಿದ್ದ ತಾಯಿ ಲಕ್ಷ್ಮೀ ಬಾಯಿ (30) ಮಕ್ಕಳಾದ ಯಲ್ಲಮ್ಮ (11),ಅಂಬಿಕಾ (10) ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮನೆಯಲ್ಲಿದ್ದ ಪ್ರಭು ಅವರು ಗಾಯಗೊಂಡಿದ್ದು , ಗಂಭೀರ ಸ್ವರೂಪದಲ್ಲಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿಂಬರ್ಗಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ೆಂದು ವರದಿಯಾಗಿದೆ.