ಕುಮಟಾ: ಕುಮಟಾದಲ್ಲಿ ಮಾಜಿ ಪ್ರಧಾನಿ ಹಾಗೂ ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಭೆ ನಡೆಯಿತು. ಕುಮಟಾ ಹೃದಯ ಭಾಗ ಮೂರುಕಟ್ಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಜಿ ಜಿ ಹೆಗಡೆ ಮುಕ್ರ ವಕ್ತಾರರಾಗಿ ಮಾತನಾಡಿದರು.

ಮಾಜಿ ಪ್ರಧಾನಿ ದಿ. ವಾಜಪೇಯಿ ಅವರು ಸರಳ ವ್ಯಕ್ತಿತ್ವದ ಆದರ್ಶ ನಾಯಕ ಎಂದು ಡಾ. ಜಿ.ಜಿ ಹೆಗಡೆ ಹೇಳಿದರು. ‘ರಾಜಕೀಯ ಜೀವನದಲ್ಲಿ ಅತಿ ಎತ್ತರಕ್ಕೆ ಬೆಳೆದರೂ ಸಾಮಾನ್ಯ ವ್ಯಕ್ತಿಯಂತೆ ಜೀವನ ನಡೆಸಿದರು. ಲಕ್ಷಾಂತರ ಕಾರ್ಯಕರ್ತರು ದೇಶದ ಬಗ್ಗೆ ಕನಸು ಕಾಣಲು ಅವರು ಸ್ಫೂರ್ತಿಯಾಗಿದ್ದರು. ಪಕ್ಷ ಇಂದು ಈ ಮಟ್ಟಕ್ಕೆ ಬೆಳೆಯಲು ಅವರೇ ಕಾರಣ. ದೇಶದ ಪ್ರಗತಿಗೂ ಅಪಾರ ಕೊಡುಗೆ ನೀಡಿದರು. ರಸ್ತೆಗಳು ಅಭಿವೃದ್ಧಿ ಹೊಂದಿದ್ದು ಅವರ ಅವಧಿಯಲ್ಲಿಯೇ’ ಎಂದು ಹೇಳಿದರು.
IMG 20180817 WA0013

RELATED ARTICLES  ದೇಶದಲ್ಲಿ ಗಣನೀಯ ಏರಿಕೆ ಕಂಡ ಕೋವಿಡ್..!

ಶಾಸಕರಾದ ದಿನಕರ ಶೆಟ್ಟಿಯವರು ಮಾತನಾಡಿ ‘ನಮ್ಮಂತಹ ಲಕ್ಷಾಂತರ ಕಾರ್ಯಕರ್ತರಿಗೆ ವಾಜಪೇಯಿ ಆದರ್ಶವಾಗಿದ್ದಾರೆ. ಸರ್ವ ಧರ್ಮ, ಜಾತಿ, ಪಕ್ಷಗಳ ಮೇಲೆ ಪ್ರಭಾವ ಬೀರಿದ ನಾಯಕರಾಗಿದ್ದರು. 20 ಪಕ್ಷಗಳ ಮೈತ್ರಿ ಸರ್ಕಾರವನ್ನು ಯಶಸ್ವಿಯಾಗಿ ನಡೆಸಿದರು. ಒಳಗೊಳ್ಳುವಿಕೆಯ ರಾಜಕಾರಣ ಮಾಡಿದರು. ತಾತ್ವಿಕ ವಿರೋಧಗಳಿದ್ದರೂ ವೈಯಕ್ತಿಕ ಸಂಬಂಧಗಳನ್ನು ಉಳಿಸಿಕೊಂಡಿದ್ದರು’ ಎಂದರು.

RELATED ARTICLES  ಸಮುದ್ರದ ದಡಕ್ಕೆ ಬಂದ ಬೃಹತ್ ಗಾತ್ರದ ತಿಮಿಂಗಲದ ಶವ : ಹೊನ್ನಾವರ ತಾಲೂಕಿನಲ್ಲಿ ಘಟನೆ.

ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹಾಜರಿದ್ದರು. ಹಣತೆ ಹಚ್ಚಿ ನಮನ ಸಲ್ಲಿಸಲಾಯಿತು.