ಹಿಂದಿನಿಂದಲೂ ನಮ್ಮ ಹಿರಿಯರು ನೈಸರ್ಗಿಕದತ್ತವಾಗಿರುವಂತಹ ಸೌಂದರ್ಯವರ್ಧಕಗಳನ್ನು ಬಳಸಿಕೊಂಡಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ನಮ್ಮ ಹಿರಿಯರ ಸೌಂದರ್ಯ ನೋಡಿದರೆ ಒಮ್ಮೆ ಬೆರಗಾಗುವುದು ಇದೆ. ವಯಸ್ಸಾದರೂ ಅವರ ಸೌಂದರ್ಯ ಮಾತ್ರ ಹಾಗೇ ಉಳಿದುಕೊಂಡಿರುವುದು. ನಮ್ಮ ತಾಯಿ ಅಥವಾ ಅಜ್ಜಿಯಾಗಿರಲಿ, ಅವರ ಸೌಂದರ್ಯದ ಗುಟ್ಟು ಅಡುಗೆ ಮನೆಯಲ್ಲೇ ಇದೆ. ಯಾಕೆಂದರೆ ಅವರು ಅಡುಗೆ ಮನೆಯಲ್ಲಿ ಸಿಗುವಂತಹ ಸಾಮಗ್ರಿಗಳನ್ನು ಬಳಸಿಕೊಂಡು ತ್ವಚೆಯ ಆರೈಕೆ ಮಾಡಿದ್ದಾರೆ.
ಕೂದಲಿನ ಆರೈಕೆಗೆ ಮನೆಮದ್ದುಗಳು:
ಕೂದಲಿನ ಆರೈಕೆಗೆ ಮನೆಮದ್ದುಗಳು ತುಂಬಾ ಉಪಯುಕ್ತವಾದವು. ಮನೆಮದ್ದುಗಳು ತುಂಬಾ ಕಡಿಮೆ ಖರ್ಚಿಲ್ಲಿ ಹಾಗೂ ಇದನ್ನು ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು. ನಿಮ್ಮ ಚರ್ಮವು ಸೂಕ್ಷ್ಮವಾಗಿಲ್ಲದೆ ಇದ್ದರೆ ಈ ಮನೆಮದ್ದನ್ನು ಬಳಸಿದರೆ ಯಾವುದೇ ರೀತಿಯ ಅಡ್ಡಪರಿಣಾಮಗಳು ಉಂಟಾಗದು. ಮನೆಮದ್ದನ್ನು ಬಳಸುವ ಮೊದಲು ನೀವು ಇದನ್ನು ದೇಹದ ಯಾವುದೇ ಭಾಗಕ್ಕಾದರೂ ಹಚ್ಚಿಕೊಂಡು ಪರೀಕ್ಷೆ ಮಾಡಬಹುದು. ಇದರ ಬಳಿಕ ನೀವು ಇದನ್ನು ಬಳಸಬಹುದಾಗಿದೆ.
ತೆಂಗಿನಕಾಯಿ ಹಾಲು ಮತ್ತು ಜೇನುತುಪ್ಪ ಕೂದಲಿಗೆ ಯಾಕೆ ಬಳಸಬೇಕು?
ತೆಂಗಿನಕಾಯಿ ಹಾಲು ಕೂದಲಿನ ಆರೈಕೆಯಲ್ಲಿ ವಿಶೇಷ ಪಾತ್ರ ವಹಿಸುವುದು. ಇದು ಕೂದಲನ್ನು ನಯ ಹಾಗೂ ಬಲಗೊಳಿಸುವುದು. ಹಲವಾರು ವಿಧಗಳಿಂದ ಇದು ಕೂದಲಿಗೆ ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದನ್ನು ನೀವು ಹೇರ್ ಮಾಸ್ಕ್, ಕಂಡೀಷನರ್ ಅಥವಾ ಶಾಂಪೂವಿನಲ್ಲಿ ಬಳಸಬಹುದು. ತೆಂಗಿನಹಾಲಿನೊಂದಿಗೆ ಜೇನುತುಪ್ಪ ಕೂಡ ತುಂಬಾ ಪರಿಣಾಮಕಾರಿಯಾಗಿರಲಿದೆ. ಇದು ಕೂದಲಿಗೆ ಹಲವಾರು ಲಾಭಗಳನ್ನು ನೀಡುವುದು. ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣ ಹೊಂದಿರುವ ಜೇನುತುಪ್ಪವು ತಲೆಬುರುಡೆಯ ಸೋಂಕು ತಡೆಯುವುದು. ತಲೆಹೊಟ್ಟು, ಕೂದಲು ಉದುರುವಿಕೆ, ಇಸಬು ಮತ್ತು ಸೋರಿಯಾಸಿಸ್ ಗೆ ಇದು ತುಂಬಾ ಪರಿಣಾಮಕಾರಿ.

ತೆಂಗಿನಹಾಲು ಮತ್ತು ಜೇನುತುಪ್ಪದಿಂದ ಮಾಡುವ ಕಂಡೀಷನರ್:
ಮನೆಯಲ್ಲೇ ಕೂದಲಿಗೆ ಕಂಡೀಷನರ್ ತಯಾರಿಸುವುದು ಅಷ್ಟು ಕಷ್ಟದ ವಿಚಾರವಲ್ಲ. ಅಡುಗೆ ಮನೆಯಲ್ಲಿ ಸಿಗುವಂತಹ ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ಮನೆಯಲ್ಲೇ ಕೂದಲಿನ ಕಂಡೀಷನರ್ ಅಥವಾ ಪ್ಯಾಕ್ ತಯಾರಿಸಿಕೊಳ್ಳಬಹುದು.
ಬೇಕಾಗುವ ಸಾಮಗ್ರಿಗಳು:
4 ಚಮಚ ತೆಂಗಿನಹಾಲು(ತಾಜಾವಾಗಿ ತೆಗೆಯಿರಿ)
2 ಚಮಚ ಜೇನುತುಪ್ಪ
1 ಶಾವರ್ ಕ್ಯಾಪ್ ತಯಾರಿಸುವ ವಿಧಾನ ಒಂದು ಸಣ್ಣ ಪಿಂಗಾಣಿಗೆ ತೆಂಗಿನಹಾಲು ಹಾಕಿ.
ಇದಕ್ಕೆ ಈಗ ಜೇನುತುಪ್ಪ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ.
ಕೆಲವು ನಿಮಿಷ ಕಾಲ ಇದು ಹಾಗೆ ಇರಲಿ. ಈಗ ಇದು ಬಳಸಲು ತಯಾರಾಗಿದೆ.
ಬಳಸುವ ವಿಧಾನ:
*ಕಂಡೀಷನರ್ ಬಳಸುವ ಮೊದಲು ನೀವು ಕೂದಲನ್ನು ಶಾಂಪೂವಿನಿಂದ ತೊಳೆಯಬಾರದು ಅಥವಾ ಎಣ್ಣೆ ಹಚ್ಚಿರಬಾರದು.
*ಹೇರ್ ಬ್ರಷ್ ತೆಗೆದುಕೊಂಡು ಇದನ್ನು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿಕೊಳ್ಳಿ. ಮೊದಲು ತಲೆಬುರುಡೆಗೆ ಇದರಿಂದ ನಿಧಾನವಾಗಿ ಮಸಾಜ್ ಮಾಡಿ ಮತ್ತು ಬಳಿಕ ಕಂಡೀಷನರ್ ನ್ನು ಕೂದಲಿಗೆ ಹಚ್ಚಿಕೊಳ್ಳಿ.
*ಬುಡದಿಂದ ತುದಿಯ ತನಕ ಸರಿಯಾಗಿ ಹಚ್ಚಿಕೊಳ್ಳಿ.
*ಕೂದಲನ್ನು ಶಾಂಪೂ ಹಾಕಿಕೊಂಡು ತೊಳೆಯುವ ಮೊದಲು ಕಂಡೀಷನರ್ ಹಾಕಿದ ಬಳಿಕ ಒಂದರಿಂದ ಒಂದುವರೆ ಗಂಟೆ ಕಾಲ ಇದು ಹಾಗೆ ಇರಲಿ.
*ಒಳ್ಳೆಯ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಇದನ್ನು ಬಳಸಿ.