ಕುಮಟಾ: ಕೇವಲ ಶಿಕ್ಷಕಿಯಾಗಿರದೆ ಸಾಧನೆಯ ಮೂಲಕವೇ ಗುರುತಿಸಿಕೊಂಡಿರುವ ಸಾಧನಾ ಪೈ ಕೊಂಕಣ ಎಜುಕೇಷನ್ ಟ್ರಸ್ಟ್ ಪ್ರತಿ ವರ್ಷ ಕೊಡಮಾಡುವ ‘ವಿನಯ ಸ್ಮೃತಿ’ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ .
ದೈಹಿಕ ವೈಕಲ್ಯತೆ ನಡುವೆಯೂ ಕುಗ್ಗದ ಉತ್ಸಾಹ, ಮತ್ತೆ ಮತ್ತೆ ಓದಬೇಕೆನ್ನುವ ತುಡಿತ, ತಿಳಿಯಬೇಕೆನ್ನುವ ತವಕ ಇವೆಲ್ಲವುಗಳನ್ನು ರೂಢಿಸಿಕೊಂಡು ಮಕ್ಕಳಿಗೆ ಅತ್ಯುತ್ತಮ ಶಿಕ್ಷಕಿಯಾಗಿ ಮಾದರಿ ಶಿಕ್ಷಕಿ ಎನಿಸಿಕೊಂಡವರು ಸಾಧನ ಪೈ .
ಮಕ್ಕಳಿಗೆ ಹೊಸ ಹೊಸ ರೀತಿಯಲ್ಲಿ ನಾವೀನ್ಯತೆಯಿಂದ ಕೂಡಿದ ಶಿಕ್ಷಣವನ್ನು ಅಳವಡಿಸುವ ಮೂಲಕ ಮಕ್ಕಳನ್ನು ತನ್ನತ್ತ ಸೆಳೆದು ಶಿಕ್ಷಣದಲ್ಲಿ ಸಾಧನೆ ಮಾಡುವಂತೆ ಮಾಡಿದವರು ಸಾಧನ ಪೈ .
ಯಾವುದೇ ಸತ್ಕಾರ ಸನ್ಮಾನಗಳನ್ನು ಬಯಸದೆ ಇನ್ನೊಬ್ಬರ ಕುರಿತಾಗಿ ಚುಚ್ಚು ಮಾತುಗಳನ್ನು ಆಡದೆ ಸದಾ ನಗು ನಗುತ್ತಾ ಜೀವನ ಸಾಗಿಸುತ್ತಿರುವವ ಸಾಧನ ಪೈ ಅವರಿಗೆ ಈ ಗೌರವ ನಾಳೆ ದಿನಾಂಕ ೧೮/೦೮/೨೦೧೮ ರಂದು ಕೊಂಕಣ ಎಜ್ಯುಕೇಶನ್ ಟ್ರಸ್ಟ ನ ಸಭಾಭವನದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ .
ಇವರ ಈವರೆಗಿನ ಸಾಧನೆ ಹಾಗೂ ಕ್ರಿಯಾತ್ಮಕತೆ ಹಾಗೂ ಸರಳ ಸಜ್ಜನಿಕೆಯನ್ನು ಗಮನಿಸಿ ಈ ವರ್ಷದ ವಿನಯ ಸ್ಮೃತಿ ಪ್ರಶಸ್ತಿಯನ್ನು ಇವರಿಗೆ ನೀಡಲಾಗುತ್ತಿದ್ದು ದಿ. ವಿನಯಾ ಶಾನಭಾಗ ಅವರ ಸ್ಮರಣಾರ್ಥ ಈ ಪ್ರಶಸ್ತಿ ಪ್ರಧಾನವಾಗಲಿದೆ.