ಹೊನ್ನಾವರ: ಕೇವಲ ಆಸ್ಸಾಂನಲ್ಲಿನ ಬಾಂಗ್ಲಾದೇಶಿ ನುಸುಳುಖೋರರಷ್ಟೇ ಅಲ್ಲ; ಸಂಪೂರ್ಣ ದೇಶದಾದ್ಯಂತ ಬಾಂಗ್ಲಾದೇಶಿ ನುಸುಳುಖೋರ ಮುಸಲ್ಮಾನರನ್ನು ದೇಶದಿಂದ ಹೊರದಬ್ಬಿ !ಅಸ್ಸಾಂನಲ್ಲಿ ಬಾಂಗ್ಲಾದೇಶಿ ನುಸುಳುಖೋರ ಯಾರು ಮತ್ತು ಮೂಲ ಆಸ್ಸಾಮಿ ಯಾರು, ಇದರ ಮಾಹಿತಿಯನ್ನು ನೀಡುವ `ನ್ಯಾಶನಲ್ ರಿಜಿಸ್ಟರ್ ಆಫ್ ಸಿಟಿಝನ್’ನ ಪ್ರಾರ್ಥಮಿಕ ಸೂಚಿಯು ಬಿಡುಗಡೆಯಾಯಿತು ಮತ್ತು ಕಾಂಗ್ರೆಸ್ ಸಹಿತ ಅನೇಕ ರಾಜಕೀಯ ಪಕ್ಷಗಳು ಗೊಂದಲವನ್ನುಂಟುಮಾಡಲು ಆರಂಭಿಸಿದ್ದಾರೆ. ಕಾಶ್ಮೀರದಿಂದ ಹೊರದಬ್ಬಲ್ಪಟ್ಟ 4.5 ಲಕ್ಷ ಹಿಂದೂಗಳು ಇನ್ನೂ ಕೂಡ ಕರುಣಾಜನಕ ಪರಿಸ್ಥಿತಿಯಲ್ಲಿ ಜೀವನವನ್ನು ಸಾಗಿಸುತ್ತಿದ್ದಾರೆ. ಕಳೆದ 27 ವರ್ಷಗಳಿಂದ ಅವರಿಗೆ ಕಾಶ್ಮೀರದಲ್ಲಿ ಪುನರ್ವಸತಿಯನ್ನು ನೀಡಲಾಗಿಲ್ಲ, ಇದರ ಬಗ್ಗೆ ಯಾರೂ ಮಾತನಾಡುವುದಿಲ್ಲ; ಆದರೆ ಭಾರತದಲ್ಲಿ ಅನಧಿಕೃತವಾಗಿ ವಾಸಿಸುತ್ತ ಎಲ್ಲಾ ಸೌಕರ್ಯಗಳನ್ನು ಉಪಭೋಗಿಸುವ ಬಾಂಗ್ಲಾದೇಶಿ ನುಸುಳುಖೋರ ಮುಸಲ್ಮಾನರ ಬಗ್ಗೆ ಕರುಣೆ ತೋರುವ ಇವರು ರಾಷ್ಟ್ರನಿಷ್ಠರಲ್ಲ, ಎಂದು ಹೇಳಬಹುದು. ಈ ನುಸುಳುಖೋರರನ್ನು ಸಾಕಲು ಭಾರತೀಯರು ತೆರಿಗೆಯನ್ನು ಕಟ್ಟುತ್ತಿದ್ದಾರೆಯೇ? ಈ ನುಸುಳುಖೋರರಲ್ಲಿ ಅನೇಕರು ಭಯೋತ್ಪಾದನೆ ಹಾಗೆಯೇ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವುದು ಅನೇಕ ಬಾರಿ ಬೆಳಕಿಗೆ ಬಂದಿದೆ. ನುಸುಳುಖೋರ ಮುಸಲ್ಮಾನ ಈಗ ರಾಷ್ಟ್ರೀಯ ಸಮಸ್ಯೆಯಾಗಿ ಪರಿಣಮಿಸಿದೆ. ಆದ್ದರಿಂದ ಕೇವಲ ಆಸ್ಸಾಂನಲ್ಲಿನ ಬಾಂಗ್ಲಾದೇಶಿ ನುಸುಳುಖೋರರು ಮಾತ್ರವಲ್ಲ, ಸಂಪೂರ್ಣ ದೇಶದಾದ್ಯಂತ ಬಾಂಗ್ಲಾದೇಶಿ, ಪಾಕಿಸ್ತಾನಿ ಮತ್ತು ರೊಹಿಂಗ್ಯಾ ಮುಸಲ್ಮಾನ ನುಸುಳುಖೋರರನ್ನು ಸಹ ಕೂಡಲೇ ದೇಶದಿಂದ ಹೊರಹಾಕಿ, ಎಂಬ ಬೇಡಿಕೆಯನ್ನು ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಚಂದ್ರಶೇಖರ ಮೇಸ್ತ ಇವರು ಮಾಡಿದರು. ಅವರು ಅಗಸ್ಟ 16 ಗುರುವಾರ ದಿನದಂದು ಹೊನ್ನಾವರದ ತಹಶೀಲದಾರ ಕಚೇರಿಯಲ್ಲಿ ನಡೆದ `ರಾಷ್ಟ್ರೀಯ ಹಿಂದೂ ಆಂದೋಲನ’ದಲ್ಲಿ ಮಾತನಾಡಿದರು.
`ಲವ್ ರಾತ್ರಿ’ ಈ ಚಲನಚಿತ್ರದ ಹೆಸರನ್ನು ಬದಲಾಯಿಸಿ ; ಸೆನ್ಸಾರ್ ಬೋರ್ಡ ಮತ್ತು ಸರ್ಕಾರದಲ್ಲಿ ಬೇಡಿಕೆ !
10 ಅಕ್ಟೋಬರದಂದು “ನವರಾತ್ರಿ” ಆರಂಭವಾಗುತ್ತಿದ್ದು ೫ ಅಕ್ಟೋಬರದಂದು ಸಲ್ಮಾನ ಖಾನ ನಿರ್ಮಿತ `ಲವರಾತ್ರಿ’ ಈ ಚಲನಚಿತ್ರವು ಬಿಡುಗಡೆಯಾಗುತ್ತಿದೆ. ಈ ಚಲನಚಿತ್ರಕ್ಕೆ ಉದ್ದೇಶಪೂರ್ವಕವಾಗಿ “ಲವ್ ರಾತ್ರಿ” ಎಂದು ಹಿಂದೂಗಳ “ನವರಾತ್ರಿ” ಉತ್ಸವದ ಮೇಲೆ ಹೆಸರಿಸಲಾಗಿದೆ. ಕಾರಣವೆಂದರೆ ಹಿಂದೂಗಳು ಅದನ್ನು ವಿರೋಧಿಸುವರು ಮತ್ತು ಚರ್ಚೆ ನಿರ್ಮಾಣವಾಗಿ ಚಲನಚಿತ್ರದ ಹಣಗಳಿಕೆಯು ಅಧಿಕವಾಗುವುದು. `ಲವರಾತ್ರಿ’ ಚಲನ ಚಿತ್ರದ ಟ್ರೇಲರ್ ನಲ್ಲಿಯೂ `ಅವಳನ್ನು ಕಳುಹಿಸಲು ನಿನ್ನಬಳಿ 9 ಹಗಲು ಮತ್ತು 9 ರಾತ್ರಿ ಇವೆ’ ಎಂಬ ಸಂಭಾಷಣೆ ಇರುವುದರಿಂದ `ಹಿಂದೂಗಳ ಧಾರ್ಮಿಕ ಉತ್ಸವಗಳು ಪ್ರೇಮಪ್ರಕರಣಗಳನ್ನು ಮಾಡಲಿಕ್ಕಾಗಿಯೇ ಇರುತ್ತವೆ’, ಎಂಬ ತಪ್ಪು ಸಂದೇಶವು ಹೋಗುತ್ತಿದೆ. ಇದು ಅತ್ಯಂತ ಖಂಡನೀಯವಾಗಿದೆ. ಚಲನಚಿತ್ರದ ಹೆಸರನ್ನು ಬದಲಾಯಿಸಬೇಕು, ಸಧ್ಯ ಇದೊಂದೇ ಬೇಡಿಕೆಯನ್ನು ಮಾಡುತ್ತಿದ್ದೇವೆ; ಆದರೆ ಈ ಚಲನಚಿತ್ರ ಪ್ರದರ್ಶನವಾದ ನಂತರ ಅದರಲ್ಲಿ ಯಾವುದಾದರು ಅಕ್ಷೇಪಾರ್ಹ ಪ್ರಸಂಗ ಅಥವಾ ಸಂಭಾಷಣೆ ಇದ್ದಲ್ಲಿ ತೀವ್ರ ಪ್ರತಿಭಟನೆಯನ್ನು ಮಾಡುವೆವು, ಎಂಬ ಸಂಕೇತವನ್ನು ಸಹ ಈ ಸಮಯದಲ್ಲಿ ನೀಡಲಾಯಿತು. ಚಲನಚಿತ್ರದ ಹೆಸರನ್ನು ಬದಲಾಯಿಸಬೇಕೆಂದು ಸೆನ್ಸಾರ್ ಬೋರ್ಡ ಮತ್ತು ಸರ್ಕಾರಕ್ಕೆ ಮನವಿಯನ್ನು ಕೊಡಲಾಯಿತು.
* ಪ್ರತಿಭಟನೆಯಲ್ಲಿನ ಇತರೆ ಬೇಡಿಕೆಗಳು : 1. `ಬಕರಿ ಈದ್’ನ ದಿನದಂದು ಆಗುವಂತಹ ಗೋಹತ್ಯೆಯನ್ನು ತಡೆಯಲು ಸರ್ಕಾರವು ಜಾಗರೂಕತೆಯಿಂದ ಇರಬೇಕು, ಅಲ್ಲಲ್ಲಿ ಗಸ್ತಿಗಾಗಿ ಪೊಲೀಸ ದಳವನ್ನು ನೇಮಿಸಬೇಕು. ಸರ್ಕಾರದ ಆದೇಶದ ಅನುಸಾರ ಅಧಿಕೃತ ಕಸಾಯಿಖಾನೆಯನ್ನು ಬಿಟ್ಟು ಇತರೆ ಎಲ್ಲಿಯೂ ಪ್ರಾಣಿಗಳ ಹತ್ಯೆಯನ್ನು ಮಾಡಕೂಡದು, ಇದಕ್ಕಾಗಿ `ಬಕರಿ ಈದ್’ನ ನಿಮಿತ್ತ ಕೆಲಕಾಲದ ಸಲುವಾಗಿ ಕಸಾಯಿಖಾನೆ ನಿರ್ಮಾಣಮಾಡಲು ಅನುಮತಿಯನ್ನು ಕೊಡಬಾರದು.
2. ಉತ್ತರಪ್ರದೇಶದಲ್ಲಿನ ದೇವರಿಯಾದಲ್ಲಿ ಸರಕಾರಿ ಶಾಲೆಯ ಹೆಸರನ್ನು ಬದಲಾಯಿಸಿ ಅದನ್ನು `ಇಸ್ಲಾಮಿಯಾ ಪ್ರಾಯಮರೀ ಸ್ಕೂಲ್’ ಎಂದು ಮಾಡಲಾಗಿದೆ, ಹಾಗೆಯೇ ಇತರ 4 ಸರಕಾರ ಶಾಲೆಗಳಲ್ಲಿ ಶುಕ್ರವಾರ ರಜೆಯನ್ನು ಘೋಷಿಸಲಾಗಿದೆ, ಇದು ಭಾರತವನ್ನು ವ್ಯವಸ್ಥಿತವಾಗಿ `ಇಸ್ಲಾಮೀಕರಣ’ ಮಾಡುವ ಷಡ್ಯಂತ್ರದ ಒಂದು ಭಾಗವಾಗಿದೆ. ಆದ್ದರಿಂದ ಸರ್ಕಾರವು ದೇಶದಾದ್ಯಂತ ಈ ನಿಟ್ಟಿನಲ್ಲಿ ಎಲ್ಲಾ ಶಾಲೆಗಳಲ್ಲಿ ತನಿಖೆಯನ್ನು ಮಾಡಬೇಕು ಮತ್ತು ಭಾರತದ ಇಸ್ಲಾಮೀಕರಣವನ್ನು ತಡೆಗಟ್ಟಲು ಕಠೋರ ಕ್ರಮವನ್ನು ಕೈಗೊಳ್ಳಬೇಕು. ಎಂದು ಮನವಿಯನ್ನು ನೀಡಲಾಯಿತು. ಈ ಸಂಧರ್ಭದಲ್ಲಿ ಸದಾಶಿವ ಭಟ್, ಶರತ ಶೇಟ, ಕೃಷ್ಣ ಮೇಸ್ತ, ಪಾರ್ವತಿ ಭಟ್, ಮೋಹಿನಿ ಶೇಟ, ಜಯಲಕ್ಷೀ ಕಲ್ಗಲ್ ಮುಂತಾದವರು ಹಾಜರಿದ್ದರು.