ಹೊನ್ನಾವರ: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತದ್ದಳು ಎನ್ನಲಾಗಿದ್ದ ಶಿರಸಿ ಮೂಲದ ಗೀತಾ ಪಾಲನಕರ್ ನಿನ್ನೆ ಕಾಣೆಯಾಗಿದ್ದು ಇವಳ ಹುಡುಕಾಟಕ್ಕಾಗಿ ಕಾರ್ಯಾಚರಣೆ ನಡೆದಿತ್ತು.
ಇವಳು ನಿನ್ನೆ ಬೆಳಿಗ್ಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯಿಂದ ಹೊರ ಬಿದ್ದಿದ್ದಳೆಂದು ವರದಿಯಾಗಿತ್ತು. ಆದರೆ ಯಾವ ಕಡೆ ಹೋಗಿರಬಹುದು ಎಂಬುದನ್ನು ಊಹಿಸಲೂ ಸಾಧ್ಯವಾಗಿರಲಿಲ್ಲ.
ಆದರೆ ಇಂದು ಬೆಳಿಗ್ಗೆ ಹೊನ್ನಾವರ ತಾಲ್ಲೂಕಿನ ಕೋಣೆಕಾರ ಸಾಲಿಕೇರಿ ಬಳಿ ಗದ್ದೆಯಲ್ಲಿ ಗೀತಾ ಶವವಾಗಿ ಬಿದ್ದಿದ್ದಳು. ಎಲ್ಲಿಂದ ಬಂದಳು ಯಾರು ಎಂಬುದು ತಿಳಿಯದೆ ಕೆಲಕಾಲ ಜನ ಗಾಬರಿಗೊಂಡರು ಎನ್ನಲಾಗಿದೆ.
ಹೊನ್ನಾವರ ಪೋಲೀಸರು ಸ್ಥಳಕ್ಕೆ ಭೇಟಿನೀಡಿ ಕುಟುಂಬ ವರ್ಗದವರಿಗೆ ಮಾಹಿತಿಯನ್ನು ತಿಳಿಸಿದ್ದಾರೆ ಎಂದು ಸ್ಥಳೀಯರು ಸತ್ವಾಧಾರ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.