ಅಂಕೋಲಾ : ಡಾ.ಎಸ್.ಆರ್ ರಂಗನಾಥನ್ ಜನ್ಮದಿನದ ನಿಮಿತ್ತ ಆಚರಿಸಲಾಗುತ್ತಿರುವ ಗ್ರಂಥಾಲಯ ದಿನ ಈ ಬಾರಿ ಜಿ.ಸಿ ಕಾಲೇಜು ಪುಸ್ತಕ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸುವ ಮೂಲಕ ಅರ್ಥಪೂರ್ಣವಾಗಿ 2 ದಿನಗಳ ಕಾಲ ಆಚರಿಸಿತು. ನಾಡಿನ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯಾದ ‘ಸಪ್ನಾ’ ಹುಬ್ಬಳ್ಳಿ ಶಾಖೆಯು ಈ ಪ್ರದರ್ಶನದಲ್ಲಿ ಭಾಗವಹಿಸಿತು. ನೂರಾರು ವಿದ್ಯಾರ್ಥಿಗಳು ಪುಸ್ತಕಗಳನ್ನು ನೋಡಿಕೊಂಡು, ಓದಿ ಸಂತಸ ಪಟ್ಟರು. ತಮ್ಮ ತಮ್ಮ ಅಭಿರುಚಿಗೆ ತಕ್ಕಂತೆ ಪುಸ್ತಕ ಖರೀದಿಸಿದರು. ವ್ಯಾಪಾರ ಚೆನ್ನಾಗಿ ಆಯಿತು ಎಂಬುದಕ್ಕಿಂತ ಹೊಸತಲೆಮಾರಿನ ಯುವ ಸಮುದಾಯಕ್ಕೆ ಇದೊಂದು ಅಪೂರ್ವ ಅನುಭವ ನೀಡಿದ್ದು ಶ್ಲಾಘನೆಗೆ ಪಾತ್ರವಾಯಿತು.

ಕಲೆ, ಸಾಹಿತ್ಯ, ಜೀವನ ಚರಿತ್ರೆ ನಾಡಿನ ಹಲವು ನಾಮಾಂಕಿತ ಸಾಹಿತಿಗಳ ಕೃತಿಗಳನ್ನು ನೋಡುವ ಅವಕಾಶ ವಿದ್ಯಾರ್ಥಿಗೆ ದೊರಕಿತ್ತು. ತಾಲೂಕಿನ ಬಹುತೇಕ ಪ್ರೌಡಶಾಲೆ, ಪದವಿ-ಪೂರ್ವ,ಪದವಿ ಕಾಲÉೀಜಿನ ವಿದ್ಯಾರ್ಥಿಗಳು, ಅಧ್ಯಾಪಕರು, ಶಿಕ್ಷಕರು, ಪಾಲಕರು ಇದರ ಪ್ರಯೋಜನ ಪಡೆದರು.

RELATED ARTICLES  ಅಪರೂಪದ ಎದೆಗಾರಿಕೆ ಮತ್ತು ಸಂಘಟನಾ ಶಕ್ತಿ ಹೊಂದಿರುವವರು ಹಿರೇಗುತ್ತಿ ಗ್ರಾಮಸ್ಥರು:ಶಾಸಕ ದಿನಕರ ಶೆಟ್ಟಿ

ಬಹುತೇಕ ವಾಣಿಜ್ಯ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳು ಬಹುತೇಕ ಮೊದಲನೆಯ ದಿನವೇ ಖಾಲಿಯಾದವು. ಖರೀದಿಯೂ ಜೋರಾಗಿಯೇ ಇತ್ತು ಡಾ.ದಿನಕರ ದೇಸಾಯಿಯವರಿಂದ ಸ್ಥಾಪಿತವಾದ ಕೆನರಾ ವೆಲ್‍ಫೇರ್ ಟ್ರಸ್ಟಿನ ಡಾ.ದಾದಾಬಾಯಿ ನವರೋಜಿ ಗ್ರಂಥಾಲಯ ಜಿಲ್ಲೆಯ ಪ್ರತಿಷ್ಠಿತ ಗ್ರಂಥಾಲಯ ಹತ್ತು ಹಲವು ಅಪೂರ್ವ ಕೃತಿಗಳನ್ನು ಒಳಗೊಂಡ ಜ್ಞಾನದೇಗುಲ’ವಿದ್ದಂತೆ ಸಪ್ನಾ ಪುಸ್ತಕಾಲಯದ ಸಿಬ್ಬಂದಿಗಳು ಸಹ ಅತ್ಯಂತ ವ್ಯವಸ್ಥಿತವಾಗಿ ಪುಸ್ತಕ ಪ್ರದರ್ಶನ ಏರ್ಪಡಿಸಿದ್ದು ನೋಡುಗರನ್ನು ಆಕರ್ಷಿಸುವಂತಿತ್ತು.

RELATED ARTICLES  ಸಂಘಟನೆಗಳು ನ್ಯಾಯಯುತವಾಗಿ ಹೋರಾಟ ನಡೆಸುವವರಿಗೆ ಸಹಕಾರ ನೀಡಬೇಕು: ಸುಬ್ರಾಯ ವಾಳ್ಕೆ

“ಈ ರೀತಿಯ ಪ್ರದರ್ಶನ ಏರ್ಪಡಿಸಿದ್ದು ಶ್ಲಾಘನೀಯ. ಮಕ್ಕಳಿಗೆ ಈ ರೀತಿಯ ಕಾರ್ಯಗಳಿಂದ ಸಾಹಿತಿ ಮತ್ತು ಸಾಹಿತ್ಯ ಕೃತಿಗಳು ಪರಿಚಯವಾಗುತ್ತಿದೆ. ನಮಗೂ ಅವರ ಅಭಿರುಚಿ ಹೇಗಿದೆ? ಎಂಬುದನ್ನು ತಿಳಿದುಕೊಳ್ಳಲು ಸಾಧ್ಯ. ಬಹುತೇಕ ಸ್ಪರ್ಧಾತ್ಮಕ ಪುಸ್ತಕಗಳು, ಪಠ್ಯಗಳು ಮಾರಾಟವಾಗಿದ್ದು ವ್ಯಾಪಾರ ಚೆನ್ನಾಗಿದೆ.
ರಘು ಎಮ್.ವಿ

“ಸಿಬ್ಬಂದಿಗಳ ಸಹಕಾರದಿಂದ ಇದೊಂದು ಹೊಸ ಪ್ರಯೋಗ ಯಶಸ್ವಿಯಾಗಿದೆ. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಈ ರೀತಿಯ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸುವ ಕುರಿತು ಚಿಂತಿಸುತ್ತೇವೆ.
ಪ್ರೋ. ನಂಜುಂಡಯ್ಯ ಗ್ರಂಥಪಾಲಕರು
ಜಿ.ಸಿ ಕಾಲೇಜು ಅಂಕೋಲಾ